Travel Tips: ವಿಶ್ವದ ಈ ಸುಂದರ ದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಿ

ನೀವು ಈ ದೇಶಗಳಿಗೆ ಪ್ರವಾಸಕ್ಕೆ ಹೋದರೆ ಆಗ ನೀವು ನಿಗದಿತ ಪ್ರಯಾಣದ ಬಜೆಟ್‌ನಲ್ಲಿ ಹೆಚ್ಚು ಮೋಜಿನೊಂದಿಗೆ ಹೆಚ್ಚಿನ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ. 

ಹಣವಿರುವ ಜನರು ತಮ್ಮ ಪ್ರಯಾಣದ ಹವ್ಯಾಸವನ್ನು ಪೂರೈಸಲು ವೆಚ್ಚಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮಧ್ಯಮ ವರ್ಗದ ಜನರು ಕೈಗೆಟುಕುವ ಪ್ರವಾಸಗಳನ್ನು ಯೋಜಿಸುವ ಮೂಲಕ ಪ್ರಯಾಣವನ್ನು ಆನಂದಿಸಲು ಪ್ರಯತ್ನಿಸುತ್ತಾರೆ. ‘ದೇಶ ಸುತ್ತಿ ನೋಡಿ ಕೋಶ ಓದಿ ನೋಡು’ ಎಂಬ ಗಾದೆ ಮಾತಿನಂತೆ ಆರಾಮಾಗಿ ದೇಶವನ್ನು ಸುತ್ತಾಡಿಕೊಂಡು ಬರುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನಿಮಗೆ ಗೊತ್ತೆ ಅನೇಕ ದೇಶಗಳಿಗೆ ನೀವು ಕೇವಲ ಕಡಿಮೆ ದುಡ್ಡಿನಲ್ಲಿ ಪ್ರವಾಸ ಮಾಡಬಹುದು. ನಿಮ್ಮ ಬಜೆಟ್ ಗೆ ಹೊಂದುವಂತಹ ಪ್ರವಾಸವನ್ನು ಆಹ್ಲಾದಿಸಲು ಅನೇಕ ದೇಶಗಳಿವೆ. ಪ್ರಪಂಚದ ಹಲವು ದೇಶಗಳಲ್ಲಿ ಕರೆನ್ಸಿ ಭಾರತೀಯ ರೂಪಾಯಿಗಿಂತ ದುರ್ಬಲವಾಗಿದೆ. ಅಂದರೆ ನಮ್ಮ ರೂಪಾಯಿ ಮೌಲ್ಯವು ಆ ದೇಶಗಳ ಕರೆನ್ಸಿಗಿಂತ ಹೆಚ್ಚು. ಅಂದರೆ ನೀವು ಈ ದೇಶಗಳಿಗೆ ಪ್ರವಾಸಕ್ಕೆ ಹೋದರೆ ಆಗ ನೀವು ನಿಗದಿತ ಪ್ರಯಾಣದ ಬಜೆಟ್‌ನಲ್ಲಿ ಹೆಚ್ಚು ಮೋಜಿನೊಂದಿಗೆ ಹೆಚ್ಚಿನ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಐಸ್ಲ್ಯಾಂಡ್ ಅನ್ನು ವಿಶ್ವದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರಯಾಣದ ಉತ್ಸಾಹ ಹೊಂದಿರುವವರು ಯಾವಾಗಲಾದರೂ ಇಲ್ಲಿಗೆ ಭೇಟಿ ನೀಡಲೇಬೇಕು. ಉತ್ತರ ದೀಪಗಳು, ಜಲಪಾತಗಳು, ಹಿಮನದಿಗಳು, ‘ದಿ ವೆಸ್ಟ್‌ ಫೋರ್ಡ್ಸ್’ ಮತ್ತು ಫಿಲೊಲಾಜಿಕಲ್ ಮ್ಯೂಸಿಯಂ ಇಲ್ಲಿನ ಪ್ರಸಿದ್ಧ ಸ್ಥಳಗಳಾಗಿವೆ. ಇಲ್ಲಿ 1 ರೂ.ನ ಭಾರತೀಯ ರೂಪಾಯಿ ಬೆಲೆ 1.65 ಐಸ್ಲ್ಯಾಂಡಿಕ್ ಕ್ರೋನಾ ಆಗಿದೆ.

2 /5

ವಿಶ್ವಪ್ರಸಿದ್ಧ ಕಾಂಬೋಡಿಯಾ ತನ್ನ ಸುಂದರ ನೌಸರ್ಗಿಕ ಸೌಂದರ್ಯದಿಂದ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಈ ದೇಶವು ಅಂಕೋರ್ ವಾಟ್ ದೇವಾಲಯದಿಂದ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕಾಂಬೋಡಿಯಾದ ಕರೆನ್ಸಿ ಕಾಂಬೋಡಿಯನ್ ರಿಯಲ್. ಈ ದೇಶದಲ್ಲಿ ಒಂದು ಭಾರತೀಯ ರೂಪಾಯಿ ಬೆಲೆ 51.47 ಕಾಂಬೋಡಿಯನ್ ರಿಯಲ್ ಆಗಿದೆ. ಅಂದರೆ ಭಾರತೀಯ ರೂಪಾಯಿಗಿಂತಲೂ ಕಡಿಮೆ ಮೌಲ್ಯವನ್ನು ರಿಯಲ್ ಹೊಂದಿದೆ. ಹೀಗಾಗಿ ನೀವು ಇಲ್ಲಿ ಪ್ರವಾಸದ ಜೊತೆಗೆ ಹೆಚ್ಚು ಹೆಚ್ಚು ಶಾಪಿಂಗ್ ಕೂಡ ಮಾಡಬಹುದು.

3 /5

ಕಾಂಬೋಡಿಯಾದ ಅನೇಕ ಪ್ರಸಿದ್ಧ ಸ್ಥಳಗಳು ನಿಮಗೆ ನೋಡಲು ಸಿಗುತ್ತವೆ.  ಇಲ್ಲಿ ಕೋರ್ ಥಾಮ್, ಪೋನ್ ಪೋಹ್ನ ರಾಜಮನೆತನ, ಪ್ರೇಹ್ ಮನಿವೊಂಗ್ ರಾಷ್ಟ್ರೀಯ ಉದ್ಯಾನವನ, ಸಿಸೋಬಾತ್ ಕರ್ವ್ ಇನ್ನು ಮುಂತಾದ ಪ್ರಖ್ಯಾತ ಸ್ಥಳಗಳಿವೆ. ನೀವು ಕಾಂಬೋಡಿಯಾಗೆ ಭೇಟಿ ನೀಡಿದರೆ ಇಲ್ಲಿನ ಸೌಂದರ್ಯಕ್ಕೆ ಮನಸೋಲುವುದು ಗ್ಯಾರೆಂಟಿ.

4 /5

ಇಂಡೋನೇಷ್ಯಾದ ದ್ವೀಪಗಳು ತುಂಬಾ ಸುಂದರವಾಗಿ ಕಾಣುತ್ತವೆ. ಇಂಡೋನೇಷ್ಯಾದಲ್ಲಿರುವ ಬಾಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಒಂದು ಭಾರತೀಯ ರೂಪಾಯಿ ಇಲ್ಲಿ 194.25 ಇಂಡೋನೇಷಿಯನ್ ರೂಪಾಯಿಗೆ ಸಮ. ಹೀಗಾಗಿ ನೀವು ಕಡಿಮೆ ವೆಚ್ಚದಲ್ಲಿ ಇಂಡೋನೇಷ್ಯಾದ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

5 /5

ವಿಯೆಟ್ನಾಂ ತುಂಬಾ ಸುಂದರ ದೇಶ. ಪ್ರತಿಯೊಬ್ಬ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬೇಕು. ಇಲ್ಲಿನ ಪ್ರವಾಸಿಗರಿಗೆ ಸಂಸ್ಕೃತಿ ಮತ್ತು ಸ್ಥಳೀಯ ಆಹಾರ ತುಂಬಾ ಇಷ್ಟವಾಗಿದೆ. ಇಲ್ಲಿ ಒಂದು ಭಾರತೀಯ ರೂಪಾಯಿ  308.22 ವಿಯೆಟ್ನಾ ಮೀಸ್ ಡಾಂಗ್‌ಗೆ ಸಮ. ಅಂದರೆ ನೀವು ಭಾರತಕ್ಕಿಂತ ಕಡಿಮೆ ಬೆಲೆಗೆ ಆಹಾರ ಮತ್ತು ಪಾನೀಯಗಳನ್ನು ಆನಂದಿಸಬಹುದು. ಕಡಿಮೆ ದುಡ್ಡಿನಲ್ಲಿ ಹೆಚ್ಚು ಶಾಪಿಂಗ್ ಕೂಡ ಮಾಡಬಹುದು. ಹನೋಯಿ, ಹಾ ಲಾಂಗ್ ವೇ, ಹೋ ಚಿ ಮಿನ್ಹ್ ಸಿಟಿ ಇಲ್ಲಿನ ಪ್ರಸಿದ್ಧ ಸ್ಥಳಗಳಾಗಿವೆ. ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ನೀವು ಇಲ್ಲಿ ಬೀಚ್, ಸರೋವರ ಮತ್ತು ಜಂಗಲ್ ಸಫಾರಿಗಳನ್ನು ಅಗ್ಗದ ದರದಲ್ಲಿ ಆನಂದಿಸಬಹುದು.