Jio, Airtel, Vi: ಸದ್ಯ ಕೋಟ್ಯಾಂತರ ಬಳಕೆದಾರರ ನೆಚ್ಚಿನ ಟೆಲಿಕಾಂ ಪ್ಯಾಕೇಜ್ಗಳಾದ ಅನ್ಲಿಮಿಟೆಡ್ ಕಾಲ್, ದೈನಂದಿನ ಡೇಟಾ ಯೋಜನೆಗಳು ಸ್ಥಗಿತಗೊಳಿಸಬಹುದೇ ?
Jio, Airtel: ದೇಶದಲ್ಲಿ ಶೀಘ್ರದಲ್ಲೇ ರಿಲಯನ್ಸ್ ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ ಕಂಪನಿಗಳ ಅನಿಯಮಿತ ಕರೆ, ಡೇಟಾ ಯೋಜನೆಗಳು ಕೊನೆಗೊಳ್ಳಲಿವೆಯೇ? ಇಂತಹದೊಂದು ಅನುಮಾನ ಸದ್ಯ ವ್ಯಕ್ತವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅನ್ಲಿಮಿಟೆಡ್ ಕರೆ ಸೌಲಭ್ಯದ ಮೂಲಕ ದೇಶದಲ್ಲಿ ಟೆಲಿಕಾಂ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಶೀಘ್ರದಲ್ಲೇ ಈ ಪ್ಲಾನ್ಸ್ ನಿಲ್ಲಿಸಲಿದೆಯೇ? ಏರ್ಟೆಲ್, ವೋಡಾಫೋನ್-ಐಡಿಯಾ ಕೂಡ ಇದಕ್ಕೆ ಸಾಥ್ ನೀಡುತ್ತವೆಯೇ? ಇತ್ತೀಚೆಗೆ ಇಂತಹದೊಂದು ಊಹಾಪೋಹ ಎಲ್ಲೆಡೆ ಹರಿದಾಡುತ್ತಿದೆ.
ವಾಸ್ತವವಾಗಿ, ದೇಶದ ಪ್ರಸಿದ್ದ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ ಇತ್ತೀಚೆಗಷ್ಟೇ ತಮ್ಮ ಅನಿಯಮಿತ ಡೇಟಾ ಮತ್ತು ಕರೆ ಯೋಜನೆಗಳಲ್ಲಿನ ಸಂಭವನೀಯ ಬದಲಾವಣೆ ಬಗ್ಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗೆ ಪ್ರತಿಕ್ರಿಯಿಸಿವೆ.
ಪ್ರಿಪೇಯ್ಡ್ ಪ್ಲಾನ್ಸ್ ಗಳ ಸಂಭವನೀಯ ಬದಲಾವಣೆ ಬಗ್ಗೆ ಟ್ರಾಯ್ ಗೆ ಪ್ರತಿಕ್ರಿಯಿಸಿರುವ ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಪ್ರಸ್ತುತ ರಚನೆಯನ್ನು ಸಮರ್ಥಿಸಿಕೊಂಡಿವೆ.
ಈ ಕುರಿತಂತೆ ಟ್ರಾಯ್'ಗೆ ಪ್ರತಿಕ್ರಿಯಿಸಿರುವ ಏರ್ಟೆಲ್ ಕಂಪನಿ ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ಲಾನ್ಗಳು ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಧ್ವನಿ, ಡೇಟಾ ಮತ್ತು ಎಸ್ಎಮ್ಎಸ್ ಸೇವೆಗಳನ್ನು ಒದಗಿಸುತ್ತವೆ. ಇವು ಸರಳ ಮತ್ತು ಬಳಕೆದಾರ ಸ್ನೇಹಿ ಪ್ಲಾನ್ಗಳು ಎಂದು ತಿಳಿಸಿದೆ.
ಪ್ರಸ್ತುತ ಪ್ರಿಪೇಯ್ಡ್ ಪ್ಲಾನ್ಗಳ ಕುರಿತಂತೆ ರಿಲಯನ್ಸ್ ಜಿಯೋ ಸಮೀಕ್ಷೆ ನಡೆಸಿದ್ದು ಇದರಲ್ಲಿ 91% ಚಂದಾದಾರರು ಇವು ಅತ್ಯಂತ ಕೈಗೆಟುಕುವ ಪ್ಲಾನ್ಗಳು ಎಂದು ಭಾವಿಸಿರುವುದಾಗಿ ಉಲ್ಲೇಖಿಸಿದೆ.
ಕೇವಲ ಅನ್ಲಿಮಿಟೆಡ್ ಕರೆಗಳು ಮಾತ್ರವಲ್ಲದೆ ಈ ತಂತ್ರಜ್ಞಾನ ಯುಗದಲ್ಲಿ ಡೇಟಾ ಸೇವೆಗಳು ಕೂಡ ಬಹು ಮುಖ್ಯ. ಇದಕ್ಕೆ ಪ್ರಿಪೇಯ್ಡ್ ಪ್ಲಾನ್ಗಳಲ್ಲಿ ಒದಗಿಸುವ ಡೇಟಾ ಅನುಕೂಲಕರವಾಗಿದೆ ಎಂದು ಜಿಯೋ, ಏರ್ಟೆಲ್, ವಿಐ ಕಂಪನಿಗಳು ಪ್ರತಿಪಾದಿಸಿರುವುದಾಗಿ ತಿಳಿದುಬಂದಿದೆ.
ಪ್ರತ್ಯೇಕ ರೀಚಾರ್ಜ್ ಯೋಜನೆಗಳು ಗ್ರಾಹಕರು ತಮಗೆ ಅನುಕೂಲವಾದಂತೆ ಯೋಜನೆಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಲು ಅನುವು ಮಾಡಿಕೊಡುತ್ತವೆ. ಇನ್ನೂ ಬಹು ಪ್ರತ್ಯೇಕ ರೀಚಾರ್ಜ್ಗಳ ಅಗತ್ಯವಿಲ್ಲದೆಯೇ ಸಮಗ್ರ ಸೇವೆಯನ್ನು ಒದಗಿಸುವ ಉದ್ಯಮದ ಏಕೀಕೃತ ನಿಲುವು ಪ್ರಸ್ತುತ ಬಳಕೆದಾರರ ಅನುಭವವನ್ನು ತೊಂದರೆಗೊಳಿಸಬಹುದು ಎನ್ನಲಾಗಿದೆ.
ಅನ್ಲಿಮಿಟೆಡ್ ಕಾಲ್, ಡೇಟಾ ಪ್ಲಾನ್ಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ TRAI ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದಾಗ್ಯೂ, ಈ ಚರ್ಚೆ ಇನ್ನೂ ಕೂಡ ನಡೆಯುತ್ತಿದ್ದು, ಒಂದೊಮ್ಮೆ ಈ ನಿಟ್ಟಿನಲ್ಲಿ ಬದಲಾವಣೆಗಳು ಬಂದಿದ್ದೇ ಆದಲ್ಲಿ ಭಾರತದ ಟೆಲಿಕಾಂ ಉದ್ಯಮದ ಚಿತ್ರಣವೇ ಬದಲಾಗುವ ಸಂಭವವಿದೆ.