Smartphone: 20 ಸಾವಿರಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಟಾಪ್ 5 ಸ್ಮಾರ್ಟ್‌ಫೋನ್‌ಗಳು

20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ ಗಳ ವೈಶಿಷ್ಟ್ಯಗಳು ‘ಕಾಸಿಗೆ ತಕ್ಕ ಕಜ್ಜಾಯ’ದಂತಿದೆ.

ಇಂದು ಪ್ರತಿಯೊಬ್ಬರಿಗೂ ಉತ್ತಮ ಸ್ಮಾರ್ಟ್‌ಫೋನ್‌ ಬೇಕು. ಬಳಕೆಯಲ್ಲಿ ಗ್ರಾಹಕಸ್ನೇಹಿ, ವೈಶಿಷ್ಟ್ಯದಲ್ಲಿ ಅತ್ಯುತ್ತಮ, ಬ್ಯಾಟರಿ ಬಾಳಿಕೆಯಲ್ಲಿ ಇತರ ಫೋನಿಗಿಂತಲೂ ಉತ್ತಮವಾಗಿರುವ ಸ್ಮಾರ್ಟ್‌ಫೋನ್‌ ಗಳನ್ನು ಖರೀದಿಸಲು ಬಹುತೇಕರು ಇಷ್ಟಪಡುತ್ತಾರೆ. ಹೆಚ್ಚು ಸ್ಟೋರೇಜ್, ಅತ್ಯುತ್ತಮ ಪ್ರೊಸೆಸರ್‌, ಗುಣಮಟ್ಟದ ಕ್ಯಾಮೆರಾ ಇರುವ ಫೋನ್ ಖರೀದಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಬಜೆಟ್ ಬೆಲೆಯಲ್ಲಿ ಅನೇಕ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಂದು ನಾವು ನಿಮಗೆ ಅಂತಹ 5 ಟಾಪ್ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವುಗಳ ಬೆಲೆ ನಿಮಗೆ ಬಜೆಟ್ ಗೆ ಹೊಂದುವಂತಿವೆ. 20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ ಗಳ ವೈಶಿಷ್ಟ್ಯಗಳು ‘ಕಾಸಿಗೆ ತಕ್ಕ ಕಜ್ಜಾಯ’ದಂತಿದೆ. ಈ ಫೋನ್ ಗಳನ್ನು ಗೇಮಿಂಗ್‌ಗೆ ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ 8GB RAM, ಬಲವಾದ ಡಿಸ್ಪ್ಲೇ ಮತ್ತು ದೀರ್ಘಕಾಲ ಬಾಳಿಕೆಯ ಬ್ಯಾಟರಿಯನ್ನು ಹೊಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Oppo F17 5G: ನೀವು 25,990 ರೂ. ಬೆಲೆಯ ಈ Oppo ಸ್ಮಾರ್ಟ್‌ಫೋನ್ ಅನ್ನು 19,990 ರೂ.ಗಳಿಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನೀವು 1,000 ರೂ. ಮರಳಿ ಪಡೆಯುತ್ತೀರಿ. ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ನೀವು 14,250 ರೂ.ವರೆಗೆ ಉಳಿಸಬಹುದು. ಇವೆಲ್ಲಾ ಆಫರ್ ಗಳ ಮೂಲಕ ನೀವು ಈ ಫೋನ್ ಅನ್ನು ಕೇವಲ 4,740 ರೂ.ಗೆ ಖರೀದಿಸಬಹುದು.

2 /5

OnePlus Nord CE 5G: ಈ OnePlus ಫೋನ್‌ನ ಬೆಲೆ 24,999 ರೂ. ಇದೆ. ಇದರ ಜೊತೆಗೆ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ 16,900 ರೂ.ವರೆಗೂ ಉಳಿಸಬಹುದು. ಆಗ ಈ ಫೋನ್‌ನ ಬೆಲೆ 8,099 ರೂ. ಆಗುತ್ತದೆ. ಇದರ ಜೊತೆಗೆ ಕೆಲ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳು ಕೂಡ ಲಭ್ಯವಿವೆ.

3 /5

Realme x7 pro: ನೀವು ರಿಯಲ್ ಮಿಯ ಈ 5G ಫೋನ್ ಅನ್ನು 32,999 ರೂ. ಬದಲಿಗೆ 29,999 ರೂ.ಗೆ ಖರೀದಿಸಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಸಿ ನೀವು 750 ರೂ. ರಿಯಾಯಿತಿ ಪಡೆಯುತ್ತೀರಿ ಮತ್ತು ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ನೀವು 14,250 ರೂ.ಗೆ ಹೆಚ್ಚು ಉಳಿಸಬಹುದು. ಹೀಗೆ 15 ಸಾವಿರ ರೂ.ಗೆ ಈ ಫೋನ್ ಅನ್ನು ನೀವು ಮನೆಗೆ ಕೊಂಡೊಯ್ಯಬಹುದು.

4 /5

Vivo V20 SE: ನೀವು ವಿವೋದ ಈ 128GB ROM ಫೋನ್ ಅನ್ನು 19,299 ರೂ.ಗೆ ಖರೀದಿಸಬಹುದು. ಈ ಡೀಲ್‌ನಲ್ಲಿ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 965 ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಆಗ ಈ ಫೋನ್‌ನ ಬೆಲೆ 18,334 ರೂ.ಗೆ ಲಭ್ಯವಿರುತ್ತದೆ.

5 /5

Oppo Reno 5Pro 5G: 38,990 ರೂ. ಬೆಲೆಯ ಈ ಫೋನ್ ಅನ್ನು 35,990 ರೂ.ಗೆ ನೀವು ಪಡೆಯಬಹುದು. ಅಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ, ನೀವು 1,800 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದು. ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ನೀವು 14,250 ರೂ.ವರೆಗೆ ಉಳಿಸಲು ಸಾಧ್ಯವಾಗುತ್ತದೆ. ಈ ಎಲ್ಲಾ ಆಫರ್ ಪಡೆದರೆ ನಿಮಗೆ ಈ ಫೋನ್ 19,940 ರೂ.ಗೆ ಖರೀದಿಸಲು ಸಾಧ್ಯವಾಗುತ್ತದೆ.