Top-4 Smartphones Under Rs 6000 : ಆಪಲ್ನ ಐಫೋನ್ 13 ಸರಣಿ ಮತ್ತು ಸ್ಯಾಮ್ಸಂಗ್ನ ಗ್ಯಾಲಕ್ಸಿ Z ಫೋಲ್ಡ್ 3 ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ.
ನವದೆಹಲಿ : Top-4 Smartphones Under Rs 6000 : ಆಪಲ್ನ ಐಫೋನ್ 13 ಸರಣಿ ಮತ್ತು ಸ್ಯಾಮ್ಸಂಗ್ನ ಗ್ಯಾಲಕ್ಸಿ Z ಫೋಲ್ಡ್ 3 ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಫೋನ್ಗಳಲ್ಲಿನ ವೈಶಿಷ್ಟ್ಯಗಳು ಅದ್ಭುತವಾಗಿದೆ, ಆದರೆ ಬೆಲೆ ಅಷ್ಟೇ ಹೆಚ್ಚಾಗಿದೆ. ಸಾಮಾನ್ಯರಿಗೆ ಈ ಫೋನ್ ಖರೀದಿಸುವುದು ತುಂಬಾ ಕಷ್ಟ. ಇಂದು ನಾವು 6 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸಿಗುವ 4 ಸ್ಮಾರ್ಟ್ಫೋನ್ ಗಳ ಬಗ್ಗೆ ತಿಳಿಸಲಿದ್ದೇವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಗಳನ್ನು ಹೊಂದಿರುವ ಫೋನ್ ಅನ್ನು ಹುಡುಕುತ್ತಿರುವವರಿಗೆ ಆಯ್ಕೆಗಳು ಇಲ್ಲಿವೆ. ಈ ಫೋನ್ಗಳ ಬೆಲೆ 6 ಸಾವಿರ ರೂಪಾಯಿಗಳಿಗಿಂತ ಕಡಿಮೆ ಮತ್ತು ಅಧಿಕ ವೈಶಿಷ್ಟ್ಯಗಳನ್ನು ಕೂಡ ಹೊಂದಿವೆ.
ಮೈಕ್ರೋಮ್ಯಾಕ್ಸ್ ಐಒನ್ ಮೈಕ್ರೋಮ್ಯಾಕ್ಸ್ನಅತ್ಯಂತ ಜನಪ್ರಿಯ ಫೋನ್ ಆಗಿದೆ. ಇದನ್ನು ಫ್ಲಿಪ್ಕಾರ್ಟ್ನಲ್ಲಿ 5299 ರೂಗಳಲ್ಲಿ ಖರೀದಿಸಬಹುದು. ಈ ಫೋನ್ 5.45 ಇಂಚಿನ ಡಿಸ್ಪ್ಲೇ ಹೊಂದಿದೆ. 2GB RAM ಮತ್ತು 16GB ಸ್ಟೋರೇಜ್ ಲಭ್ಯವಿದೆ. ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ, ಇದನ್ನು 64 ಜಿಬಿ ವರೆಗೆ ವಿಸ್ತರಿಸಬಹುದು. ಮೈಕ್ರೊಮ್ಯಾಕ್ಸ್ iOne 5MP ಹಿಂಭಾಗ ಮತ್ತು 5MP ಮುಂಭಾಗದ ಕ್ಯಾಮರಾ ಹೊಂದಿದೆ. 2200 mAh ಬ್ಯಾಟರಿಯನ್ನು ಫೋನ್ನಲ್ಲಿ ನೀಡಲಾಗಿದೆ.
ಕಾರ್ಬನ್ ಎಕ್ಸ್ 21 ಅನ್ನು ಫ್ಲಿಪ್ಕಾರ್ಟ್ನಲ್ಲಿ ರೂ 5299 ಕ್ಕೆ ಖರೀದಿಸಬಹುದು. ಇದು 5.45 ಇಂಚಿನ ಡಿಸ್ಪ್ಲೇ ಹೊಂದಿದೆ. 2GB RAM ಮತ್ತು 32GB ಸ್ಟೋರೇಜ್ ಲಭ್ಯವಿದೆ. ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ, ಅವರು 256 ಜಿಬಿ ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಸಬಹುದು. 3000mAh ಬ್ಯಾಟರಿಯನ್ನು ಫೋನಿನಲ್ಲಿ ನೀಡಲಾಗಿದೆ. KARBONN X21 8MP+AI ಎಐ ರಿಯರ್ ಕ್ಯಾಮೆರಾ ಮತ್ತು 5 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ನೀವು ಫ್ಲಿಪ್ಕಾರ್ಟ್ನಲ್ಲಿ LAVA Z61 Pro ಅನ್ನು ರೂ 5777 ಕ್ಕೆ ಖರೀದಿಸಬಹುದು. ಇದು 2GB RAM ಮತ್ತು 16GB ಸ್ಟೋರೇಜ್ ಹೊಂದಿದೆ. ಫೋನ್ 5.45 ಇಂಚಿನ ಡಿಸ್ಪ್ಲೇ ಹೊಂದಿದೆ. 8MP ರಿಯರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಇದೆ.
ಪ್ಯಾನಾಸೋನಿಕ್ ELUGA I6 ಅನ್ನು ಫ್ಲಿಪ್ ಕಾರ್ಟ್ ನಲ್ಲಿ 5,490 ರೂ.ಗೆ ಖರೀದಿಸಬಹುದು. ಇದು 5.45 ಇಂಚಿನ ಡಿಸ್ಪ್ಲೇ, 8MP ರಿಯರ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಪ್ಯಾನಾಸಾನಿಕ್ ELUGA I6 3000mAh ಬ್ಯಾಟರಿಯನ್ನು ಹೊಂದಿದೆ. ಫೋನ್ 2GB RAM ಮತ್ತು 16GB ಸ್ಟೋರೇಜ್ ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ, ಇದನ್ನು 256 ಜಿಬಿಗೆ ಹೆಚ್ಚಿಸಬಹುದು.