Ram Navami 2023 Horoscope: ನಾಳೆ ಶ್ರೀರಾಮನವಮಿ, ಈ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ, ಸಿಗಲಿದೆ ಅಪಾರ ಧನ-ಸಂಪತ್ತು!

Ram Navami 2023: ಈ ಬಾರಿಯ ರಾಮನವಮಿಯ ಉತ್ಸವ ತುಂಬಾ ವಿಶೇಷವಾಗಿದೆ. ಗ್ರಹಗಳು ಹಾಗೂ ನಕ್ಷತ್ರಗಳ ಸ್ಥಿತಿಗತಿ ಲೆಕ್ಕಾಚಾರದಲ್ಲಿ ಕೆಲ ರಾಶಿಗಳ ಜನರ ಅದೃಷ್ಟ ಮುಗಿಲು ಮುಟ್ಟಲಿದೆ. ಇದರಿಂದ ಈ ಜನರ ಜೀವನದಲ್ಲಿ ಅಪಾರ ಧನಸಂಪತ್ತು ಹರಿದು ಬರಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಒಮ್ಮೆ ತಿಳಿದುಕೊಳ್ಳೋಣ ಬನ್ನಿ, 
 

Ram Navami 2023 Horoscope: ಪ್ರತಿ ವರ್ಷ ಚೈತ್ರ ಮಾಸದ ನವಮಿ ತಿಥಿಯಲ್ಲಿ ಶ್ರೀ ರಾಮನವಮಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಶ್ರೀ ರಾಮನ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಇದಲ್ಲದೆ ಚೈತ್ರ ನವರಾತ್ರಿಯ ಪ್ರವಚನವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿಯ ರಾಮನವಮಿಯ ದಿನ ತುಂಬಾ ವಿಶೇಷವಾಗಿದೆ. ಏಕೆಂದರೆ ರಾಮ ನವಮಿಯ ದಿನ ಅದ್ಭುತ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಇದಲ್ಲದೆ ಗ್ರಹಗಳ ಸ್ಥಿತಿಗತಿ ಕೂಡ ಒಂದು ವಿಭಿನ್ನ ಸಂಯೋಗವನ್ನು ರೂಪಿಸುತ್ತಿವೆ. ಈ ಅತ್ಯಂತ ವಿಶಿಷ್ಟ ಯೋಗದ ಕಾರಣ ರಾಮನನವಮಿಯ ಪರ್ವ ಹಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಈ ರಾಶಿಗಳ ಜನರಿಗೆ ವ್ಯಾಪಾರ, ನೌಕರಿಯಲ್ಲಿ ಅಪಾರ ಧನ ಲಾಭ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Surya Gochara 2023: ಯುವಾವಸ್ಥೆಗೆ ಸೂರ್ಯನ ಪ್ರವೇಶ, 4 ರಾಶಿಗಳ ಜನರ ಭಾಗ್ಯ ಬದಲಾವಣೆ, ಅಪಾರ ಧನಲಾಭದ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

1 /5

ಮೇಷ ರಾಶಿ: ಈ ಬಾರಿಯ ರಾಮನವಮಿ ಮೇಷ ರಾಶಿಯ ಜಾತಕದವರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ರಾಶಿಯಲ್ಲಿ ಶುಕ್ರ ಹಾಗೂ ರಾಹುವಿನ ಯುತಿ ನೆರವೇರಿದೆ. ಹೀಗಾಗಿ ಈ ರಾಶಿಯ ಜಾತಕದವರಿಗೆ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಅಪಾರ ಚಣ ಲಾಭ ಉಂಟಾಗಲಿದ್ದು ಶ್ರೀ ಕೌಶಲ್ಯಾನಂದನನ ಕೃಪೆಯಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ.  

2 /5

ವೃಷಭ ರಾಶಿ: ಶ್ರೀರಾಮ ನವಮಿಯ ದಿನ ವೃಷಭ ರಾಶಿಯ ಜಾತಕದವರ ಪಾಲಿಗೂ ಕೂಡ ತುಂಬಾ ವಿಶೇಷವಾಗಿರಲಿದೆ. ಕೌಶಲ್ಯಾ ನಂದನ ಶ್ರೀ ರಾಮನ ಕೃಪೆಯಿಂದ ನಿಮ್ಮ ಎಲ್ಲಾ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಹೇಗಿರುವಾಗ ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ.   

3 /5

ಸಿಂಹ ರಾಶಿ: ಈ ಬಾರಿಯ ರಾಮನವಮಿಯ ಪರ್ವ ಸಿಂಹ ರಾಶಿಯ ಜಾತಕದವರ ಪಾಲಿಗೆ ಒಳ್ಳೆಯ ದಿನಗಳನ್ನು ಹೊತ್ತು ತರಲಿದೆ. ಕುಟುಂಬದ ಜೊತೆಗೆ ನೀವು ಒಳ್ಳೆಯ ಕಾಲ ಕಳೆಯುವಿರಿ. ಕುಟುಂಬ ಸದಸ್ಯರ ಜೊತೆಗೂಡಿ ಯಾವುದಾದರೊಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ನೀವು ಯೋಜನೆ ರೂಪಿಸುವ ಸಾಧ್ಯತೆ ಇದೆ.   

4 /5

ತುಲಾ ರಾಶಿ: ಕೌಶಲ್ಯಾ ನಂದನ ಶ್ರೀ ರಾಮನ ಜನ್ಮೋತ್ಸವದ ದಿನ ತುಲಾ ರಾಶಿಯ ಜಾತಕದವರಿಗೆ ಅಪಾರ ಖುಷಿಗಳನ್ನು ಹೊತ್ತು ತರಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗುವುದರ ಜೊತೆಗೆ, ನಿಮ್ಮ ಹೂಡಿಕೆ ನಿಮಗೆ ಸಾಕಷ್ಟು ಲಾಭಗಳನ್ನು ತರಲಿದೆ.   

5 /5

ಕುಂಭ ರಾಶಿ: ಮೀನ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಗುರುವಿನ ಮೈತ್ರಿಕ ಕಾರಣ ಗಜಕೇಸರಿ, ನೀಚ್ ಭಂಗ್ ಹಾಗೂ ಬುದ್ಧಾದಿತ್ಯ ಯೋಗಗಳು ಮತ್ತು ಹಂಸ ಯೋಗದಂತಹ ಮಹಾ ಯೋಗಗಳು ರೂಪುಗೊಳ್ಳುತ್ತಿವೆ. ಹೀಗಿರುವಾಗ ಕುಂಭ ಜಾತಕದವರಿಗೆ ಇದರಿಂದ ಅಪಾರ ಲಾಭ ಸಿಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಬಿಸ್ನೆಸ್ ನಲ್ಲಿ ಲಾಭದ ಸಂಕೇತಗಳಿವೆ. ನೌಕರಿಯಲ್ಲಿಯೂ ಕೂಡ ನಿಮಗೆ ಗುಡ್ ನ್ಯೂಸ್ ಸಿಗುವ ಎಲ್ಲಾ ಸಾಧ್ಯತೆಗಳಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ನಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)