ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್.. ತೆಲುಗಿನ ಟಾಪ್ ಹೀರೋ ಜೊತೆ ಅಫೇರ್.. ಅದೇ ಅವಳಿಗೆ ಶಾಪ..!

Sameera Reddy : ಸ್ಯಾಂಡಲ್‌ವುಡ್‌, ಟಾಲಿವುಡ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತ ಪಡೆದಿದ್ದ ನಟಿಯೊಬ್ಬರು ಸತತ ಯಶಸ್ಸಿನ ನಡುವೆಯೂ ಒಂದು ವರ್ಷದೊಳಗೆ ಇದ್ದಕ್ಕಿದ್ದಂತೆ ಪರದೆಯಿಂದ ಕಣ್ಮರೆಯಾದರು. ಯಾರು ಆ ನಟಿ, ಏನಾಯ್ತು ಅವರ ಜೀವನದಲ್ಲಿ..? ಬನ್ನಿ ನೋಡೋಣ..
 

1 /8

ತೆಲುಗು ಚಿತ್ರರಂಗದಲ್ಲಿ ಹಲವು ನಾಯಕಿಯರು ತಮ್ಮ ಛಾಪು ಮೂಡಿಸಿದ್ದಾರೆ. ಅವರಲ್ಲಿ ಕೆಲವರು ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದಾರೆ. ಆದರೆ ನಟಿಯೊಬ್ಬರು ಸ್ಟಾರ್‌ಗಿರಿ ಪಡೆದರೂ ಸಹ ವರ್ಷಗಳ ಹಿಂದೆ ಸಿನಿರಂಗದಿಂದ ಸಂಪೂರ್ಣವಾಗಿ ದೂರವಾದರು. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..  

2 /8

ನಾವು ಹೇಳುತ್ತಿರುವುದು, ವರದನಾಯಕ ಸಿನಿಮಾ ಖ್ಯಾತಿಯ ʼಸಮೀರಾ ರೆಡ್ಡಿʼಯವರ ಬಗ್ಗೆ.. ಸಮೀರಾ ಅವರು ಸಹ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿಗಳಿಂದ ಆಕೆಗೆ ನೋವಾಗಿತ್ತು. ಸದಾ ಇಂತಹ ವದಂತಿಗಳಿಂದಲೇ ಇಂಡಸ್ಟ್ರಿಯಲ್ಲಿ ಇರುವುದಕ್ಕಿಂತ ಸಿನಿಮಾದಿಂದ ದೂರ ಉಳಿಯುವುದು ಒಳ್ಳೆಯದು ಎಂದು ನಿರ್ಧರಿಸಿ, ಸಿನಿರಂಗವನ್ನೇ ಬಿಟ್ಟರು.  

3 /8

2002 ರಲ್ಲಿ ಸೊಹೈಲ್ ಖಾನ್ ಜೊತೆಗಿನ ʼಮೈನೆ ದಿಲ್ ತುಜ್ಕೋ ದಿಯಾʼ ಚಿತ್ರದ ಮೂಲಕ ನಟನಾ ಕ್ಷೇತ್ರವನ್ನು ಪ್ರವೇಶಿಸಿದ ಸಮೀರಾ ರೆಡ್ಡಿ ʼಪ್ಲಾನ್ʼ, ʼಮುಸಾಫಿರ್ʼ ನಂತಹ ಚಿತ್ರಗಳ ಮೂಲಕ ಉತ್ತಮ ನಟಿ ಎಂದು ಗುರುತಿಸಿಕೊಂಡರು. ಅಲ್ಲದೆ, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದರು.   

4 /8

ಕಿಚ್ಚ ಸುದೀಪ್‌ ನಟನೆಯ ವರದನಾಯಕ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು., ʼನರಸಿಂಹುಡುʼ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ತೆಲುಗು ಸಿನಿರಂಗದಲ್ಲಿ ಜೂನಿಯರ್‌ ಎನ್‌ಟಿಆರ್‌ ಮತ್ತು ಸಮೀರಾ ರೆಡ್ಡಿ ಜೋಡಿಗೆ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಇದೆ.  

5 /8

ಈ ಹಿಂದೆ ಸಂದರ್ಶನವೊಂದರಲ್ಲಿ ಸಮೀರಾ ತಮ್ಮ ಮೇಲೆ ಬಂದ ವದಂತಿಗಳು ತಮ್ಮ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರಿದ್ದವು ಎಂಬುದನ್ನು ವಿವರಿಸಿದ್ದಾರೆ. “ತಾರಕ್ ಅತ್ಯಂತ ಜನಪ್ರಿಯ ನಟನಾಗಿರುವುದರಿಂದ ಈ ಸುದ್ದಿ ವೈರಲ್ ಆಗಿದೆ. ಜೂನಿಯರ್ ಎನ್ ಟಿಆರ್ ನನಗೆ ಅನೇಕ ವಿಷಯಗಳನ್ನು ಕಲಿಸಿದರು.   

6 /8

ತೆಲುಗು ಚಿತ್ರಗಳ ವಿಚಾರಕ್ಕೆ ಬಂದರೆ ನನಗೇನೂ ಗೊತ್ತಿರಲಿಲ್ಲ. ಆದರೆ ತಾರಕ್ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂಬ ಗಾಳಿಸುದ್ದಿ ದೊಡ್ಡ ವಿಷಯವಾಗಿ ಪರಿಣಮಿಸಿದೆ. ಎಲ್ಲೆಡೆ ಚರ್ಚೆಯಾಗುತ್ತಿದ್ದಂತೆ ನನ್ನ ಮನೆಯವರೂ ಬೇಸರಗೊಂಡಿದ್ದರು. ಇದಕ್ಕೆ ಅಪ್ಪನೇ ಉತ್ತರಿಸಬೇಕಿತ್ತು. ಒಮ್ಮೆ ಸಂಬಂಧಿಕರು ನನ್ನ ಬಗ್ಗೆ ಅವರನ್ನು ಪ್ರಶ್ನಿಸಿದರು ಅಂತ ಸಮೀರ ನೋವು ತೋಡಿಕೊಂಡರು.   

7 /8

ಈ ವಿಚಾರದಿಂದ ಸಾಕಷ್ಟು ನೋವು ಅನುಭವಿಸಿದ ಸಮೀರಾ ರೆಡ್ಡಿ ತೆಲುಗು ಸಿನಿ ರಂಗವನ್ನು ಸಂಪೂರ್ಣವಾಗಿ ತೊರೆಯಲು ನಿರ್ಧರಿಸಿದ್ದರು. ಅಲ್ಲದೆ, ನನ್ನ ಸಿನಿಮಾ ಮತ್ತು ನನ್ನ ಪ್ರತಿಭೆಯ ಬಗ್ಗೆ ಜನ ಮಾತನಾಡಲಿಲ್ಲ... ಎಲ್ಲರೂ ಎನ್‌ಟಿಆರ್‌ ಮತ್ತು ನನ್ನ ನಡುವಿನ ಸುಳ್ಳು ಸಂಬಂಧದ ಕುರಿತು ಪ್ರಶ್ನಿಸಿದರು.. ಈ ಕಾರಣಗಳಿಂದ ಟಾಲಿವುಡ್ ನಿಂದ ದೂರವಾಗಿದ್ದೇನೆ ಎಂದು ವಿವರಿಸಿದ್ದಾರೆ.  

8 /8

ಸಮೀರಾ ರೆಡ್ಡಿ ತೆಲುಗು ಚಿತ್ರಗಳನ್ನು ಬಿಟ್ಟು ಬಾಲಿವುಡ್‌ನಲ್ಲಿ "ರೇಸ್" ಮತ್ತು "ಆಕ್ರೋಷ್" ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು ಮತ್ತು ಮಲಯಾಳಂ ಚಿತ್ರೋದ್ಯಮಗಳಲ್ಲಿ ನಟಿಸುವುದನ್ನು ಮುಂದುವರೆಸಿದರು. ಅವರು 2014 ರಲ್ಲಿ ಅಕ್ಷಯ್ ವರ್ದೆ ಅವರನ್ನು ವಿವಾಹವಾದರು. ಆ ನಂತರ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.