ದೀಪಾವಳಿ ದಿನ ಈ ವಸ್ತುಗಳು ಕಣ್ಣಿಗೆ ಬಿದ್ದರೆ ಅತ್ಯಂತ ಶುಭ .!

ದೀಪಾವಳಿ ದಿನ ಮುಂಜಾನೆ ಈ ವಸ್ತುಗಳು ಕಂಡುಬಂದರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. 

ಬೆಂಗಳೂರು : ದೀಪಾವಳಿಯ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮೀ  ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.  ದೀಪಾವಳಿ ದಿನ ಮುಂಜಾನೆ ಈ ವಸ್ತುಗಳು ಕಂಡುಬಂದರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳನ್ನು ನೋಡಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕಿದಂತೆ ಎಂದು ಹೇಳಲಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಒಂದು ಸಸ್ಯವು ಮನೆಯ ಹೊರಗೆ ಮೊಳಕೆಯೊಡೆಯುತ್ತಿದ್ದರೆ, ಅದನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮನೆಯ ಮುಂದೆ ಗಿಡ ಬೆಳೆಯುತ್ತಿದ್ದರೆ, ಬಡತನ  ನಿರ್ಮೂಲವಾಗುತ್ತದೆ ಎಂದರ್ಥ. 

2 /6

ವಾಸ್ತು ತಜ್ಞರ ಪ್ರಕಾರ, ದೀಪಾವಳಿಯ ಬೆಳಿಗ್ಗೆ ಮನೆಯಿಂದ ಹೊರಡುವ ವೇಳೆ ತಕ್ಷಣ  ಕುದುರೆಯ ಲಾಳ ಕಣ್ಣಿಗೆ ಬಿದ್ದರೆ ಅದು ಶುಭ ಸಂಕೇತವಾಗಿರುತ್ತದೆ.  ಅಲ್ಲದೆ, ಅಲ್ಲಿಗೆ ವ್ಯಕ್ತಿಯ ಕಷ್ಟದ ದಿನಗಳು ದೂರ ಸರಿಯಲಿವೆ ಎಂದರ್ಥ. 

3 /6

ಮನೆಯ ಸುತ್ತಲೂ ಚಿಟ್ಟೆಗಳನ್ನು ನೋಡಿದರೆ, ನಿಮ್ಮ ಒತ್ತಡದ ಸಮಯವು ಕೊನೆಗೊಳ್ಳಲಿದೆ ಎನ್ನುವುದನ್ನು ಸೂಚಿಸುತ್ತದೆ. ಮಾನಸಿಕ ನೆಮ್ಮದಿ  ಸಿಗಲಿದೆ. 

4 /6

ಮನೆಯ ಹೊರಗೆ ಬೆಳಗ್ಗೆ ಕೋತಿ ಕಾಣಿಸಿಕೊಂಡರೆ ಕೂಡಾ ಶುಭ ಚಿಹ್ನೆ.  ಹೀಗಾದರೆ ಕುಬೇರ ದೇವನ ಕೃಪೆಯಿಂದ ಬಡತನ ಬಹುಬೇಗ ನಿವಾರಣೆಯಾಗಲಿದೆ ಎಂದರ್ಥ.  

5 /6

ದೀಪಾವಳಿಯ ಬೆಳಿಗ್ಗೆ, ವ್ಯಕ್ತಿಯು ನೀರು ತುಂಬುತ್ತಿರುವುದನ್ನು ನೋಡಿದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಮನೆಯಿಂದ ಹೊರಗೆ ಹೋಗುತ್ತಿರುವ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. 

6 /6

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಬೆಳಿಗ್ಗೆ ತೆಂಗಿನಕಾಯಿಯನ್ನು ನೋಡಿದರೆ, ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  ತೆಂಗಿನಕಾಯಿ ಕಂಡರೆ ಲಕ್ಷ್ಮೀ ದೇವಿ ಮತ್ತು ಕುಬೇರ ದೇವನ ಕೃಪೆಯಿಂದ ನಿಮ್ಮ ದಿನಗಳು ಶೀಘ್ರದಲ್ಲೇ ಬದಲಾಗಲಿವೆ.