ಸಮೀಪದ ವಾಕ್ಸಿನೇಶನ್ ಸೆಂಟರ್ ಯಾವುದು ಎಂದು ತಿಳಿಯಲು ವಾಟ್ಸಾಪ್ ನಲ್ಲಿ ಹೀಗೆ ಟೈಪ್ ಮಾಡಿ..!

ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುವುದೇ ಕರೋನಾ  ಮಹಾಮಾರಿಯಿಂದ ಬಚಾವ್ ಆಗುವ ಏಕಮೇವ ಅಸ್ತ್ರವಾಗಿದೆ. ಕರೊನಾ ಲಸಿಕೆ ಈಗ 18ರ ಮೇಲ್ಪಟ್ಟ ವಯೋಮಾನದವರಿಗೂ ಹಾಕಿಸಿಕೊಳ್ಳಬಹುದಾಗಿದೆ. 

ನವದೆಹಲಿ : ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುವುದೇ ಕರೋನಾ (Coronavirus)  ಮಹಾಮಾರಿಯಿಂದ ಬಚಾವ್ ಆಗುವ ಏಕಮೇವ ಅಸ್ತ್ರವಾಗಿದೆ. ಕರೊನಾ ಲಸಿಕೆ (COVID Vaccine) ಈಗ 18ರ ಮೇಲ್ಪಟ್ಟ ವಯೋಮಾನದವರಿಗೂ ಹಾಕಿಸಿಕೊಳ್ಳಬಹುದಾಗಿದೆ.  ಹಾಗಾಗಿ, ಆದಷ್ಟು ಬೇಗ ವಾಕ್ಸಿನ್ ಹಾಕಿಸಿಕೊಳ್ಳುವುದೇ ಸರಿಯಾದ ಮಾರ್ಗ.  ಅವೆಲ್ಲಾ ಸರಿ. ಆದರೆ, ವಾಕ್ಸಿನ್ ಎಲ್ಲಿ ಸಿಗುತ್ತೆ..? ವ್ಯಾಕ್ಸಿನೇಶನ್ ಸೆಂಟರ್ (Vaccination Centre) ಎಲ್ಲಿದೆ..? ಈ ಎಲ್ಲಾ ಮಾಹಿತಿಗಳು ಎಲ್ಲಿ ಸಿಗುತ್ತವೆ.  ನಿಮ್ಮ ವಾಟ್ಸಾಪಿನಿಂದಲೇ ಅವನ್ನೆಲ್ಲಾ ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ನೀವು 18 ವರ್ಷ ಮೇಲ್ಪಟ್ಟವರಾಗಿದ್ದು ವಾಕ್ಸಿನ್ ಹಾಕಿಸಿಕೊಳ್ಳಲು ಯೋಚಿಸುತ್ತಿದ್ದರೆ ನಿಮ್ಮ ವಾಟ್ಸಾಪಿನಲ್ಲೆ ವ್ಯಾಕ್ಸಿನ್ ಸೆಂಟರ್ಸ್ ಮಾಹಿತಿ ಪಡೆಯಬಹುದು.  ಒಂದು ಕ್ಲಿಕ್ ಮಾಡಿದರೆ ನಿಮ್ಮ ಮನೆ ಸುತ್ತ ಇರೋ ಸಮೀಪದ ವ್ಯಾಕ್ಸೀನ್ ಸೆಂಟರ್ ಮಾಹಿತಿ ನಿಮಗೆ ದೊರೆಯಲಿದೆ.

2 /4

ನಿಮ್ಮ ಆಸುಪಾಸಿನಲ್ಲಿ ಕರೋನಾ ವ್ಯಾಕ್ಸಿನೇಶನ್ ಸೆಂಟರ್ ಎಲ್ಲಿದೆ ಎಂಬ  ಮಾಹಿತಿ MyGovIndia ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ.  ನೀವು MyGov Corona Helpdesk ನಿಂದ ನಿಮ್ಮ ಹತ್ತಿರದ ವ್ಯಾಕ್ಸಿನೇಶನ್ ಸೆಂಟರ್ ಕುರಿತಾದ ಮಾಹಿತಿ ಪಡೆಯಬಹುದು.  ಹೆಲ್ಪ್ ಡೆಸ್ಕ್ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿದೆ. 

3 /4

ಆರಂಭದಲ್ಲಿ ನೀವು ಇಂಗ್ಲೀಷಿನಲ್ಲಿಯೇ  ವ್ಯವಹರಿಸಬೇಕು. ನಂತರ ನೀವು ಅದರ ಭಾಷೆ ಬದಲಾಯಿಸಬಹುದು.  ಈಗ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಯೊಂದು ಉದ್ಭವವಾಗಿರಬಹುದು. ಯಾವ ನಂಬರಿಗೆ ಮೆಸೆಜ್ ಮಾಡಬೇಕು ಎಂಬುದೇ ಆ ಪ್ರಶ್ನೆ ಯಾಗಿರಬಹುದು.  ನಾವು ಎಲ್ಲಾ ಪ್ರಕ್ರಿಯೆ ವಿವರವಾಗಿ ತಿಳಿಸುತ್ತೇವೆ.

4 /4

1. ಮೊದಲಿಗೆ ಮೊಬೈಲಿನಲ್ಲಿ 9013151515 ನಂಬರ್ ಸೇವ್ ಮಾಡಿಟ್ಟುಕೊಳ್ಳಿ. 2. ವಾಟ್ಸಾಪ್ ಓಪನ್ ಮಾಡಿ. 3. ವಾಟ್ಸಾಪ್ ಚಾಟ್ ಬಾಕ್ಸ್ ಓಪನ್ ಮಾಡಿ. 4. ನಮಸ್ತೆ ಬರೆದು ಸೆಂಡ್ ಮಾಡಿ. 9 ಅಪ್ಶನ್ ಇರುವ ಉತ್ತರ ಬರುತ್ತದೆ. 5. ವಾಕ್ಸಿನೇಶನ್ ಸಂಬಂಧಿತ ಮಾಹಿತಿಗಾಗಿ 1 ಟೈಪ್ ಮಾಡಿ ಸೆಂಡ್ ಮಾಡಿ. 6. ಎರಡು ಅಪ್ಶನ್ ಜೊತೆ ಉತ್ತರ ಬರುತ್ತದೆ.  7. ಒಂದು ಟೈಪ್ ಮಾಡಿ ಸೆಂಡ್ ಮಾಡಿ ನಿಮಗೆ ಸೆಂಟರಿನ ಎಲ್ಲಾ ಮಾಹಿತಿ ಸಿಗುತ್ತದೆ. 8. ನಂತರ ಪಿನ್ ಕೋಡ್ ಹಾಕಿ ಎಂದು ರಿಪ್ಲೈ ಬರುತ್ತದೆ.  9. ಪಿನ್ ಕೋಡ್ ಹಾಕಿ ಸೆಂಡ್ ಮಾಡಿದ ತಕ್ಷಣ ನಿಮ್ಮ ಆಸುಪಾಸಿನ  ಎಲ್ಲಾ ವ್ಯಾಕ್ಸಿನೇಶನ್ ಸೆಂಟರಿನ ಮಾಹಿತಿ ಸಿಗಲಿದೆ.