ಹಂಸ ರಾಜಯೋಗದಿಂದ ರಾಜರ ರೀತಿ ಬದುಕುತ್ತಾರೆ ಈ ರಾಶಿಯವರು

 ಗುರುಗ್ರಹದ ಉದಯವು ಹಂಸರಾಜ ಯೋಗವನ್ನು ಸೃಷ್ಟಿಸುತ್ತದೆ. ಗುರುವಿನ ಉದಯದ ಕಾರಣದಿಂದ ರೂಪುಗೊಂಡ ಹಂಸ ರಾಜಯೋಗವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. 

Guru Uday 2023 Effects : ಗುರು ಗ್ರಹ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಗುರುವು ಅದೃಷ್ಟ, ಮದುವೆ ಮತ್ತು ಸಂತೋಷದ ಪ್ರತೀಕವಾಗಿದೆ. ಏಪ್ರಿಲ್ 22 ರಂದು, ಗುರು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದಕ್ಕೂ ಮೊದಲು, ಏಪ್ರಿಲ್ 29 ರಂದು ಮೀನ ರಾಶಿಯಲ್ಲಿಯೇ ಅಸ್ತಮಿಸುತ್ತಾನೆ. ನಂತರ ಮತ್ತೆ ಮೇಷ ರಾಶಿಯಲ್ಲಿ ಉದಯಿಸುತ್ತಾನೆ. ಗುರುಗ್ರಹದ ಉದಯವು ಹಂಸರಾಜ ಯೋಗವನ್ನು ಸೃಷ್ಟಿಸುತ್ತದೆ. ಗುರುವಿನ ಉದಯದ ಕಾರಣದಿಂದ ರೂಪುಗೊಂಡ ಹಂಸ ರಾಜಯೋಗವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /3

ಕರ್ಕಾಟಕ ರಾಶಿ : ಗುರುಗ್ರಹದ ಉದಯವು ಕರ್ಕಾಟಕ ರಾಶಿಯವರಿಗೆ ಶುಭ ಫಲಗಳನ್ನೇ ನೀಡಲಿದೆ. ಈ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಪಡೆಯಲಿದ್ದಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಆಫರ್ ಸಿಗಲಿದೆ. ವೃತ್ತಿಜೀವನದ ಬಗ್ಗೆ ನೀವು ಹೊಂದಿರುವ ಬಹುನಿರೀಕ್ಷಿತ ಆಸೆ ಈಡೇರಬಹುದು. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ವಿದೇಶಕ್ಕೆ ಹೋಗುವ ಕನಸು ನನಸಾಗಬಹುದು. 

2 /3

ಧನು ರಾಶಿ : ಗುರುವಿನ ಉದಯದಿಂದ ರೂಪುಗೊಂಡ ಹಂಸ ರಾಜಯೋಗವು ಧನು ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ರಾಶಿಯವರಿಗೆ ಗೊತ್ತಿಲ್ಲದ ಮೂಲದಿಂದಲೂ ಹಣ ಹರಿದು ಬರುತ್ತದೆ.  ನೀಡಿರುವ ಸಾಲ ಮರಳಿ ಬರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಧನು ರಾಶಿಯವರ ಸಾಡೇಸಾತಿ ಕೂಡಾ  ಅಂತ್ಯವಾಗಿರುವುದರಿಂದ  ಈ ಸಮಯವು ವಿಶೇಷವಾಗಿ ಫಲಪ್ರದವಾಗಿರುತ್ತದೆ. ಹೊಸ ಮನೆ-ಕಾರು ಖರೀದಿಸುವ ಯೋಗವಿದೆ.  

3 /3

ಮೀನ ರಾಶಿ : ಗುರುವು ಮೀನರಾಶಿಯಲ್ಲಿ ಅಸ್ತಮಿಸಿ, ಮೇಷ ರಾಶಿಯಲ್ಲಿ  ಉದಯಿಸುತ್ತಾನೆ. ಈ ರೀತಿಯಾಗಿ, ಮೀನ ರಾಶಿಯಿಂದ ಗುರುವಿನ ನಿರ್ಗಮನವು  ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಗುರು ಉದಯದಿಂದ ರೂಪುಗೊಳ್ಳುವ ಹಂಸ ರಾಜಯೋಗವು ಆತ್ಮವಿಶ್ವಾಸವನ್ನು ಹೆಚ್ಚಿಸಿ, ಪ್ರಗತಿಯನ್ನು ನೀಡುತ್ತದೆ. ವ್ಯವಹಾರದಲ್ಲಿ ದೊಡ್ಡ ದೊಡ್ಡ ಆರ್ಡರ್ ಗಳನ್ನು ಸ್ವೀಕರಿಸಬಹುದು.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)