Smartphone ಹ್ಯಾಕ್ ಆಗದಂತೆ ಈ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ

ಆಂಟಿವೈರಸ್ ಕಂಪನಿ McAfee ಈಡುವ ಕೆಲವೊಂದು ಅಳಹೆಗಳನ್ನುಅನುಸರಿಸಿದರೆ ಫೋನ್ ಹ್ಯಾಕ್ ಆಗುವುದನ್ನು ತಡೆಯಬಹುದು. 

ನವದೆಹಲಿ : ತಂತ್ರಜ್ಞಾನವು ಮಾನವ ಜೀವನವನ್ನು ಸುಲಭಗೊಳಿಸಿದಂತೆ, ಕೆಲವೊಮ್ಮೆ ತೊಂದರೆಗೂ ಸಿಲುಕುತ್ತವೆ.  ಸ್ಮಾರ್ಟ್ ಫೋನ್ ಮೂಲಕ ಎಲ್ಲಾ ಕೆಲಸಗಳು ನಡೆಯುತ್ತವೆ. ಆದರೆ   ಸ್ಮಾರ್ಟ್ ಫೋನ್ ಕೂಡಾ ಸಂಪೂರ್ಣವಾಗಿ ಸುರಕ್ಷಿತವಲ್ಲ. ಹ್ಯಾಕ್ ಮಾಡುವ ಅಪಾಯ ಸದಾ ಇದ್ದೇ ಇರುತ್ತದೆ.  ಫೋನ್ ಹ್ಯಾಕ್ ಆಯಿತು ಎಂದರೆ, ನಿಮ್ಮ ವೈಯಕ್ತಿಕ  ಡೇಟಾ ಅಪಾಯದಲ್ಲಿರುತ್ತದೆ. ಹೀಗಿರುವಾಗ ಮೊಬೈಲ್‌ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಂಟಿವೈರಸ್ ಕಂಪನಿ McAfee ಈಡುವ ಕೆಲವೊಂದು ಅಳಹೆಗಳನ್ನುಅನುಸರಿಸಿದರೆ ಫೋನ್ ಹ್ಯಾಕ್ ಆಗುವುದನ್ನು ತಡೆಯಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

McAfee ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಫೇಸ್, ಫಿಂಗರ್, ಪಾಟರ್ನ್ ಅಥವಾ PIN ಲಾಕ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಸಕ್ರಿಯಗೊಳಿಸಬೇಕು. ಒಂದು ವೇಳೆ ಫೋನ್ ಕಳೆದುಹೋದಾಗ ಅಥವಾ ಕಳವಾದಾಗ ಇದು ನಮ್ಮ ಸಹಾಯಕ್ಕೆ ಬರುತ್ತವೆ. ಫೋನ್ ಪಾಸ್‌ವರ್ಡ್ ಸ್ಟ್ರಾಂಗ್ ಆಗಿ ಇರಲಿ. ಟೂ ಫ್ಯಾಕ್ಟರ್ ಆತೆಂಟಿಫಿಕಶನ್ ಅನ್ನು ಕೂಡಾ  ಎನೇಬಲ್ ಮಾಡಿಕೊಳ್ಳಿ. 

2 /4

ಪಬ್ಲಿಕ್ ಪ್ಲಾಟ್ಫಾರ್ಮ್ ನ  ವೈ-ಫೈ ನೆಟ್‌ವರ್ಕ್ ಅನ್ನು ಎಂದಿಗೂ ಬಳಸಬೇಡಿ. ಈ ನೆಟ್‌ವರ್ಕ್‌ಗಳು ಸುರಕ್ಷಿತವಲ್ಲ. ಇಂತಹ ಪರಿಸ್ಥಿತಿಯಲ್ಲಿ, ವಿಪಿಎನ್ ಬಳಸುವುದು ಸೂಕ್ತವಾಗಿರುತ್ತದೆ. ವಿಪಿಎನ್ ಹ್ಯಾಕರ್‌ಗಳಿಂದ ನಿಮ್ಮ ಸಂಪರ್ಕವನ್ನು ಮರೆಮಾಚುತ್ತದೆ. ಏರ್ ಪೋರ್ಟ್‌ಗಳು, ಕೆಫೆಗಳು ಮತ್ತು ಹೋಟೆಲ್‌ಗಳಲ್ಲಿದ್ದರೆ, VPN ನಿಮಗೆ ಖಾಸಗಿಯಾಗಿ ಕನೆಕ್ಟ್ ಆಗಲು ಅನುಮತಿಸುತ್ತದೆ.  

3 /4

ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡುವುದಾದರೆ, ಮೊದಲು  ಅದರ ವಿಮರ್ಶೆಯನ್ನು ಓದಿ. ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಅಧಿಕೃತ ಪ್ಲಾಟ್ಫಾರ್ಮ್ ನಿಂದಲೇ ಯಾವಾಗಲೂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.

4 /4

ನೀವು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ, ಅದರ ಡೇಟಾವನ್ನು ಬ್ಯಾಕ್ ಅಪ್ ಮಾಡಿ. ಇದರೊಂದಿಗೆ, ನೀವು ಹೊಸ ಫೋನ್ ತೆಗೆದುಕೊಂಡಾಗ ಎಲ್ಲಾ ಡೇಟಾವನ್ನು ಪಡೆಯಬಹುದು. ಫೋನ್ ಕಳೆದು ಹೋದರೂ, ಡೇಟಾವನ್ನು ಪಡೆಯುವುದು ಸಾಧ್ಯ  ವಾಗುತ್ತದೆ.