Knowledge: ಸಿಮ್‌ನಿಂದ ಪಿಡಿಎಫ್‌ವರೆಗೆ ಇವುಗಳ ಫುಲ್ ಫಾರ್ಮ್ ನಿಮಗೆ ತಿಳಿದಿದೆಯೇ?

          

ದೈನಂದಿನ ಜೀವನದಲ್ಲಿ, ಸಾಮಾನ್ಯವಾಗಿ ನಾವು ಕೆಲವು ಪದಗಳನ್ನು ಪದೇ ಪದೇ ಬಳಸುತ್ತೇವೆ. ವಿಪರ್ಯಾಸವೆಂದರೆ ಅವುಗಳ ವಿಸ್ತರಣಾ ರೂಪ ಮಾತ್ರ ನಮಗೆ ತಿಳಿದಿರುವುದಿಲ್ಲ. ಉದಾಹರಣೆಗೆ, ಇಂದಿನ ಯುಗದಲ್ಲಿ ಮೊಬೈಲ್ ಫೋನ್ ಬಳಸದವರೇ ಇಲ್ಲ. ಆದರೆ ನಮ್ಮಲ್ಲಿ ಸಾಕಷ್ಟು ಮಂದಿಗೆ ಮೊಬೈಲ್ ಫೋನ್ ಬಳಕೆಗೆ ಅಗತ್ಯವಾಗಿರುವ ಸಿಮ್ ಕಾರ್ಡ್‌ನ ಫುಲ್ ಫಾರ್ಮ್ ತಿಳಿದಿರುವುದಿಲ್ಲ. ಅದೇ ರೀತಿ, ಪ್ಯಾನ್ ಕಾರ್ಡ್, ಪ್ಯಾನ್ ಅರ್ಥವೇನು ಎಂದು ಕೇಳಿದರೆ, ಅದರ ಬಗ್ಗೆ ಬಹುತೇಕ ಜನರಿಗೆ ತಿಳಿದಿರುವುದಿಲ್ಲ.ಅಂತಹ ಐದು ವಿಷಯಗಳ ವಿಸ್ತರಣಾ ರೂಪವನ್ನು ನಾವು ನಿಮಗೆ ತಿಳಿಸುತ್ತೇವೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

1 /5

ನಾವು ಹಣ ತೆಗೆಯಲು ಎಟಿಎಂ ಯಂತ್ರಗಳಿಗೆ ಹೋಗುತ್ತೇವೆ, ಆದರೆ ಕೆಲವೇ ಜನರಿಗೆ ಎಟಿಎಂನ ಅರ್ಥ ತಿಳಿದಿದೆ. ಎಟಿಎಂನ ಸಂಪೂರ್ಣ ರೂಪ ಸ್ವಯಂಚಾಲಿತ ಟೆಲ್ಲರ್ ಯಂತ್ರ (Automated Teller machine).

2 /5

IFSC ಅನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಹಣವನ್ನು ವರ್ಗಾಯಿಸಲು IFSC ಕೋಡ್ ಅಗತ್ಯವಿದೆ. ವಿವಿಧ ಬ್ಯಾಂಕ್ ಶಾಖೆಗಳು ವಿಭಿನ್ನ IFSC ಸಂಕೇತಗಳನ್ನು ಹೊಂದಿವೆ. ಆದ್ದರಿಂದ ಇದನ್ನು ಆನ್‌ಲೈನ್ ಹಣ ವರ್ಗಾವಣೆಗೆ ಬಳಸಲಾಗುತ್ತದೆ. ಇದರ ಪೂರ್ಣ ರೂಪವೆಂದರೆ ಭಾರತೀಯ ಹಣಕಾಸು ವ್ಯವಸ್ಥೆ ಕೋಡ್ (Indian Financial System Code). ಇದನ್ನೂ ಓದಿ- Aadhaar Update: ಆಧಾರ್‌ನಲ್ಲಿ ವಿಳಾಸ ನವೀಕರಿಸಲು ಈ ಸೌಲಭ್ಯ ಸ್ಥಗಿತಗೊಳಿಸಿದ UIDAI

3 /5

ಪ್ಯಾನ್ ಕಾರ್ಡ್ (PAN CARD) ಅನ್ನು ದೇಶದಲ್ಲಿ ಗುರುತಾಗಿ ಬಳಸಲಾಗುತ್ತದೆ. ಇದರ ಪೂರ್ಣ ರೂಪವೆಂದರೆ ಶಾಶ್ವತ ಖಾತೆ ಸಂಖ್ಯೆ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number) ಆಗಿದೆ. ಇದನ್ನೂ ಓದಿ- Fake Pan Card Alert: ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ ನಕಲಿಯೋ? ಈ ರೀತಿ ಚೆಕ್ ಮಾಡಿ

4 /5

ಆನ್‌ಲೈನ್ ದಾಖಲೆಗಳು ಹೆಚ್ಚಾಗಿ ಪಿಡಿಎಫ್ ರೂಪದಲ್ಲಿರುತ್ತವೆ. ಪಿಡಿಎಫ್ ಫೈಲ್ ಅನ್ನು ಅಧಿಕೃತ ಕೆಲಸದಲ್ಲಿ ಬಳಸಲಾಗುತ್ತದೆ. ಇದರ ಪೂರ್ಣ ರೂಪ ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (Portable Document Format) ಆಗಿದೆ.

5 /5

ಮೊಬೈಲ್ ಫೋನ್ ತೆಗೆದುಕೊಂಡ ನಂತರ ಫೋನ್ ಬಳಸಲು, ಒಂದು ಸಿಮ್ ಕಾರ್ಡ್ ಅನ್ನು ಖರೀದಿಸಬೇಕು. ಆಗಷ್ಟೇ ಬಳಕೆದಾರರು ಯಾವುದೇ ಇತರ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಸಿಮ್‌ನ ವಿಸ್ತರಣಾ ರೂಪ ಚಂದಾದಾರರ ಗುರುತಿನ ಮಾಡ್ಯೂಲ್ (SIM- Subscriber Identity Module).