ಈ ಹಸು 7 ತಿಂಗಳ ವಯಸ್ಸಿನಲ್ಲಿಯೂ ಎರಡೂವರೆ ಲೀಟರ್ ಹಾಲು ನೀಡುತ್ತಿತ್ತು. ಈ ಹಸುವಿನ ದೇಹದಿಂದ ಉತ್ತಮ ಸುಗಂಧವೂ ಹೊರಹೊಮ್ಮುತ್ತದೆ.
ಅಸ್ಸಾಂನ ಬಾರ್ಪೇಟಾದ ಕಲಗಾಚಿಯಾದ ಖಲ್ಲಿ ಗ್ರಾಮದ ಫಜರ್ ಅಲಿ ಅವರ ಮನೆಯಲ್ಲಿರುವ ಗೋಮಾತೆ(ಹಸು)ಯನ್ನು ನೋಡಲು ಮತ್ತು ಅದರ ಹಾಲು ಕುಡಿಯಲು ನಿತ್ಯ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಖಿಲ್ಲಿ ಗ್ರಾಮದ ಫೇಜರ್ ಅಲಿಯವರ ಮನೆಯಲ್ಲಿ ಒಂದು ಹಸು ಇದೆ. ಈ ಹಸು ಗರ್ಭವತಿ ಆಗದಿದ್ದರೂ ಕೂಡ ಪ್ರತಿದಿನ 13 ಲೀಟರ್ ಹಾಲು ನೀಡುತ್ತದೆ. ಇಲ್ಲಿಯವರೆಗೆ, ಒಂದು ಕರುವಿಗೂ ಜನ್ಮ ನೀಡದ ಈ ಹಸು ಪ್ರತಿದಿನ ತಪ್ಪದೆ ಹಾಲು ನೀಡುತ್ತಿರುವುದು ಇದರ ವಿಶೇಷತೆ.
ಈ ಹಸು 7 ತಿಂಗಳ ವಯಸ್ಸಿನಲ್ಲಿಯೂ ಎರಡೂವರೆ ಲೀಟರ್ ಹಾಲು ನೀಡುತ್ತಿತ್ತು. ಈ ಹಸುವಿನ ದೇಹದಿಂದ ಉತ್ತಮ ಸುಗಂಧವೂ ಹೊರಹೊಮ್ಮುತ್ತದೆ. ಹಸುವನ್ನು ಮಾತೆಯ ಅವತಾರ ಎಂದು ಜನರು ನಂಬುತ್ತಾರೆ. ಈ ಹಸುವಿನ ಹಾಲು ಕುಡಿಯುವುದರಿಂದ ಹೊಟ್ಟೆನೋವು, ತಲೆನೋವು, ಪಾರ್ಶ್ವವಾಯು ಮತ್ತು ಅನೇಕ ರೋಗಗಳು ನಿವಾರಣೆಯಾಗುತ್ತದೆ. ಈ ಹಸುವಿನ ಹಾಲು ಕುಡಿಯುವುದರಿಂದ ಮನಸ್ಸಿನ ಆಸೆ ಈಡೇರುತ್ತದೆ. ಈ ಹಸು ಸಾಮಾನ್ಯ ಹಸುವಲ್ಲ ಎಂದು ಜನರು ನಂಬುತ್ತಾರೆ.
ಈ ಹಸು ಈವರೆಗೂ ಒಂದೇ ಒಂದು ಕರುವಿಗೂ ಜನ್ಮ ನೀಡದೆ ಪ್ರತಿದಿನ 13 ಲೀಟರ್ ಹಾಲು ನೀಡುತ್ತಿದೆ ಮತ್ತು ಈ ಹಸು 7 ತಿಂಗಳ ವಯಸ್ಸಿನಿಂದ ಹಾಲು ನೀಡುತ್ತಿತ್ತು ಎಂದು ಗೋಪಾಲಕ್ ಫಜರ್ ಅಲಿ ಹೇಳುತ್ತಾರೆ. ಈ ಹಸುವನ್ನು ನಾನು 5 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದೆ. ಆ ಬಳಿಕ ಹಸು ನೀರು, ಆಹಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿತು. ಅದರ ನಂತರ ನಾನು ಹಸುವನ್ನು ಮಾರಾಟ ಮಾಡಲಿಲ್ಲ. ಈ ಹಸುವಿನ ಹಾಲು ಕುಡಿಯಲು ಪ್ರತಿದಿನ ಸಾವಿರಾರು ಮಂದಿ ಬರುತ್ತಾರೆ. ಈ ಹಸುವಿನ ಹಾಲು ಕುಡಿಯುವುದರಿಂದ ಜನರ ಅನೇಕ ರೋಗಗಳು ಸಹ ಗುಣವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಸುವಿನ ಹಾಲು ಕುಡಿಯುವುದರಿಂದ ರೋಗ ಗುಣಪಡಿಸುತ್ತದೆ ಎಂದು ನಾವು ಕೇಳಿದ್ದೇವೆ. ಹಾಗಾಗಿ ಈ ಹಸುವಿನ ಹಾಲು ಕುಡಿಯಲು ನಾವಿಲ್ಲಿಗೆ ಬಂದಿದ್ದೇವೆ ಎಂದು ಅಲ್ಲಿ ನೆರೆದಿದ್ದವರು ತಿಳಿಸಿದ್ದಾರೆ.
ನಾನು ಮೂರ್ನಾಲ್ಕು ದಿನಗಳ ಹಿಂದಷ್ಟೇ ಇಲ್ಲಿ ಬಂದು ಈ ಹಸುವಿನ ಹಾಲು ಕುಡಿದೆ, ನನ್ನ ಬೆನ್ನು ನೋವು ತಕ್ಷಣವೇ ಗುಣವಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ನಾನು ಈ ಹಸುವಿನ ಹಾಲು ಸೇವಿಸಿದ ಬಳಿಕ ಗುಣಮುಖನಾಗಿದ್ದೇನೆ ಎಂದು ಇನ್ನೊಬ್ಬ ವ್ಯಕ್ತಿ ತಿಳಿಸಿದ್ದಾರೆ. ಅದಲ್ಲದೆ ನಮ್ಮ ಮನೆ ಹತ್ತಿರವಿದ್ದ ಓರ್ವ ವ್ಯಕ್ತಿಗೆ ಕ್ಯಾನ್ಸರ್ ಇತ್ತು, ಅವರೂ ಕೂಡ ಈ ಹಾಲನ್ನು ಸೇವಿಸಿದ ಬಳಿಕ ಅವರ ರೋಗ ವಾಸಿಯಾಗಿದೆ ಎಂದು ಅವರು ತಿಳಿಸಿದರು.