'ಎಲ್ಇಡಿ ದೀಪಗಳುಳ್ಳ' ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಲಗ್ಗೆ, ರಿಮೋಟ್‌ನಿಂದ ಬದಲಾಗಲಿದೆ ಬಣ್ಣ

ಗಣೇಶ ವಿಗ್ರಹದ ಮೇಲೆ ಕೃತಕ ವಜ್ರದ ಅಲಂಕಾರ ಮತ್ತು ಎಲ್‌ಇಡಿ ದೀಪಗಳು ಇದರ ವಿಶೇಷ ಲಕ್ಷಣವಾಗಿದೆ ಎಂದು ಎಲ್‌ಇಡಿ ಗಣೇಶ ವಿಗ್ರಹ ತಯಾರಕರಾದ ಸಂಗೀತ ಚೌಧರಿ ತಿಳಿಸಿದ್ದಾರೆ.

  • Aug 28, 2019, 12:07 PM IST

ಗಣೇಶ ವಿಗ್ರಹದ ಎಲ್‌ಇಡಿ ಲೈಟಿಂಗ್ ರಿಮೋಟ್‌ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ರಿಮೋಟ್ ಕಂಟ್ರೋಲ್ ಬಳಸಿ ದೀಪಗಳ ಬಣ್ಣವನ್ನು ಸಹ ಬದಲಾಯಿಸಬಹುದು.

1 /5

ಮುಂಬೈ, ಅಮೋಲ್ ಪೆಡ್ನೇಕರ್: ಗಣೇಶ ಹಬ್ಬಕ್ಕಾಗಿ ಈ ವರ್ಷ ಮುಂಬೈನಲ್ಲಿ ಎಲ್ಇಡಿ ದೀಪಗಳ ಗಣೇಶ ವಿಗ್ರಹವನ್ನು ತಯಾರಿಸಲಾಗಿದೆ. ಮುಂಬೈನ ಪ್ರಂಜಲ್ ಮೂರ್ತಿ ಕೇಂದ್ರದಲ್ಲಿ ವಿಶೇಷವಾದ ಎಲ್ಇಡಿ ದೀಪದ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ.  

2 /5

ಗಣೇಶ ವಿಗ್ರಹದ ಎಲ್‌ಇಡಿ ಲೈಟಿಂಗ್ ರಿಮೋಟ್‌ನಿಂದ ಬದಲಾಗಲಿದೆ. ಆದ್ದರಿಂದ ನೀವು ರಿಮೋಟ್ ಕಂಟ್ರೋಲ್ ಅನ್ನು ಬಳಸುವ ಮೂಲಕ ಎಲ್ಇಡಿ ಲೈಟಿಂಗ್ ಬದಲಾಯಿಸಬಹುದು. ಇದರಲ್ಲಿ ಬಹು ಆಯ್ಕೆಗಳಿದ್ದು, ನೀವು ಪ್ರತಿದಿನ ಎಲ್ಇಡಿ ದೀಪಗಳನ್ನು ವಿವಿಧ ಬಣ್ಣಗಳಲ್ಲಿ ಇರಿಸಬಹುದು.

3 /5

ಅಂದಹಾಗೆ, ಗಣೇಶಮೂರ್ತಿಯಲ್ಲಿ ಕೃತಕ ವಜ್ರಗಳನ್ನು ಇಡಲಾಗಿದೆ. ಇದರಿಂದಾಗಿ ಎಲ್ಇಡಿ ದೀಪಗಳು ಗಣೇಶನ ಮೂರ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ನೀವು ಈ ಎಲ್ಇಡಿ ಗಣೇಶಮೂರ್ತಿಗಳನ್ನು ಬಳಸಲು ಬಯಸಿದರೆ ವಿವಿಧ ಗಾತ್ರದ ಗಣೇಶನ ವಿಗ್ರಹ ಇಲ್ಲಿ ಲಭ್ಯವಿದೆ.

4 /5

ಈ ಎಲ್ಇಡಿ ಗಣೇಶಮೂರ್ತಿಯನ್ನು 4 ಸಾವಿರ ರೂಪಾಯಿಗಳಿಗೆ ಗ್ರಾಹಕರು ಖರೀದಿಸಬಹುದು. ಗಣೇಶ ವಿಗ್ರಹದ ಮೇಲೆ ಕೃತಕ ವಜ್ರದ ಅಲಂಕಾರ ಮತ್ತು ಎಲ್‌ಇಡಿ ದೀಪಗಳು ಇದರ ವಿಶೇಷ ಲಕ್ಷಣವಾಗಿದೆ ಎಂದು ಎಲ್‌ಇಡಿ ಗಣೇಶ ವಿಗ್ರಹ ತಯಾರಕರಾದ ಸಂಗೀತ ಚೌಧರಿ ತಿಳಿಸಿದ್ದಾರೆ.

5 /5

'ಎಲ್ಇಡಿ ದೀಪಗಳುಳ್ಳ' ಗಣೇಶನ ವಿಗ್ರಹಗಳಿಗೆ ಗ್ರಾಹಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗಣೇಶ ಉತ್ಸವ ಸೇರಿದಂತೆ ಯಾವುದೇ ಮೆರವಣಿಗೆಯಲ್ಲಿ, ನೀವು ಬ್ಯಾಟರಿ ಬಳಸಿ ಈ ಎಲ್ಇಡಿ ಲೈಟಿಂಗ್ ಅನ್ನು ಬೆಳಗಿಸಬಹುದು.