ಖ್ಯಾತ ಹಾಲಿವುಡ್ ಗಾಯಕಿ ರಿಟಾ ಓರಾ ಹಂಚಿಕೊಂಡಿರುವ ಕೆಲ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ವೈರಲ್ ಆಗಲಾರಂಭಿಸಿವೆ.
ನವದೆಹಲಿ: ಹಾಲಿವುಡ್ ನ ಖ್ಯಾತ ಗಾಯಕಿ ರಿಟಾ ಓರಾ ಮತ್ತೊಮ್ಮೆ ತನ್ನ ಹಾಟ್ ಹಾಗೂ ಬೋಲ್ಡ್ ಭಾವಚಿತ್ರಗಳ ಮೂಲಕ ಹೆಡ್ಲೈನ್ ಸೃಷ್ಟಿಸಿದ್ದಾಳೆ. ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಇನ್ಸ್ಟಾಗ್ರಾಮ್ ಮೇಲೆ ಸಾಕಷ್ಟು ಸಕ್ರೀಯವಾಗಿರುವ ರಿಟಾ, ನಿತ್ಯ ತನ್ನ ಲೇಟೆಸ್ಟ್ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ. ರಿಟಾ ಹಂಚಿಕೊಂಡಿರುವ ಹಲವು ಭಾವಚಿತ್ರಗಳು ಇದೀಗ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗಲಾರಂಭಿಸಿವೆ. ಖುದ್ದು ರಿಟಾ ಅವಳೇ ತನ್ನ ಈ ಭಾವಚಿತ್ರಗಳನ್ನು ಇನ್ಸ್ಟಾ ಮೇಲೆ ಹಂಚಿಕೊಂಡಿದ್ದಾಳೆ. ಆದರೆ, ಪ್ರೀತಿಯ ಕುರಿತು ಮಾತನಾಡುವಾಗ ಈ ಗಾಯಕಿ ಭಾರಿ ಗಂಭೀರವಾಗುತ್ತಾಳೆ.
IANS ನ್ಯೂಸ್ ಏಜನ್ಸಿಗೆ ನೀಡಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ 'ಲೆಟ್ ಯು ಲವ್ ಮೀ'ನ ಹಿಟ್ ಮೇಕರ್, ಪ್ರೆತಿಯ ಕುರಿತು ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಳು. ಇದಕ್ಕೂ ಮೊದಲು ರಿಟಾ, ರಾಬ್ ಕರ್ದಾಶಿಯಾ, ರಿಕಿ ಹಿಲ್, ಕೆಲ್ವಿನ್ ಹ್ಯಾರಿಸ್ ಹಾಗೂ ರಾಫರ್ಟಿ ಲಾ ಜೊತೆಗೆ ಡೇಟ್ ನಡೆಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ವರದಿಗಳ ಪ್ರಕಾರ ರಾಫರ್ಟಿ ಲಾ ಅವರಿಂದ ದೂರವಾಗಿರುವ ರಿಟಾ, ಸದ್ಯ ಜಾಯ್ ಎಸೆಕ್ಸ್ ಜೊತೆ ರೊಮ್ಯಾಂಟಿಕ್ ಆಗಿ ಕನೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ರಿಟಾ, "ನಾನು ತುಂಬಾ ಗಂಭೀರವಾಗಿ ಪ್ರೀತಿಸುತ್ತೇನೆ ಹಾಗೂ ಸಂಬಂಧದ ಆಳದವರೆಗೆ ಇಳಿಯುತ್ತೇನೆ. ಪ್ರತಿ ಬಾರಿ ನನಗೆ ಜಾಯ್ ಮಾಡುವ ಕೆಲಸ ನನಗೆ ಹಿಡಿಸುತ್ತದೆ. ಅವರು ಮಾತನಾಡುವ ರೀತಿ, ಕೆಲಸದಲ್ಲಿ ತೊಡಗಿಸಿಕೊಳ್ಳುವ ರೀತಿ ಇತ್ಯಾದಿಗಳು ನನಗೆ ತುಂಬಾ ಹಿಡಿಸುತ್ತವೆ ಮತ್ತು ಆ ವ್ಯಕ್ತಿಯ ಜೊತೆಗೆ ಹೊರಗಡೆ ತಿರುಗುವ ಅಗತ್ಯತೆ ಎನಿಸುತ್ತದೆ ಹಾಗೂ ಇದೆ ಸತ್ಯ" ಎಂದು ಹೇಳಿದ್ದಾಳೆ.