Vastu Tips: ಮನೆಯಲ್ಲಿರುವ ಈ ಗಿಡಗಳು ದುರಾದೃಷ್ಟದ ಜೊತೆಗೆ ಕುಟುಂಬದ ಸಂತಸವನ್ನೇ ಕಸಿಯುತ್ತವೆ!

Vastu For Plants: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದನ್ನು ಅಶುಭ, ದುರದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಎಂತಹ ಗಿಡಗಳನ್ನು ನೆಡಬೇಕು ಎಂಬುದನ್ನೂ ಸಹ ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ನಿರ್ದಿಷ್ಟ ಗಿಡಗಳನ್ನು ನೆಡುವುದನ್ನು ನಿಷೇಧಿಸಲಾಗಿದೆ. 

2 /8

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಪ್ಪಿತಪ್ಪಿಯೂ ಕೆಲವು ಗಿಡಗಳನ್ನು ನೆಡಲೇಬಾರದು. ಈ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ದುರಾದೃಷ್ಟದ ಜೊತೆಗೆ ಬಡತನ ಬರಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಹಾಗಿದ್ದರೆ, ಮನೆಯಲ್ಲಿ ಯಾವ ಗಿಡಗಳು ಇರಬಾರದು ಎಂದು ನೋಡೋಣ... 

3 /8

ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಮನೆಯ ಸುತ್ತಮುತ್ತ ಎಲ್ಲಿಯೂ ನೆಡಬಾರದು. ಇದು ಮನೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. 

4 /8

ವಾಸ್ತು ಶಾಸ್ತ್ರದ ಪ್ರಕಾರ, ಮೆಹೆಂದಿ ಗಿಡದಲ್ಲಿ ದುಷ್ಟ ಶಕ್ತಿಗಳು ನೆಲೆಸಿದ್ದು ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯ ಶಾಂತಿ ಕದಡುತ್ತದೆ ಎಂದು ನಂಬಲಾಗಿದೆ. 

5 /8

ಇತ್ತೀಚಿನ ದಿನಗಳಲ್ಲಿ ಬೋನ್ಸಾಯ್ ಗಿಡಗಳ ಟ್ರೆಂಡ್ ಹೆಚ್ಚಾಗಿದೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಗಿಡಗಳು ಮನೆಯ ಅಲಂಕಾರವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಆದರಿದು ಮನೆಯ ಯಜಮಾನನ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. 

6 /8

ಅಶ್ವತ್ಥಮರವನ್ನು ಸಾಮಾನ್ಯವಾಗಿ ಅರಳಿ ಮರ, ಪವಿತ್ರ ಮರ ಎಂದು ಕರೆಯಲಾಗುತ್ತದೆ. ಆದರೆ, ಇದನ್ನು ಮನೆಯಲ್ಲಿ ನೆಡುವುದರಿಂದ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಎನ್ನಲಾಗುತ್ತದೆ. 

7 /8

ವಾಸ್ತು ಪ್ರಕಾರ, ಹುಣಸೆ ಮರವನ್ನು ಮನೆಯಲ್ಲಿ ನೆಡಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುವುದರ ಜೊತೆಗೆ ಭಯದ ವಾತಾವರಣವನ್ನು ನಿರ್ಮಿಸುತ್ತದೆ ಎಂದು ನಂಬಲಾಗಿದೆ. 

8 /8

ಮನೆಯಲ್ಲಿ ಮಿಸ್ ಆಗಿಯೂ ಸಹ ಖರ್ಜೂರದ ಸಸ್ಯವನ್ನು ನೆಡಬಾರದು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಸುಂದರವಾದ ಈ ಮರ ಮನೆಯಲ್ಲಿದ್ದರೆ ಮನೆಯವರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.