ಈ ಸಸ್ಯಗಳು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತವೆ ಮಾತ್ರವಲ್ಲ, ಅನೇಕ ರೋಗಗಳಿಂದ ರಕ್ಷಿಸುತ್ತವೆ. ಇಂದು ನಾವು ಅಂತಹ ಕೆಲವು ಸಸ್ಯಗಳ ಬಗ್ಗೆ ತಿಳಿಸಲಿದ್ದೇವೆ.
ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಗಿಡಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಾಸ್ತು ಪ್ರಕಾರ, ಕೆಲವು ವಿಶೇಷವಾದ ಮರಗಳು ಮತ್ತು ಸಸ್ಯಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವುಗಳ ಉಪಸ್ಥಿತಿಯು ಅನೇಕ ರೀತಿಯ ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ. ಈ ಸಸ್ಯಗಳು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತವೆ ಮಾತ್ರವಲ್ಲ, ಅನೇಕ ರೋಗಗಳಿಂದ ರಕ್ಷಿಸುತ್ತವೆ. ಇಂದು ನಾವು ಅಂತಹ ಕೆಲವು ಸಸ್ಯಗಳ ಬಗ್ಗೆ ತಿಳಿಸಲಿದ್ದೇವೆ. ಇದು ಸಕಾರಾತ್ಮಕತೆಯನ್ನು ತರುವುದರ ಜೊತೆಗೆ ಬೇಸಿಗೆಯಲ್ಲಿ ಬರುವ ಸೊಳ್ಳೆಗಳು ಮತ್ತು ಕೀಟಗಳ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪುದಿನ ಪರಿಮಳವು ತುಂಬಾ ಒಳ್ಳೆಯದು. ಸೊಳ್ಳೆಗಳು ಮತ್ತು ನೊಣಗಳನ್ನು ದೂರವಿಡುವ ಕೆಲವು ಗುಣಲಕ್ಷಣಗಳನ್ನು ಇದು ಹೊಂದಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಸೊಳ್ಳೆ, ನೊಣಗಳು ಬರುವುದಿಲ್ಲ. ಜೊತೆಗೆ ಇದರ ಪರಿಮಳ ವಾತಾವರಣವನ್ನು ತಾಜಾವಾಗಿ ಇಡುತ್ತದೆ.
ಕರಿಬೇವು ಅನೇಕ ಬ್ಯಾಕ್ಟೀರಿಯ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದು ಮನೆಯ ಸುತ್ತ ಇದ್ದರೆ, ಕೀಟಗಳು ಬರುವುದಿಲ್ಲ. ಹಳ್ಳಿಗಳಲ್ಲಿ ಸೊಳ್ಳೆಗಳನ್ನು ಓಡಿಸಲು ಈ ಸೊಪ್ಪಿನ ಹೊಗೆಯನ್ನು ಈಗಲೂ ಬಳಸುತ್ತಾರೆ.
ನೀಲಗಿರಿಯಲ್ಲಿರುವ ಅಂಶಗಳು ಸೊಳ್ಳೆಗಳು, ನೊಣಗಳು ಮತ್ತು ಕೀಟಗಳನ್ನು ಓಡಿಸುತ್ತದೆ. ಆದ್ದರಿಂದ, ಇದನ್ನು ಮನೆಯ ಸುತ್ತ ಹಾಕುವುದರಿಂದ ತುಂಬಾ ಪ್ರಯೋಜನಕಾರಿಯಾಗಿರುತ್ತದೆ.
ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಧನಾತ್ಮಕತೆ ಬರುತ್ತದೆ. ಅಲ್ಲದೆ ಇದರಲ್ಲಿರುವ ನೈಸರ್ಗಿಕ ಗುಣಗಳು ಸೊಳ್ಳೆಗಳನ್ನು ದೂರವಿಡುತ್ತವೆ. ಇದರ ಸುವಾಸನೆಯ ಕಾರಣ, ಇರುವೆಗಳು ಮತ್ತು ಸಣ್ಣ ಕೀಟಗಳು ಸಹ ಮನೆಯ ಸುತ್ತ ಬರುವುದಿಲ್ಲ.
ನಿಂಬೆ ಹುಲ್ಲಿನ ಸಸ್ಯವು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಈ ಗಿಡವನ್ನು ನೆಟ್ಟು ಪ್ರತಿದಿನ ಅದರ ಚಹಾವನ್ನು ಕುಡಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)