ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಈ 4 ಅನಾರೋಗ್ಯಕರ ಅಭ್ಯಾಸಗಳು

ಮಧುಮೇಹದ ಗಂಭೀರ ಕಾಯಿಲೆಗೆ ಕಾರಣವಾಗುವ ಅಂತಹ ಕೆಲವು ಅಭ್ಯಾಸಗಳ ಬಗ್ಗೆ ನಾವು ಇಲ್ಲಿ ಬರೆಯುತ್ತಿದ್ದೇವೆ ಮತ್ತು ಈ ಅಭ್ಯಾಸಗಳನ್ನು ತಪ್ಪಿಸುವುದರಿಂದ ಮಧುಮೇಹದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. 

 ಬೆಂಗಳೂರು :  ಮಧುಮೇಹದ ಲಕ್ಷಣಗಳು ಮತ್ತು ಪರಿಣಾಮಗಳು ತ್ವರಿತವಾಗಿ ಕಂಡುಬರುವುದಿಲ್ಲ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು ಕಳವಳಕಾರಿ ವಿಷಯವಾಗಿದೆ. ಮಧುಮೇಹವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮಧುಮೇಹದ ಸಮಸ್ಯೆ ಕಾಡಲು ಅನೇಕ ಕಾರಣಗಳಿರಬಹುದು. ಆದರೆ, ನಾವು ಅನುಸರಿಸುವ ಕೆಲವು ಅಭ್ಯಾಸಗಳೇ ಈ ರೋಗಕ್ಕೆ ಮುಖ್ಯವಾಗಿ ಆಹ್ವಾನ ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಧೂಮಪಾನದ ಮೂಲಕ ಹಾನಿಕಾರಕ ರಾಸಾಯನಿಕಗಳು ದೇಹವನ್ನು ತಲುಪಲು ಕಾರಣವಾಗುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ.  

2 /4

 ಬಯೋಲಾಜಿಕಲ್ ಸೈಕಲ್ ಸರಾಗವಾಗಿ ಕಾರ್ಯನಿರ್ವಹಿಸುವಂತಾಗಲು ದೇಹದಲ್ಲಿ ಕೆಲವು ವಿಶೇಷ ರೀತಿಯ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ.  ವ್ಯಕ್ತಿಯು ನಿದ್ರೆಯ ಕೊರತೆಯಿಂದ ಬಳಲುತ್ತಿದ್ದರೆ ಅಥವಾ ಸರಿಯಾಗಿ ನಿದ್ರೆ ಮಾಡದಿದ್ದರೆ, ಅದು  ಬಯೋಲಾಜಿಕಲ್ ಸೈಕಲ್  ಅನ್ನು  ಸಂಪೂರ್ಣವಾಗಿ  ಕೆಡಿಸುತ್ತದೆ.  ಇದು ಮಧುಮೇಹದಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.  

3 /4

ಕೇಕ್, ಸಿಹಿತಿಂಡಿಗಳು, ಐಸ್ ಕ್ರೀಮ್, ಬಿಸ್ಕತ್ತುಗಳು ಮತ್ತು ಕೇಕ್ ಗಳಂಥ ಸಿಹಿ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಮಧುಮೇಹದ ಕಾರಣಗಳಲ್ಲಿ ಒಂದಾಗಿದೆ.    

4 /4

ಸೋಮಾರಿತನ ಅಥವಾ ಕೆಲವು ಕೆಲಸಗಳಲ್ಲಿ ನಿರತರಾಗಿ ಅನೇಕ ಜನರು ವ್ಯಾಯಾಮ ಮಾಡುವುದಿಲ್ಲ. ವಾಸ್ತವವಾಗಿ, ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.