Dog Influencers: ಸೆಲೆಬ್ರಿಟಿಗಳಿಗಿಂತಲೂ ಹೆಚ್ಚು ಗಳಿಸುವ ಶ್ರೀಮಂತ ‘ಡಾಗ್ ಇನ್‌ಫ್ಲುಯೆನ್ಸರ್‌ಗಳು’..!

ಅನೇಕ ಶ್ವಾನಗಳು ಕೂಡ ಇನ್‌ಫ್ಲುಯೆನ್ಸರ್‌ಗಳಾಗಿ ಯಾವುದೇ ಸೆಲೆಬ್ರಿಟಿಗಳಿಗೆ ಕಡಿಮೆ ಇಲ್ಲವೆಂಬಂತೆ ಹಣ ಗಳಿಸುತ್ತಿವೆ.

ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ಉದ್ಯಮವಾಗಿ ಬೆಳೆಯುತ್ತಿವೆ. Instagram ಇಂತಹ ಒಂದು ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಅನೇಕ ಜನರು ಇನ್‌ಫ್ಲುಯೆನ್ಸರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಷ್ಠಿತ ಬ್ರಾಂಡ್‌ಗಳಿಗೆ ಪ್ರಚಾರ ಒದಗಿಸುವ ಮೂಲಕ ಪ್ರತಿ ಪೋಸ್ಟ್ ಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಆದರೆ ನಿಮಗೆ ಗೊತ್ತೆ ಕೇವಲ ಮನುಷ್ಯರಷ್ಟೇ ಅಲ್ಲದೆ ಶ್ವಾನಗಳು ಕೂಡ ಇನ್‌ಫ್ಲುಯೆನ್ಸರ್‌(Influencers)ಗಳಾಗಿ ಕೆಲಸ ಮಾಡುತ್ತಿವೆ. ಹೌದು, ಇದು ಅಚ್ಚರಿಯಾದರೂ ನಿಜವಾದ ಸಂಗತಿ. ಅನೇಕ ಶ್ವಾನಗಳು ಕೂಡ ಇನ್‌ಫ್ಲುಯೆನ್ಸರ್‌ಗಳಾಗಿ ಯಾವುದೇ ಸೆಲೆಬ್ರಿಟಿಗಳಿಗೆ ಕಡಿಮೆ ಇಲ್ಲವೆಂಬಂತೆ ಹಣ ಗಳಿಸುತ್ತಿವೆ. Instagramನ ಶ್ರೀಮಂತ ‘ಡಾಗ್ ಇನ್‌ಫ್ಲುಯೆನ್ಸರ್‌'ಗಳ(Dog Influencers)ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

Tucker Badgin: ಈ ಶ್ವಾನ ಮಿಚಿಗನ್‌ನಲ್ಲಿ ವಾಸಿಸುವ ಗೋಲ್ಡನ್ ರಿಟ್ರೈವರ್. Tucker ಇನ್‌ಸ್ಟಾಗ್ರಾಮ್‌ನಲ್ಲಿ 3.1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವುದು ಮಾತ್ರವಲ್ಲದೆ ಯೂಟ್ಯೂಬ್ ಚಾನೆಲ್ ಸಹ ಹೊಂದಿದೆ. ಇನ್‌ಸ್ಟಾಗ್ರಾಮ್‌ನಿಂದ ಮತ್ತು ಯೂಟ್ಯೂಬ್ ಎರಡರಿಂದಲೂ ಈ ಶ್ವಾನ ಲಕ್ಷ ಲಕ್ಷ ಹಣ ಗಳಿಸುತ್ತಿದೆ. ಟಕ್ಕರ್‌ನ ನಿವ್ವಳ ಮೌಲ್ಯ ಸುಮಾರು 4.78 ಮಿಲಿಯನ್ (ಸುಮಾರು 35,84,97,610 ರೂ.) ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.

2 /6

Dug the Pug: ಡೌಗ್ ದಿ ಪಗ್ ಶ್ವಾನವು ಹಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದೆ. 2 ಬಾರಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದಿದೆ. ಇದು Instagramನಲ್ಲಿ 3.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಪ್ರತಿ ಪೋಸ್ಟ್‌ಗೆ 12,629 ಅಮೆರಿಕನ್ ಡಾಲರ್ (ಸುಮಾರು 9,47,168 ರೂ.)  ಪಡೆಯುತ್ತದೆ.

3 /6

Loki the Wolfdog: ಡೆನ್ವರ್ ಮೂಲದ ಕೆಲ್ಲಿ ಲುಂಡ್ 2013ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ Loki the Wolfdogನ ಫೋಟೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದಳು. ಇಂದು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ 1.9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾಳೆ. ಪ್ರತಿ ಪೋಸ್ಟ್‌ ಗೆ 6,661 ಅಮೆರಿಕನ್ ಡಾಲರ್ (ಸುಮಾರು 4,99,572 ರೂ.) ಹಣ ಪಡೆಯುತ್ತಾಳೆ.

4 /6

Harlow and Sage: ಹಾರ್ಲೋ, ಇಂಡಿಯಾನಾ, ರೀಸ್, ಎಜ್ರಾ ಮತ್ತು ಮೇ(Harlow, Indiana, Reece, Ezra and May)ಈ 5 ನಾಯಿಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಈ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಖಾತೆಗೆ ಬರೋಬ್ಬರಿ 1.7 ಮಿಲಿಯನ್ ಅನುಯಾಯಿಗಳಿದ್ದಾರೆ. ಈ ಖಾತೆಯ ಪ್ರತಿ ಪೋಸ್ಟ್‌ ಗೆ ಈ ಶ್ವಾನಗಳ ಮಾಲೀಕರು 5,135 ಅಮೆರಿಕನ್ ಡಾಲರ್ (ಸುಮಾರು 3,85,122 ರೂ.) ಪಡೆಯುತ್ತಾರೆ.

5 /6

Manny the Frenchie: Manny ಪ್ರಪಂಚದಲ್ಲಿಯೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಫ್ರೆಂಚ್ ಶ್ವಾನ. ಈ ಚಿಕಾಗೋ ಮೂಲದ ಶ್ವಾನವು ಮಾಡುವ ಪ್ರತಿ ಪೋಸ್ಟ್‌ ಗೆ 3,122 ಅಮೆರಿಕನ್ ಡಾಲರ್ (ಸುಮಾರು 2,34,148 ರೂ.) ಗಳಿಸುತ್ತದೆ. ಇದು Instagramನಲ್ಲಿ 1 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ.

6 /6

Reagan Doodle: ಈ ಶ್ವಾನವು ಇನ್‌ಸ್ಟಾಗ್ರಾಮ್‌ನಲ್ಲಿ 492 K ಅನುಯಾಯಿಗಳನ್ನು ಹೊಂದಿದೆ. ಈ ಶ್ವಾನವು ಇನ್‌ಸ್ಟಾಗ್ರಾಮ್‌ನಿಂದ ಗಳಿಸುವ ಹಣದಲ್ಲಿ ಅನಾಥರಿಗೆ ಕೂಡ ಸಹಾಯ ಮಾಡಲಾಗುತ್ತದೆ. ಇದು ಪ್ರತಿ ಪೋಸ್ಟ್‌ ಗೆ 1,665 ಅಮೆರಿಕನ್ ಡಾಲರ್ (ಸುಮಾರು 1,24,874 ರೂ.) ಗಳಿಸುತ್ತದೆ.