ಈ ಬಾಲಿವುಡ್ ನಟ ನಟಿಯ ತಿಂಗಳ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು.!

ಬಾಲಿವುಡ್ ಮಂದಿಯ ತಿಂಗಳ ಕರೆಂಟ್ ಬಿಲ್ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ.

ಮುಂಬಯಿ : ವಿದ್ಯುತ್ ಬಿಲ್ ಸ್ವಲ್ಪ ಜಾಸ್ತಿ ಬಂದರೂ ಕಣ ಸಾಮಾನ್ಯರ ಬೆವರಿಳಿಯುತ್ತದೆ.  ಬಿಲ್ ಕಡಿಮೆ ಮಾಡುವ ಎಲ್ಲಾ ತಂತ್ರಗಳನ್ನು ಹುಡುಕುತ್ತವೆ. ಆದೇ ಬಾಲಿವುಡ್ ಮಂದಿಯ ತಿಂಗಳ ಕರೆಂಟ್ ಬಿಲ್ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ. ಹೌದು ಅವರು ತಿಂಗಳಿಗೆ ಪಾವತಿಸುವ ಕರೆಂಟ್ ಬಿಲ್ ನಲ್ಲಿ ಸಾಮಾನ್ಯನೊಬ್ಬ ಒಂದು ಮನೆಯನ್ನೇ ಖರೀದಿಸಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಹೆಸರೂ ಸೇರಿದೆ. ಅಮೀರ್ ಖಾನ್ ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.  ವರದಿಗಳ ಪ್ರಕಾರ ಈ ಮನೆಯ ಬಿಲ್ ಪ್ರತಿ ತಿಂಗಳು 9-11 ಲಕ್ಷ ರೂಪಾಯಿವರೆಗೆ  ಬರುತ್ತದೆ.

2 /7

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮ ಮನೆಗೆ ಭಾರೀ ಪ್ರಮಾಣದ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರ 4BHK ಅಪಾರ್ಟ್ಮೆಂಟ್ ನ  ವಿದ್ಯುತ್ ಬಿಲ್ 13-15 ಲಕ್ಷ ರೂ.ಯಷ್ಟು ಬರುತ್ತದೆ. 

3 /7

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಚಲನಚಿತ್ರಗಳ ಹೊರತಾಗಿ, ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸದಾ ಸುದ್ದಿಯಲ್ಲಿರುತ್ತಾರೆ.  ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ವಿದ್ಯುತ್ ಬಿಲ್ ಸುಮಾರು 20-25 ಲಕ್ಷ ರೂ. ಎಂದು ಹೇಳಲಾಗುತ್ತದೆ. 

4 /7

ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಅವರೊಂದಿಗೆ 4BHK ಅಪಾರ್ಟ್ಮೆಂಟ್ ನಲ್ಲಿ  ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ಈ ಅಪಾರ್ಟ್‌ಮೆಂಟ್‌ನ ವಿದ್ಯುತ್ ಬಿಲ್ 8-10 ಲಕ್ಷ ರೂ. ಎನ್ನಲಾಗಿದೆ. 

5 /7

ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಪತಿ ಮತ್ತು ನಟ ಸೈಫ್ ಅಲಿ ಖಾನ್ ಮುಂಬೈನ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.  ಅವರ ಮನೆಯ ಕರೆಂಟ್ ಬಿಲ್ 30 ರಿಂದ 32 ಲಕ್ಷ ಎನ್ನಲಾಗಿದೆ. 

6 /7

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಮನೆ ಮನ್ನತ್ ಸಾಕಷ್ಟು ಸುದ್ದಿಯಲ್ಲಿದೆ. ಮಾಧ್ಯಮಗಳ ವರದಿ ಪ್ರಕಾರ, ಈ ಮನೆಯ  ಒಂದು ತಿಂಗಳ ವಿದ್ಯುತ್ ಬಿಲ್ 43 ಲಕ್ಷ ರೂ.ಯಷ್ಟು ಪಾವತಿಸಬೇಕಾಗುತ್ತದೆ. 

7 /7

ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ತಾರೆಗಳಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಅನೇಕ ಮನೆಗಳನ್ನು ಹೊಂದಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಜುಹುವಿನ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಸುದ್ದಿ ಪ್ರಕಾರ ಈ ಮನೆಯ ಒಂದು ತಿಂಗಳ ಬಿಲ್ 20-22 ಲಕ್ಷ ರೂಪಾಯಿ ಬರುತ್ತದೆ.