ಈ ರಾಶಿಯವರಿಗೆ ಫೆಬ್ರವರಿಯಲ್ಲಿ ಎದುರಾಗಲಿದೆ ಸಂಕಷ್ಟಗಳ ಸರಮಾಲೆ, ಸತತವಾಗಿ ಕಾಡಲಿದ್ದಾನೆ ಶನಿದೇವ


ಫೆಬ್ರವರಿ 24 ರವರೆಗೆ ಶನಿ ಅಸ್ತ ಸ್ಥಿತಿಯಲ್ಲಿಯೇ ಇರಲಿದ್ದಾನೆ. ಈ ಹಿನ್ನೆಲೆಯಲ್ಲಿ ಕೆಲವೊಂದು ರಾಶಿಗಳಿಗೆ  ತೀರಾ ತೊಂದರೆ ಉಂಟಾಗಲಿದೆ.

ನವದೆಹಲಿ : ಶನಿ ಗ್ರಹದ ವಿಚಾರಕ್ಕೆ ಬಂದರೆ ಖಂಡಿತವಾಗಿಯೂ ಎಲ್ಲರಿಗೂ ಭಯ ಆವರಿಸಿ ಬಿಡುತ್ತದೆ. ಶನಿಯು ತನ್ನದೇ ರಾಶಿಯಲ್ಲಿ ವಾಸಿಸುತ್ತಿರುವಾಗ ಮತ್ತು ಅಲ್ಲೇ ಅಸ್ತಮಿಸುವಾಗ ತೀರ  ಅಶುಭ ಫಲವನ್ನು ನೀಡುತ್ತಾನೆ. ಕ್ರೂರ ದೇವತೆಯೆಂದೇ ಕರೆಯಲ್ಪಡುವ ಶನಿದೇವ  ಅಸ್ತಮಿಸಿಯಾಗಿದೆ. ಫೆಬ್ರವರಿ 24 ರವರೆಗೆ ಅಸ್ತ ಸ್ಥಿತಿಯಲ್ಲಿಯೇ ಇರಲಿದ್ದಾನೆ. ಈ ಹಿನ್ನೆಲೆಯಲ್ಲಿ ಕೆಲವೊಂದು ರಾಶಿಗಳಿಗೆ  ತೀರಾ ತೊಂದರೆ ಉಂಟಾಗಲಿದೆ.  ಈ ರಾಶಿಯವರು ಮತ್ತೆ ಶನಿ  ಉದಯವಾಗುವವರೆಗೆ ಬಹಳ ಎಚ್ಚರಿಕೆಯಿಂದ ಇರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಂಗಳನು ​​ಮೇಷ ರಾಶಿಯ ಅಧಿಪತಿಯಾಗಿದ್ದು ಶನಿ ಮತ್ತು ಮಂಗಳನ ನಡುವೆ ದ್ವೇಷವಿದೆ.  ಶನಿಗ್ರಹವು ಮುಂದಿನ 1 ತಿಂಗಳವರೆಗೆ ಈ ರಾಶಿಯವರಿಗೆ ತೊಂದರೆ ನೀಡಬಹುದು. ಕೆಲಸದ ಸ್ಥಳದಲ್ಲಿ ಅತ್ಯಂತ ಜಾಗರೂಕರಾಗಿರಿ. ಯಾವುದೇ ರೀತಿಯ ಒತ್ತಡ ತೆಗೆದುಕೊಳ್ಳುವುದನ್ನು  ತಪ್ಪಿಸಿ.   

2 /5

ಕಟಕ  ರಾಶಿಯವರಿಗೆ, ಈ ಸಮಯವು ಆರೋಗ್ಯ ಮತ್ತು ವೃತ್ತಿಜೀವನದಲ್ಲಿ ಕಷ್ಟಕರವಾಗಿರುತ್ತದೆ. ಅದರಲ್ಲೂ ಉದ್ಯೋಗ ಮಾಡುವವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

3 /5

ಮಿಥುನ ರಾಶಿಯವರಿಗೆ ಶನಿಯ ಅಸ್ತವಾಗಿರುವುದು ಅಶುಭವಾಗಿರುತ್ತದೆ. ಇದೀಗ ಈ ರಾಶಿಯವರೆಗೆ ಎರಡೂವರೆ ಶನಿ ದೆಸೆ ಬೇರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.

4 /5

ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಕೆಲಸಕ್ಕೆ ಅಡ್ಡಿಯಾಗಲಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೆ ಚಿಂತಿತರಾಗುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

5 /5

ಶನಿಯ ಅಸ್ತದ ಕಾರಣದಿಂದಾಗಿ ತುಲಾ ರಾಶಿಯವರೂ ಗೌರವ ಕಳೆದುಕೊಳ್ಳಬಹುದು. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಕುಟುಂಬದಲ್ಲಿಯೂ ವಿರಸ ಉಂಟಾಗಬಹುದು.