Vegetable Peelings: ಈ ತರಕಾರಿಯ ಸಿಪ್ಪೆಯಲ್ಲಿದೆ ಭರಪೂರ ಪೋಷಕಾಂಶ

Vegetable Peelings: ಸಿಪ್ಪೆಯೊಂದಿಗೆ ತರಕಾರಿಗಳನ್ನು ತಿನ್ನುವುದೆಂದರೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಕೆಲವು ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ.

ನವದೆಹಲಿ : Vegetable Peelings: ಸಿಪ್ಪೆಯೊಂದಿಗೆ ತರಕಾರಿಗಳನ್ನು ತಿನ್ನುವುದೆಂದರೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಕೆಲವು ತರಕಾರಿಗಳ ಸಿಪ್ಪೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಈ ತರಕಾರಿಗಳನ್ನು ಸಿಪ್ಪೆ ತೆಗೆಯುವ ಮೂಲಕ ಬೇಯಿಸಿದರೆ, ಅದರಿಂದ ಸಿಗಬೇಕಾದಷ್ಟು ಲಾಭ ಸಿಗುವುದಿಲ್ಲ. ತರಕಾರಿ ಸಿಪ್ಪೆಯಲ್ಲಿ ಬಹಳಷ್ಟು ಫೈಬರ್ ಇದ್ದು, ಇದು ನಮ್ಮ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಆಲೂಗಡ್ಡೆಯ ಸಿಪ್ಪೆಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳಿದ್ದು, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅದರ ಸಿಪ್ಪೆಯನ್ನು ತೆಗೆದು ಬೇಯಿಸಿದರೆ, ಆ ಪೌಷ್ಟಿಕಾಂಶಗಳು  ಸಿಗುವುದಿಲ್ಲ.

2 /4

ಕುಂಬಳಕಾಯಿ ಸಾಂಬಾರು ಅಥವ ಪಲ್ಯ ಮಾಡುವಾಗಲೂ ಅದರ ಸಿಪ್ಪೆಯನ್ನು ತೆಗೆಯಬೇಡಿ. ಇದರ ಸಿಪ್ಪೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ, ವಿಟಮಿನ್ ಎ, ಪೊಟ್ಯಾಶಿಯಂ ಇದ್ದು, ಇದು ನಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ.  

3 /4

ಟೊಮೆಟೊಗಳನ್ನು ಹೆಚ್ಚಿನ ಅಡುಗೆಯಲ್ಲಿ ಬಳಸಲಾಗುತ್ತದೆ. ಇದರ ಸಿಪ್ಪೆಯಲ್ಲಿಯೂ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಆದ್ದರಿಂದ, ಟೊಮೇಟೊವನ್ನು  ಬೇಯಿಸುವಾಗ ಸಿಪ್ಪೆ ತೆಗೆಯುವ ತಪ್ಪನ್ನು ಮಾಡಬೇಡಿ.  

4 /4

ಸೌತೆಕಾಯಿಯ ಸಿಪ್ಪೆ ತೆಗೆಯುವುದು ಎಂದರೆ ಅದರ ಅರ್ಧಕ್ಕಿಂತ ಹೆಚ್ಚು ಪೌಷ್ಟಿಕಾಂಶವನ್ನು ವ್ಯರ್ಥ ಮಾಡುವುದು ಎಂದರ್ಥ . ಸಲಾಡ್ ಅಥವಾ ಮೊಸರು ಬಜ್ಜಿಯಲ್ಲಿ  ಬಳಸುವಾಗ ಅದರ ಸಿಪ್ಪೆಯನ್ನು ತೆಗೆಯಬೇಡಿ. ಸಿಪ್ಪೆ ಸಮೇತ ಸೇವಿಸಿದರೂ ಇದರ ರುಚಿಯಲ್ಲಿ  ಯಾವುದೇ ಬದಲಾವಣೆ ಇರುವುದಿಲ್ಲ.