ಐಪಿಎಲ್‌ಗೆ ಗ್ಲಾಮರ್ ಟಚ್ ನೀಡಲಿದ್ದಾರೆ ಟೀಂ ಇಂಡಿಯಾದ ಈ ಆಟಗಾರರ ಪತ್ನಿಯರು

ವಿಶ್ವದ ಎಲ್ಲಾ ದೊಡ್ಡ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಇನ್ನು ಭಾರತದ ಆಟಗಾರರ ಗೆಳತಿಯರು, ಪತ್ನಿಯರು  ಐಪಿಎಲ್‌ನಲ್ಲೂ ಉಪಸ್ಥಿತರಾಗಲಿದ್ದು, ಆಟಕ್ಕೆ ಹೆಚ್ಚು ಮೆರುಗು ನೀಡಲಿದ್ದಾರೆ. 
 

ನವದೆಹಲಿ: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಎಲಾ ಸಿದ್ದತೆಗಳು ಕೂಡಾ ಪೂರ್ಣಗೊಂಡಿದೆ.  ವಿಶ್ವದೆಲ್ಲೆಡೆ ಐಪಿಎಲ್ ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ವಿಶ್ವದ ಎಲ್ಲಾ ದೊಡ್ಡ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಇನ್ನು ಭಾರತದ ಆಟಗಾರರ ಗೆಳತಿಯರು, ಪತ್ನಿಯರು  ಐಪಿಎಲ್‌ನಲ್ಲೂ ಉಪಸ್ಥಿತರಾಗಲಿದ್ದು, ಆಟಕ್ಕೆ ಹೆಚ್ಚು ಮೆರುಗು ನೀಡಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜಸ್ಪ್ರೀತ್ ಬುಮ್ರಾ ಅವರ ಯಾರ್ಕರ್ ಬಗ್ಗೆ ಎಲ್ಲರಿಗೂ ಗೊತ್ತು. ಜಸ್ಪ್ರೀತ್ ಬುಮ್ರಾ ಅವರು ತಮ್ಮ ಗೆಳತಿ ಸಂಜನಾ ಗಣೇಶನ್ ಅವರೊಂದಿಗೆ ಕಳೆದ ವರ್ಷವಷ್ಟೇ ಗೋವಾದಲ್ಲಿ ಸಪ್ತಪದಿ ತುಳಿದಿದ್ದಾರೆ.  30 ವರ್ಷದ ಸಂಜನಾ ಮಾಜಿ ಮಾಡೆಲ್ ಆಗಿದ್ದು, ಸ್ಪೋರ್ಟ್ಸ್ ಆಂಕರ್ ಕೂಡ ಆಗಿದ್ದಾರೆ. 

2 /5

ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಆಟದ ಜೊತೆಗೆ ತಮ್ಮ ನಗುವಿನ ಕಾರಣದಿಂದಲೂ  ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಸೌಂದರ್ಯ ಮಾತ್ರವಲ್ಲ ತಮ್ಮ ಮನಮೋಹಕ ನೃತ್ಯಕ್ಕೂ ಹೆಸರುವಾಸಿ.

3 /5

ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಯಾರಿಗೆ ತಾನೇ  ಗೊತ್ತಿಲ್ಲ. ಬಾಲಿವುಡ್ ನಟಿ ಅನುಷ್ಕಾ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಹಲವು ವರ್ಷಗಳಿಂದ ಕ್ರೀಡಾಂಗಣಕ್ಕೆ ಬಂದು ಕೊಹ್ಲಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. 

4 /5

ಗ್ಲಾಮರ್ ವಿಚಾರಕ್ಕೆ ಬಂದರೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಹೆಸರು ಮುಂಚೂಣಿಯಲ್ಲಿರುತ್ತಾರೆ. ಮಗುವಿನ ತಾಯಿಯಾಗಿದ್ದರೂ ಅವರ ಗ್ಲಾಮರ್‌ಗೆ ಯಾವುದೇ ಕೊರತೆ ಇಲ್ಲ. ನತಾಶಾ ವೃತ್ತಿಯಲ್ಲಿ ನೃತ್ಯಗಾರ್ತಿ, ಹಾರ್ದಿಕ್ ತನ್ನ ಹೆಂಡತಿಯನ್ನು ತನಗೆ ಅದೃಷ್ಟ ಎಂದೇ  ಪರಿಗಣಿಸುತ್ತಾರೆ. 

5 /5

ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಸದಾ ಸುದ್ದಿಯಲ್ಲಿರುತ್ತಾರೆ. ರಿತಿಕಾ ಮೈದಾನದಲ್ಲಿ ರೋಹಿತ್ ಶರ್ಮಾಗಾಗಿ ಪ್ರಾರ್ಥಿಸುತ್ತಿರುವುಡು ಅನೇಕ ಬಾರಿ ಬೆಳಕಿಗೆ ಬಂದಿದೆ. ರಿತಿಕಾ ಮೈದಾನದಲ್ಲಿದ್ದಾಗಲೆಲ್ಲ, ರೋಹಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ರಿತಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.