LPG ಬೆಲೆಯಿಂದ ಬ್ಯಾಂಕಿಂಗ್ ನಿಯಮಗಳವರೆಗೆ ಮಾರ್ಚ್‌ನ ಈ ಬದಲಾವಣೆಗಳು ಜೇಬಿನ ಮೇಲೆ ಬೀರಲಿದೆ ನೇರ ಪರಿಣಾಮ

ಇಂದಿನಿಂದ ಅಂದರೆ ಮಾರ್ಚ್ ಒಂದನೇ ತಾರೀಕಿನಿಂದ ಕೆಲವೊಂದು ವಿಷಯಗಳಲ್ಲಿ ಬದಲಾವಣೆಯಾಗುತ್ತಿದೆ. ಇದು ಪ್ರತಿಯೊಬ್ಬನ ಜೇಬು ಸುಡಲಿದೆ.

ನವದೆಹಲಿ :  ಪ್ರತಿ ತಿಂಗಳ ಮೊದಲ ದಿನದಂದು, ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುವ ಅನೇಕ ದೊಡ್ಡ ಬದಲಾವಣೆಗಳು ಆಗುತ್ತವೆ. ಬ್ಯಾಂಕಿಂಗ್ ನಿಯಮಗಳಿಂದ ಎಲ್‌ಪಿಜಿ ಸಿಲಿಂಡರ್ ಬೆಲೆಯವರೆಗೆ ಪ್ರತಿ ತಿಂಗಳ ಮೊದಲ ದಿನ ಅನೇಕ ಬದಲಾವಣೆಗಳಾಗುತ್ತವೆ.  ಈ ಬಾರಿಯೂ ಇಂದಿನಿಂದ ಅಂದರೆ ಮಾರ್ಚ್ ಒಂದನೇ ತಾರೀಕಿನಿಂದ ಕೆಲವೊಂದು ವಿಷಯಗಳಲ್ಲಿ ಬದಲಾವಣೆಯಾಗುತ್ತಿದೆ. ಇದು ಪ್ರತಿಯೊಬ್ಬನ ಜೇಬು ಸುಡಲಿದೆ. ಇಂದಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 105 ರೂ ಏರಿಕೆಯಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ತಿಂಗಳ ಮೊದಲನೇ ತಾರೀಕಿನಂದು  ಬಿಡುಗಡೆಯಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ.  ಮಾರ್ಚ್ 1 ರಿಂದ ಅಂದರೆ ಇಂದಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ  105 ರೂ. ಹೆಚ್ಚಳವಾಗಿದೆ. 

2 /4

IPPB ಅಂದರೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತನ್ನ ಡಿಜಿಟಲ್ ಉಳಿತಾಯ ಖಾತೆಗೆ ಕ್ಲೋಸರ್ ಚಾರ್ಜ್ ವಿಧಿಸಲು ಪ್ರಾರಂಭಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ 150 ರೂ ಮತ್ತು ಜಿಎಸ್‌ಟಿಯನ್ನು ವಿಧಿಸಬೇಕಾಗುತ್ತದೆ. ಈ ಹೊಸ ನಿಯಮವು ಮಾರ್ಚ್ 5, 2022 ರಿಂದ ಜಾರಿಗೆ ಬರಲಿದೆ. 

3 /4

ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿತ್ತು. ಸರ್ಕಾರ ನೀಡಿರುವ ಈ ವಿನಾಯಿತಿ ಮಾರ್ಚ್ 1ಕ್ಕೆ ಅಂದರೆ ಇಂದಿನಿಂದ ಕೊನೆಗೊಳ್ಳಲಿದೆ. ಪಿಂಚಣಿ ಪಡೆಯುವುದನ್ನು ಮುಂದುವರಿಸಬೇಕಾದರೆ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಕಡ್ಡಾಯ. ಸಾಮಾನ್ಯವಾಗಿ ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 ಆಗಿರುತ್ತದೆ. ಆದರೆ ಕರೋನಾ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಎರಡು ಬಾರಿ ವಿಸ್ತರಿಸಿದೆ. ನಿರ್ದಿಷ್ಟ ಗಡುವಿಗಿಂತ ಮೊದಲು ಜೀವ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಪಿಂಚಣಿ ನಿಂತು ಹೋಗುತ್ತದೆ. 

4 /4

ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂಹೆಚ್ಚಿಸಲಾಗಿದೆ. ಹೊಸ ದರಗಳು ಇಂದಿನಿಂದ ಅಂದರೆ ಮಾರ್ಚ್ 1 ರಿಂದ ಜಾರಿಗೆ ಬಂದಿವೆ.