Liquor Price Hike: ಮದ್ಯಪ್ರಿಯರಿಗೊಂದು ಆಘಾತ , ಮದ್ಯದ ಬೆಲೆಯಲ್ಲಿ ಶೇ. 20ರಷ್ಟು ಹೆಚ್ಚಳ

Liquor Price Hike: ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಈಗ ಮದ್ಯಪಾನ ಮಾಡುವವರಿಗೆ  ಆಘಾತಕಾರಿ ಸುದ್ದಿಯಿದೆ. ಈಗ ಪ್ರತಿಯೊಂದು ಬಾಟಲಿಗೆ 20% ಹೆಚ್ಚು ಹಣ ಪಾವತಿಸಬೇಕಾಗುತ್ತದೆ. 

ನವದೆಹಲಿ : Liquor Price Hike: ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಈಗ ಮದ್ಯಪಾನ ಮಾಡುವವರಿಗೆ  ಆಘಾತಕಾರಿ ಸುದ್ದಿಯಿದೆ. ಈಗ ಪ್ರತಿಯೊಂದು ಬಾಟಲಿಗೆ 20% ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ, ಎಲ್ಲಾ ರೀತಿಯ ಮದ್ಯದ ಬೆಲೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ. ಪುದುಚೆರಿಯಲ್ಲಿ ಬೆಲೆಗಳು ಜುಲೈ 15 ರಿಂದಲೇ ಜಾರಿಗೆ ಬಂದಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪುದುಚೇರಿಯಲ್ಲಿ ಮದ್ಯದ ಬೆಲೆಯನ್ನು ಹೆಚ್ಚಿಸಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಪುದುಚೇರಿಯಲ್ಲಿ ಮದ್ಯದ ಬೆಲೆ ಕಡಿಮೆ ಎಂದೇ ಹೇಳಲಾಗಿದೆ.  

2 /5

ವಿಶೇಷವೆಂದರೆ, ಪುದುಚೇರಿಯ ಕೇಂದ್ರಾಡಳಿತ ಪ್ರದೇಶವು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಈ ವರ್ಷ ಏಪ್ರಿಲ್‌ನಲ್ಲಿ ಪುದುಚೇರಿ ಆಡಳಿತ ಮದ್ಯದ ಮೇಲಿನ 7.5 ವಿಶೇಷ ಕೋವಿಡ್ ಶುಲ್ಕವನ್ನು ರದ್ದುಪಡಿಸಿತ್ತು.   

3 /5

 ಏಪ್ರಿಲ್ 7 ರಂದು, ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸುಂದರರಾಜನ್ ಅವರು ಮದ್ಯದ ಬೆಲೆಯನ್ನು ಕಡಿಮೆ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದರು. ಇದರ ನಂತರ  ಮದ್ಯದ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಎಲ್ಲಾ ಪಬ್‌ಗಳು, ಮದ್ಯದಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಆದೇಶಿಸಲಾಗಿತ್ತು. ಇದರ ನಂತರ, ರಾಜ್ಯದ ಎಲ್ಲೆಡೆ ಅಗ್ಗದ ಮದ್ಯ ಲಭ್ಯವಿತ್ತು.  ಆದರೆ ಇದರಿಂದಾಗಿ ರಾಜ್ಯವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತೊಂದರೆ ಅನುಭವಿಸುವಂತಾಗಿತ್ತು.   

4 /5

ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವಿಶೇಷವಾಗಿ ತಮಿಳುನಾಡಿನಿಂದ ಪುದುಚೇರಿಯವರೆಗೆ ಜನರು ಬರುವುದನ್ನು ತಡೆಯಲು ಕಳೆದ ವರ್ಷ ಮೇ ತಿಂಗಳಲ್ಲಿ ವಿಶೇಷ ಶುಲ್ಕವನ್ನು  ವಿಧಿಸಲಾಗಿತ್ತು. 

5 /5

ಇನ್ನೊಂದೆಡೆ, ಗುವಾಹಟಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಒಂದು ತಿಂಗಳ ಕಾಲ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದು ಯಶಸ್ವಿಯಾದರೆ ಅದು ಇಡೀ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ರಾಜ್ಯ ಸಚಿವ ಪಿಜುಶ್ ಹಜಾರಿಕಾ ತಿಳಿಸಿದ್ದಾರೆ.