Smartphoneನಲ್ಲಿಅಡಗಿರುತ್ತದೆ ಬಹಳಷ್ಟು ವೈರಸ್, ನಿಮ್ಮ ಫೋನ್ ಸ್ವಚ್ಛವಾಗಿಡುವುದು ಹೇಗೆ ತಿಳಿಯಿರಿ

 ಫೋನ್‌ನ ಸ್ಕ್ರೀನ್ ನಲ್ಲಿ ಎಷ್ಟು ವೈರಸ್‌ಗಳಿರುತ್ತವೆ ಎನ್ನುವುದಕ್ಕೆ ಲೆಕ್ಕ ಇರುವುದಿಲ್ಲ. ಹೀಗಿರುವಾಗ ಫೋನ್ ಅನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. 

ನವದೆಹಲಿ : ಇಂದಿನ ಯುಗದಲ್ಲಿ, ಬಹುತೇಕ ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಾರೆ. ಸ್ಮಾರ್ಟ್ಫೋನ್ ಅನೇಕ ರೀತಿಯ ಕಾಯಿಲೆಗಳನ್ನು ಕಾರಣವಾಗುತ್ತದೆ ಎನ್ನುವದು ಎಲ್ಲರಿಗೂ ತಿಳಿದಿದೆ. ಫೋನ್‌ನ ಸ್ಕ್ರೀನ್ ನಲ್ಲಿ ಎಷ್ಟು ವೈರಸ್‌ಗಳಿರುತ್ತವೆ ಎನ್ನುವುದಕ್ಕೆ ಲೆಕ್ಕ ಇರುವುದಿಲ್ಲ. ಹೀಗಿರುವಾಗ ಫೋನ್ ಅನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಫೋನ್ ಅನ್ನು ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಅಥವಾ ಬಟ್ಟೆಯನ್ನು ಬಳಸುವುದು ಸಾಮಾನ್ಯ. ಆದರೆ ಇದಕ್ಕಾಗಿ ನೀವು ಮೃದುವಾದ ಬಟ್ಟೆಯನ್ನು ಬಳಸಿದರೆ, ನಂತರ ಸ್ಕ್ರೀನ್ ಮೇಲೆ ಯಾವುದೇ ಗೀರುಗಳು ಇರುವುದಿಲ್ಲ. ಅಲ್ಲದೆ, ಸ್ಕ್ರೀನ್ ಅನ್ನು ತುಂಬಾ ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ  ಮೈಕ್ರೋ ಫೈಬರ್ ಬಟ್ಟೆಯನ್ನು ಬಳಸಬಹುದು.

2 /5

ಫೋನ್‌ನ ಪರದೆಯನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಕ್ಲಿನಿಂಗ್ ಲಿಕ್ವಿಡ್ ಸಿಗುತ್ತವೆ. ಅದರ ಸಹಾಯದಿಂದ, ಸ್ಕ್ರೀನ್ ಅನ್ನು  ಸ್ವಚ್ಛಗೊಳಿಸಬಹುದು. ಬಟ್ಟೆಯ ಮೇಲೆ ಕೆಲವು ಹನಿ  ಲಿಕ್ವಿಡ್ ಹಾಕಿ ಫೋನ್‌ನ ಪರದೆಯನ್ನು ಗೊಳಿಸಬಹುದು.    

3 /5

ಫೋನ್‌ನ ಸ್ಕ್ರೀನ್  ಸ್ವಚ್ಛಗೊಳಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಸ್ಕ್ರೀನ್ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಲಘುವಾಗಿ ಸ್ಕ್ರೀನ್ ಅನ್ನು  ಸ್ವಚ್ಛಗೊಳಿಸಬೇಕು.   

4 /5

ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಅನ್ನು ಸಹ ಬಳಸಬಹುದು. ಟೂತ್‌ಪೇಸ್ಟ್ ಅನ್ನು ಸ್ಕ್ರೀನ್ ಪರದೆಯ ಮೇಲೆ ಹಚ್ಚಿ ನಿಧಾನವಾಗಿ ಉಜ್ಜಬೇಕು. ಅದರ ನಂತರ ಅದನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.  

5 /5

ಫೋನ್ ಸ್ಕ್ರೀನ್   ಸ್ವಚ್ಛವಾಗಿಡಲು, ಉತ್ತಮ ಕವರ್ ಹಾಕುವುದು ಕೂಡಾ ಅಗತ್ಯವಾಗಿದೆ.  ಫೋನ್‌ ಕವರ್ ಹಾಕುವುದರಿಂದ  ಸ್ಕ್ರೀನ್ ಹಾಳಾಗದಂತೆ ತಡೆಯುತ್ತದೆ.