Suicide Cases: ಆತ್ಮಹತ್ಯೆಗೆ ಶರಣಾದ ಸಿನಿಮಾ ರಂಗದ ತಾರೆಯರಿವರು.. ಹಲವರ ಸಾವು ನಿಗೂಢ!

Bollywood Suicide Cases: ಚಲನಚಿತ್ರ ಅಥವಾ ಟಿವಿ ಉದ್ಯಮಕ್ಕೆ ಸಂಬಂಧಿಸಿದ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಾಗ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ.

Bollywood Suicide Cases: ಚಲನಚಿತ್ರ ಅಥವಾ ಟಿವಿ ಉದ್ಯಮಕ್ಕೆ ಸಂಬಂಧಿಸಿದ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಾಗ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಆದರೆ ಕೆಲವು ಬಾಲಿವುಡ್ ತಾರೆಯರ ಸಾವಿನ ನಿಗೂಢತೆ ಎಷ್ಟೋ ವರ್ಷಗಳು ಕಳೆದರೂ ಇಂದಿಗೂ ಬಗೆಹರಿದಿಲ್ಲ. ಅಂತಹ ಸೆಲೆಬ್ರಿಟಿಗಳ ಬಗ್ಗೆ ತಿಳಿದುಕೊಳ್ಳೋಣ...

1 /5

ಬಾಲಿವುಡ್‌ನಲ್ಲಿ‌ ಸಾವು ಭಯ ಹುಟ್ಟಿಸಬಹುದು ಎಂಬುದಕ್ಕೆ ಜಿಯಾ ಖಾನ್ ನಿಧನ ಕೂಡ ಉದಾಹರಣೆಯಾಗಿದೆ. ಈ ಕಾರಣಕ್ಕಾಗಿಯೇ ಕೆಲವೊಮ್ಮೆ ಅನೇಕ ನಟ - ನಟಿಯರು ಬಣ್ಣದ ಜಗತ್ತಿನಲ್ಲಿ ಒಂಟಿಯಾಗಿ, ಆತ್ಮಹತ್ಯೆಯಂತಹ ಹೆಜ್ಜೆ ಇಡುತ್ತಾರೆ. ಜಿಯಾ ಖಾನ್ 3 ಜೂನ್ 2013 ರಂದು ಆತ್ಮಹತ್ಯೆ ಮಾಡಿಕೊಂಡರು. 

2 /5

ಗುರು ದತ್ ಕೂಡ ಅವರ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿಗೆ ಮದ್ಯಪಾನ ಮತ್ತು ನಿದ್ರೆ ಮಾತ್ರೆ ಸೇವನೆ ಕಾರಣ ಎನ್ನಲಾಗಿದೆ. ಅವರ ಪತ್ನಿ ಗೀತಾ ದತ್ ಅವರೊಂದಿಗಿನ ಸಂಬಂಧವು ಆ ಹೊತ್ತಲ್ಲಿ ಹದಗೆಟ್ಟಿತ್ತು. ಖ್ಯಾತ ನಟಿ ವಹೀದಾ ರೆಹಮಾನ್ ಮತ್ತು ಗುರು ದತ್‌ ಮಧ್ಯೆ ಸಂಬಂಧದ ಬಗ್ಗೆ ಗಾಸಿಪ್‌ ಶುರುವಾಗಿತ್ತು. ನಟಿ ವಹೀದಾ ರೆಹಮಾನ್ ಸಹ ಗುರು ದತ್ ಅವರಿಂದ ದೂರವಾಗಿದ್ದರು ಎಂದು ಹೇಳಲಾಗುತ್ತದೆ.

3 /5

1993 ರಲ್ಲಿ, 19 ನೇ ವಯಸ್ಸಿನಲ್ಲಿ, ದಿವ್ಯಾ ಭಾರತಿ ಆತ್ಮಹತ್ಯೆ ಮಾಡಿಕೊಂಡರು. ಐದನೇ ಮಹಡಿಯ ಫ್ಲಾಟ್‌ನ ಕಿಟಕಿಯಿಂದ ಬಿದ್ದು ಅವರು ಸಾವನ್ನಪ್ಪಿದ್ದಾರೆ. ಇಷ್ಟು ವರ್ಷ ಕಳೆದರೂ ನಟಿಯ ಸಾವಿನ ರಹಸ್ಯ ಬಯಲಾಗಿಲ್ಲ. 

4 /5

ಬಾಲಿವುಡ್‌ನ ಹಿಂದಿನ ನಟಿ ಪರ್ವೀನ್ ಬಾಬಿ ಅವರು ತಮ್ಮ ಫ್ಲಾಟ್‌ನಲ್ಲಿ ಬಹಳ ನೋವಿನಿಂದ ಸಾವನ್ನಪ್ಪಿದ್ದಾರೆ. 2005 ರಲ್ಲಿ, ಹಲವಾರು ದಿನಗಳವರೆಗೆ ತನ್ನ ನೆರೆಹೊರೆಯವರಿಗೆ ಕಾಣಿಸದೇ ಉಳಿದಿದ್ದರು. ಆಗ ಹೋಗಿ ನೋಡಿದಾಗ ಅವರು ಇಹಲೋಕ ತ್ಯಜಿಸಿದ್ದ ಸಂಗತಿ ಬಯಲಾಗಿತ್ತು.

5 /5

ಸುಶಾಂತ್ ಸಿಂಗ್ ರಜಪೂತ್ 14 ಜೂನ್ 2020 ರಂದು ನಿಧನರಾದರು. 34 ವರ್ಷದ ನಟ ಮುಂಬೈನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ನಂತರ, ಈ ವಿಷಯದಲ್ಲಿ ಅನೇಕ ತಿರುವುಗಳಿದ್ದವು ಆದರೆ ಎಲ್ಲವೂ ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿತು. ಇದುವರೆಗೂ ಪ್ರಕರಣದ ನಿಗೂಢತೆಯನ್ನು ಭೇದಿಸಲಾಗಿಲ್ಲ.