ಮಾರ್ಚ್ 22 ರಂದು ಮೀನ ರಾಶಿಯಲ್ಲಿ ಗುರು-ಚಂದ್ರರ ಮೈತ್ರಿ, ಹೊಸ ವರ್ಷದಲ್ಲಿ 3 ರಾಶಿಗಳ ಜನರ ಮೇಲೆ ಭಾರಿ ಧನವೃಷ್ಟಿ!

Rajyog In Meen: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 22 ರಂದು ಮೀನ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಮೂರು ರಾಶಿಗಳ ಜಾತಕದವರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಈ ದಿನ ಹಿಂದೂ ಹೊಸ ವರ್ಷ ಕೂಡ ಆರಂಭವಾಗುತ್ತಿರುವ ಕಾರಣ ಹೊಸ ವರ್ಷದ ಆರಂಭದಲ್ಲಿ ಗುರು ಈ ಮೂರು ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿಗೆ ಕಾರಣನಾಗಲಿದ್ದಾನೆ.
 

Jupiter-Moon Conjunction In Pisces: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಪರಿವರ್ತನೆ ಹಾಗೂ ಅವುಗಳ ನಡುವಿನ ಮೈತ್ರಿ ಹಲವು ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಈ ಶುಭ-ಅಶುಭ ಯೋಗಗಳು ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಭಾರಿ ಪ್ರಭಾವ ಬೀರುತ್ತವೆ. ಬರುವ ಮಾರ್ಚ್ 22 ರಂದು ಮೀನ ರಾಶಿಯಲ್ಲಿ ಗುರು ಮತ್ತು ಚಂದ್ರನ ಮೈತ್ರಿಯಿಂದ ಗಜಕೇಸರಿ ರಾಜಯೋಗವು ನಿರ್ಮಾಣಗೊಳ್ಳುತ್ತಿವೆ. ಮಾರ್ಚ್ 22 ರಂದು ಈ ರಾಜಯೋಗ ರಚನೆಯಾಗಲಿದೆ. ಅಲ್ಲದೆ, ಈ ದಿನದಿಂದಲೇ ಹಿಂದೂ ಹೊಸ ವರ್ಷ ಪ್ರಾರಂಭವಾಗಲಿದೆ. ಹೀಗಾಗಿ ಈ ರಾಜಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ 3 ರಾಶಿಗಳ ಜನರು ಇದರಿಂದ ಅಪಾರ ಧನಾತ್ಮಕ ಪರಿಣಾಮಗಳನ್ನು ಅನುಭವಿಸಲಿದ್ದಾರೆ. ಇದು ಆರ್ಥಿಕ ಲಾಭ ಮತ್ತು ಅಪಾರ ಪ್ರಗತಿಗೆ ಕಾರಣವಾಗಲಿದೆ. ಅದೃಷ್ಟವಂತ ಆ 3 ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Powerful Shani In Aquarius: ಶೀಘ್ರದಲ್ಲೇ ಸ್ವರಾಶಿಯಲ್ಲಿ ಶನಿಯ ಉಚ್ಛ ಭಾವ ಸಂಚಾರ ಆರಂಭ, 4 ರಾಶಿಗಳ ಜನರಿಗೆ ಅದೃಷ್ಟವೋ ಅದೃಷ್ಟ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /3

ಮೀನ ರಾಶಿ- ನಿಮ್ಮ ರಾಶಿಯಲ್ಲಿಯೇ ಈ ರಾಜಯೋಗ ನಿರ್ಮಾಣಗೊಳ್ಳಲಿದೆ. ನಿಮಗೆ ಗಜಕೇಸರಿ ರಾಜಯೋಗವು ಅನುಕೂಲಕರವಾಗಿದೆ ಎಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವವು ಸುಧಾರಿಸಲಿದೆ. ಇದರೊಂದಿಗೆ ಆತ್ಮಸ್ಥೈರ್ಯವೂ ಹೆಚ್ಚಾಗಲಿದೆ. ಇದೇ ವೇಳೆ, ನೀವು ಆರ್ಥಿಕ ವಿಷಯಗಳಲ್ಲಿ ಮತ್ತು ವ್ಯವಹಾರದಲ್ಲಿ ಪ್ರಯೋಜನಗಳನ್ನು ಪಡೆಯುವಿರಿ. ಈ ಅವಧಿಯಲ್ಲಿ, ನೀವು ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಈ ಸಮಯವನ್ನು ನಿಮಗೆ ತುಂಬಾ ಮಂಗಳಕರವಾಗಿದೆ ಮತ್ತು ಯಶಸ್ವಿ ಸಾಬೀತಾಗಲಿದೆ. ಅಲ್ಲದೆ, ಈ ಸಮಯದಲ್ಲಿ ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು. ಅಲ್ಲದೆ, ವಿವಾಹಿತರ ಸಂಬಂಧವು ಗಟ್ಟಿಯಾಗುತ್ತದೆ. ಈ ಅವಧಿಯಲ್ಲಿ, ನಿಮ್ಮ ಬಾಲಸಂಗಾತಿಯ ಪ್ರಗತಿಯನ್ನು ಕೂಡ ನೀವು ಗಮನಿಸುವಿರಿ.   

2 /3

ಧನು ರಾಶಿ- ಗಜಕೇಸರಿ ರಾಜಯೋಗವು ಧನು ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ದ್ವಿತೀಯ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ನೀವು ಹಠಾತ್ ಹಣವನ್ನು ಪಡೆಯಬಹುದು. ಅಲ್ಲದೆ, ಉದ್ಯಮಿಗಳು ಈ ಅವಧಿಯಲ್ಲಿ ಹೊಸ ವ್ಯವಹಾರವನ್ನು ಆರಂಭಿಸುವ ಬಗ್ಗೆ ಯೋಚಿಸಬಹುದು ಅಥವಾ ಈ ಅವಧಿಯಲ್ಲಿ ಹೊಸ ಒಪ್ಪಂದವನ್ನು ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ಮಾಧ್ಯಮದವರು, ಫಿಲ್ಮ್ ಲೈನ್, ಮಾರ್ಕೆಟಿಂಗ್ ಕೆಲಸ ಮಾಡುವವರಿಗೆ, ಈ ಸಮಯವು ಅತ್ಯದ್ಭುತ ಸಾಬೀತಾಗಲಿದೆ.  

3 /3

ಕರ್ಕ ರಾಶಿ- ಗಜಕೇಸರಿ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ನವಮೇಶನ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದು ಅದೃಷ್ಟ ಮತ್ತು ವಿದೇಶಿ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ನೀವು ಈ ಸಮಯದಲ್ಲಿ ಅಪಾರ ಅದೃಷ್ಟವನ್ನು ಪಡೆಯಬಹುದು. ಈ ಅವಧಿಯಲ್ಲಿ ನೀವು ವಿದೇಶ ಪ್ರವಾಸ ಕೂಡ ಮಾಡಬಹುದು. ಮತ್ತೊಂದೆಡೆ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಈ ಸಮಯವು ಅತ್ಯುತ್ತಮ ಸಾಬೀತಾಗಲಿದೆ.  ಅಲ್ಲದೆ, ಯಾವುದೇ ಸರ್ಕಾರಿ ಕೆಲಸದಲ್ಲಿ ಯಶಸ್ಸು ಪಡೆಯಲು ಇತ್ತೀಚೆಗೆ ಯಾವುದಾದರೊಂದು ಪರೀಕ್ಷೆಯನ್ನು ನೀಡಿದವರಿಗೆ ಈ ಸಮಯದಲ್ಲಿ ಯಶಸ್ಸು ಪ್ರಾಪ್ತಿಯಾಗುವ ನಿರೀಕ್ಷೆಯಿದೆ. ನಿಂತು ಹೋದ ನಿಮ್ಮ ಕೆಲಸ ಕಾರ್ಯಗಳು ಮತ್ತೆ ಆರಂಭಗೊಳ್ಳಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)