ಮಗುವಿಗೆ ಜನ್ಮ ನೀಡಿದ ಮೇಲೆ ನಿಮ್ಮ ಎಲ್ಲಾ ಸಮಯವು ಮಗುವಿನ ಆರೈಕೆಯಲ್ಲಿಯೇ ಕಳೆದು ಹೋಗುತ್ತದೆ. ಹಾಲುಣಿಸುವ ಮಹಿಳೆಯರು ಕೆಲವು ಅಭ್ಯಾಸಗಳನ್ನು ಅನುಸರಿಸಬೇಕು.
ಬೆಂಗಳೂರು : ತಾಯಿಯಾದ ಮಹಿಳೆ ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಜೀವಸತ್ವಗಳನ್ನು ತೆಗೆದುಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ. ಮಗುವಿಗೆ ಜನ್ಮ ನೀಡಿದ ಮೇಲೆ ನಿಮ್ಮ ಎಲ್ಲಾ ಸಮಯವು ಮಗುವಿನ ಆರೈಕೆಯಲ್ಲಿಯೇ ಕಳೆದು ಹೋಗುತ್ತದೆ. ಹಾಲುಣಿಸುವ ಮಹಿಳೆಯರು ಕೆಲವು ಅಭ್ಯಾಸಗಳನ್ನು ಅನುಸರಿಸಬೇಕು. ಪೌಷ್ಟಿಕ ತಜ್ಞರು, ಸ್ತನ್ಯಪಾನ ಮಾಡುವ ಮಹಿಳೆಯರಿಗೆ ಅಂತಹ ಕೆಲವು ಸೂಪರ್ ಫುಡ್ ಗಳನ್ನು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹಾಲುಣಿಸುವ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿರುವ ವಿಟಮಿನ್‌ಗಳು ಪಪ್ಪಾಯದಲ್ಲಿವೆ. ಹಾಲುಣಿಸುವ ಮಹಿಳೆಯರಿಗೆ ಇದು 'ಸೂಪರ್‌ಫುಡ್' . ಎದೆಹಾಲಿನ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಈ ಹಣ್ಣು ಸಹಾಯ ಮಾಡುತ್ತದೆ.
ಓಟ್ ಮೀಲ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಜೀರ್ಣಿಸಿಕೊಳ್ಳಲು ತುಂಬಾ ಸುಲಭ ಮಾತ್ರವಲ್ಲ, ಅದರಲ್ಲಿರುವ ಪೌಷ್ಟಿಕಾಂಶ ಗುಣಲಕ್ಷಣಗಳು ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಕೆಲಸ ಮಾಡುತ್ತದೆ. ಓಟ್ ಮೀಲ್ ನಲ್ಲಿ ನಾರಿನಂಶವೂ ಅಧಿಕವಾಗಿದೆ.
ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎಂಬ ಪೌಷ್ಟಿಕಾಂಶ ಸಮೃದ್ಧವಾಗಿರುತ್ತದೆ. ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳು ಮತ್ತು ವಿಟಮಿನ್ ಬಿ ಕೂಡಾ ಇದರಲ್ಲಿ ಹೇರಳವಾಗಿರುತ್ತದೆ. ಈ ಸೂಪರ್ ಆಹಾರವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಬಾಳೆಹಣ್ಣು ಒಂದು ಉತ್ತಮ ಪ್ರೊಬಯಾಟಿಕ್. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಪ್ರಸವಾನಂತರದ ಖಿನ್ನತೆಯ ವಿರುದ್ಧ ಹೋರಾಡಲು ಮತ್ತು ಹಾಲುಣಿಸುವ ತಾಯಂದಿರ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತುವು ಮತ್ತು ವಿಟಮಿನ್ ಕೆ ಮತ್ತು ಬಿ ವಿಟಮಿನ್‌ಗಳಂತಹ ಅಗತ್ಯವಾದ ಖನಿಜಗಳಲ್ಲಿ ಸಮೃದ್ಧವಾಗಿರುವ ಬಾದಾಮಿ ಪೌಷ್ಟಿಕಾಂಶವಿರುವ ಸೂಪರ್ ಫುಡ್. ಇಷ್ಟು ಮಾತ್ರವಲ್ಲದೆ, ಅವು ಅಗತ್ಯವಾದ ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಬಾದಾಮಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ನನಂತರ ಅದನ್ನು ಬೆಳಗ್ಗೆ ತಿನ್ನಬೇಕು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)