Summer Hacks: ಸುಡುವ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸುವ ಬಜೆಟ್ ಫ್ರೆಂಡ್ಲಿ ಉಪಾಯಗಳಿವು ..!

ಕೆಲವು ಸುಲಭವಾದ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆಯನ್ನು ಹೇಗೆ ತಂಪಾಗಿಡಬಹುದು ಎನ್ನುವುದನ್ನು ಇಲ್ಲಿ ತಿಳಿಯೋಣ. 

ಬೆಂಗಳೂರು  : ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲ ಧಗೆ ತುಸು ಜಾಸ್ತಿಯೇ ಆಗಿದೆ.  ಬಿಸಿಲ ಕಾರಣದಿಂದಾಗಿ, ಜನರು ಕೂಡಾ ಮನೆಯಲ್ಲಿಯೇ ಉಳಿಯಲು ಬಯಸುತ್ತಾರೆ. ಆದರೆ ಮನೆಯೊಳಗೇ ಕೂಡಾ ಆರಾಮದಿಂದ ಇರುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಕೆಲವು ಸುಲಭವಾದ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆಯನ್ನು ಹೇಗೆ ತಂಪಾಗಿಡಬಹುದು ಎನ್ನುವುದನ್ನು ಇಲ್ಲಿ ತಿಳಿಯೋಣ. ಇವುಗಳಿಗಾಗಿ ನೀವು ಹೆಚ್ಚು ಖರ್ಚು ಕೂಡಾ ಮಾಡಬೇಕಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬೇಸಿಗೆ ಕಾಲದಲ್ಲಿ ಡೆಸರ್ಟ್ ಕೂಲರ್ ಬಳಸಿ. ಎಸಿಗೆ ಹೋಲಿಸಿದರೆ ಇದು ಕೇವಲ 10 ಪ್ರತಿಶತದಷ್ಟು ವಿದ್ಯುತ್ ಅನ್ನು ಬಳಸಿಕೊಂಡು ನಿಮ್ಮ ಕೋಣೆಯನ್ನು ತಂಪಾಗಿಸುತ್ತದೆ. ನಿಮ್ಮ ಮನೆಯಲ್ಲಿ ಡೆಸರ್ಟ್ ಕೂಲರ್ ಅನ್ನು ಅಳವಡಿಸುವ ಮೂಲಕ ಕಡಿಮೆ ವೆಚ್ಚದಲ್ಲಿ ಶಾಖದಿಂದ ಪರಿಹಾರವನ್ನು ಪಡೆಯಬಹುದು.

2 /5

ಶಾಖವನ್ನು ತಪ್ಪಿಸಲು, ಮನೆಯ ಪರದೆಗಳನ್ನು ನೀರಿನಿಂದ ತೇವಗೊಳಿಸಿ. ಈ ತಂತ್ರವನ್ನು ಪ್ರಾಚೀನ ಈಜಿಪ್ಟ್‌ನಲ್ಲಿ ಬಳಸಲಾಗುತ್ತಿತ್ತು. ಪರದೆಗಳು ಒದ್ದೆಯಾದಾಗ, ಸೂರ್ಯನ ಶಾಖವು ಕಡಿಮೆ ಪ್ರಮಾಣದಲ್ಲಿ ಮನೆಯೊಳಗೆ ಬರುತ್ತದೆ. ಇದು ನಿಮ್ಮ ಮನೆಯನ್ನು ತಂಪಾಗಿರಿಸುತ್ತದೆ.

3 /5

ಶಾಖವನ್ನು ಕಡಿಮೆ ಮಾಡಲು , ಮತ್ತು ಮನೆಯನ್ನು ತಂಪಾಗಿರಿಸಲು ಮಿಸ್ಟಿಂಗ್ ಫ್ಯಾನ್ ಬಳಸಿ. ಮಿಸ್ಟಿಂಗ್ ಫ್ಯಾನ್‌ಗಳು ನೀರನ್ನು ಗಾಳಿಯಲ್ಲಿ ಬೀಸುತ್ತವೆ, ಇದು ಸುತ್ತಮುತ್ತಲಿನ ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಆವಿಯಾದಾಗ ಗಾಳಿಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಈ ಫ್ಯಾನ್ ಗಳು ವಿದ್ಯುತ್ ಬಳಕೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಳು ಸಹಾಯ ಮಾಡುತ್ತದೆ.   

4 /5

ಸೀಲಿಂಗ್ ಫ್ಯಾನ್ ತಂಪಾದ ಗಾಳಿಯನ್ನು ನೀಡುವುದಿಲ್ಲ. ಕೊಠಡಿಯನ್ನು ತಂಪಾಗಿರಿಸಲು, ನೀವು ಎಸಿ ರನ್ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಆಫ್ ಮಾಡಿ. ಅದರ ನಂತರ ಸೀಲಿಂಗ್ ಫ್ಯಾನ್ ಅನ್ನು ಚಲಾಯಿಸಿ. ಸೀಲಿಂಗ್ ಫ್ಯಾನ್ ಅನ್ನು ಚಾಲನೆ ಮಾಡುವುದರಿಂದ, ತಂಪಾದ ಗಾಳಿಯ ಪರಿಣಾಮವು ಹಾಗೆಯೇ ಉಳಿಯುತ್ತದೆ. ಇದು ಶಾಖದಿಂದ ಪರಿಹಾರವನ್ನು ನೀಡುತ್ತದೆ. ಎಸಿಯನ್ನು ನಿರಂತರವಾಗಿ ಚಾಲನೆ ಮಾಡದ ಕಾರಣ, ನಿಮ್ಮ ವಿದ್ಯುತ್ ಬಳಕೆಯೂ ಕಡಿಮೆ ಇರುತ್ತದೆ.

5 /5

ಇನ್ನೂ ಕೆಲವರು ಹಳೆಯ ರೀತಿಯ ಇನ್‌ಕ್ಯಾಂಡಿಸೆಂಟ್ ಬಲ್ಬ್ ಅನ್ನು ಬಳಸುತ್ತಾರೆ. ಅಂತಹ ಬಲ್ಬ್ ಗಳು ಕೋಣೆಯ ಉಷ್ಣತೆಯನ್ನು ಹೆಚ್ಚಿಸುತ್ತವೆ.  ಎನರ್ಜಿ ಎಫಿಷಿಯೆಂಟ್  ಬಲ್ಬ್  ಗಳ ನ್ನು ಬಳಸಿ ನೋಡಿ.  ಎಲ್‌ಇಡಿ ಬಲ್ಬ್‌ಗಳು ಕಡಿಮೆ ವಿದ್ಯುತ್‌ನೊಂದಿಗೆ ಮನೆ ಬೆಳಗುತ್ತವೆ ಮತ್ತು ಶಾಖವನ್ನು ಹೆಚ್ಚಿಸುವುದಿಲ್ಲ.