Stock market: ಹೊಸ ವರ್ಷಕ್ಕೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಈ ಸಲಹೆ ಪಾಲಿಸಿ

Stock Market Investment Tips: ಸಣ್ಣ ಮೊತ್ತದ ಷೇರುಗಳು, ನಷ್ಟದಲ್ಲಿರುವ ಕಂಪನಿಗಳ ಷೇರುಗಳನ್ನು ಖರೀದಿಸಿದರೆ ನೀವು ಕೈಸುಟ್ಟುಕೊಳ್ಳುವುದು ಗ್ಯಾರಂಟಿ. ಹೀಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡು ಹೂಡಿಕೆ ಮಾಡಿ.

Stock market Investment Tips: ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಸ್ವಲ್ಪ ಎಚ್ಚರಿಕೆ ವಹಿಸಬೇಕು. ನೀವು ನಿಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡದಿದ್ದರೆ ಕೈಸುಟ್ಟುಕೊಳ್ಳುವುದು ಗ್ಯಾರಂಟಿ. ಅತ್ಯುತ್ತಮ ಷೇರುಗಳಲ್ಲಿ ಹೂಡಿಕೆ ಮಾಡದಿದ್ದರೆ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಹೊಸ ವರ್ಷದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಕೆಲ ಹೂಡಿಕೆ ಸಲಹೆಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಭಾರತೀಯ ಷೇರು ಮಾರುಕಟ್ಟೆ ಇತ್ತೀಚೆಗೆ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಎತ್ತರ ತಲುಪಿದ ಬಳಿಕ ಸ್ವಲ್ಪ ಕುಸಿತ ಕಂಡಿದೆ. ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳಲ್ಲಿ ಬಾಕಿಯಿವೆ. ಹೀಗಾಗಿ ಹೊಸ ವರ್ಷದಲ್ಲಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಯೋಜನೆ ಇದ್ದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹಣ ಹೂಡಿಕೆ ಮಾಡದಿದ್ದರೆ, ಕೈಸಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಕೆಲ ಹೂಡಿಕೆ ಸಲಹೆಗಳು ಇಲ್ಲಿವೆ ನೋಡಿ.

2 /6

ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಯಾವುದೇ ಕಂಪನಿಯನ್ನು ಎಚ್ಚರಿಕೆಯಿಂದ ಆರಿಸಬೇಕು. ಸ್ಟಾಕ್ ಮಾರ್ಕೆಟ್ ಪ್ರಸ್ತುತ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಮತ್ತು 52 ವಾರದ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವ ಅನೇಕ ಷೇರುಗಳಿವೆ. ಹೀಗಾಗಿ ಹಣ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯ ಪಡೆಯುವ ಸಾಧ್ಯತೆಗಳಿರುವ ಕಂಪನಿಯನ್ನು ಆಯ್ಕೆ ಮಾಡುವುದು ಉತ್ತಮ.

3 /6

ನೀವು ಷೇರು ಮಾರುಕಟ್ಟೆಯಲ್ಲಿ ಉತ್ತಮ ಆದಾಯ ಗಳಿಸಬಯಸಿದರೆ ದೀರ್ಘಕಾಲ ಹೂಡಿಕೆಯ ಗುರಿ ಇಟ್ಟುಕೊಳ್ಳಿ. ಒಳ್ಳೆಯ ಕಂಪನಿಯ ಷೇರುಗಳು ಯಾವಾಗಲೂ ದೀರ್ಘಾವಧಿಯಲ್ಲಿ ಉತ್ತಮ ಆದಾಯ ನೀಡುತ್ತದೆ. ಹೀಗಾಗಿ ಅಲ್ಪಾವಧಿಗೆ ಷೇರುಗಳನ್ನು ಖರೀದಿಸಬೇಡಿ. ದೀರ್ಘಕಾಲದವರೆಗೆ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯ ಗಳಿಸಿರಿ.

4 /6

ಷೇರು ಮಾರುಕಟ್ಟೆಯಲ್ಲಿ ದೊಡ್ಡ ಕುಸಿತಕ್ಕಾಗಿ ಕಾಯಬೇಡಿ. ಉತ್ತಮ ಕಂಪನಿಯ ಷೇರುಗಳು ಉತ್ತಮ ಬೆಲೆಗೆ ಲಭ್ಯವಿದ್ದರೆ ಖರೀದಿಸಬಹುದು. ಅನೇಕ ಬಾರಿ ಜನರು ಷೇರುಪೇಟೆ ಕುಸಿತಕ್ಕಾಗಿ ಕಾಯುತ್ತಲೇ ಇರುತ್ತಾರೆ. ಆದರೆ ಆಗ ಮಾರುಕಟ್ಟೆಯು ಏರುತ್ತಲೇ ಇರುತ್ತದೆ. ಇದರಿಂದಾಗಿ ನಿಮಗೆ ಉತ್ತಮ ಅವಕಾಶವೂ ಕೈ ತಪ್ಪುತ್ತದೆ.

5 /6

ನೀವು ಷೇರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಷೇರುಗಳನ್ನಷ್ಟೇ ಖರೀದಿಸಬೇಕು. ನಿಮ್ಮ ತಿಳುವಳಿಕೆ ಮತ್ತು ಅನುಭವಕ್ಕೆ ಅನುಗುಣವಾಗಿ ಮಾತ್ರ ಷೇರು ಖರೀದಿಸಿ. ಕುರುಡಾಗಿ ಯಾವುದೇ ಷೇರುಗಳನ್ನು ಖರೀದಿಸಬೇಡಿ. ಇದರಲ್ಲಿ ನಷ್ಟವಾಗುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ ಎಚ್ಚರಿಕೆ ಅಗತ್ಯ.

6 /6

ವಿಶೇಷ ಸೂಚನೆ: ಷೇರು ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ತಜ್ಞರಿಂದ ಮಾಹಿತಿ ಪಡೆದುಕೊಳ್ಳಿ. ಸಣ್ಣ ಮೊತ್ತದ ಷೇರುಗಳು, ನಷ್ಟದಲ್ಲಿರುವ ಕಂಪನಿಗಳ ಷೇರುಗಳನ್ನು ಖರೀದಿಸಿದರೆ ನೀವು ಕೈಸುಟ್ಟುಕೊಳ್ಳುವುದು ಗ್ಯಾರಂಟಿ. ಹೀಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡು ಹೂಡಿಕೆ ಮಾಡಿ. ಇಲ್ಲಿ ಯಾವುದೇ ರೀತಿಯ ಹೂಡಿಕೆಗೆ Zee Kannada News ನಿಮಗೆ ಸಲಹೆ ನೀಡುವುದಿಲ್ಲ.