ಗುರು-ಶನಿಯ ವಿಶೇಷ ಕೃಪಾವೃಷ್ಟಿಯಿಂದ 3 ರಾಶಿಗಳ ಜನರ ಮನೆಯಂಗಳದಲ್ಲಿ ನಲಿದಾಡುವಳು ಧನಲಕ್ಷ್ಮಿ!

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಿನಲ್ಲಿ ಗಜಕೇಸರಿ ಹಾಗೂ ತ್ರಿಕೋನ ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಮೂರು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗ ರೂಪುತೊಳ್ಳುತ್ತಿದೆ. 
 

ಬೆಂಗಳೂರು: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಗೋಚರಿಸುವ ಮೂಲಕ ಇತರ ಗ್ರಹಗಳ ಜೊತೆಗೆ ಮಂತಿರಿ ಮಾಡಿಕೊಂಡು ಶುಭ ಯೋಗಗಳನ್ನು ರೂಪಿಸುತ್ತವೆ. ಈ ಶುಭ ಯೋಗಗಳು ಮಾನವ ಜೀವನ ಹಾಗೂ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತವೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು ಎರಡು ಶುಭಯೋಗಗಳು ನಿರ್ಮಾಣಗೊಳ್ಳುತ್ತಿವೆ. ಗಜಕೇಸರಿ ಮತ್ತು ತ್ರಿಕೋನ ರಾಜಯೋಗ (Spiritual News In Kannada). ಇವುಗಳಲ್ಲಿ ಗಜಕೇಸರಿ ರಾಜಯೋಗ ಒಟ್ಟು 4 ಬಾರಿ ರೂಪುಗೊಂಡರೆ ತ್ರಿಕೋನ ರಾಜಯೋಗ ಒಂದು ಬಾರಿ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ. ಮೂರು ರಾಶಿಗಳ ಜನರಿಗೆ ಇದರಿಂದ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗ ಪ್ರಾಪ್ತಿಯಾಗಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಭಾಗ್ಯ ಬದಲಾಗುತ್ತಿದೆ ಎನ್ನುತ್ತವೆ ಜೀವನದಲ್ಲಿ ಸಿಗುವ ಈ ಸಂಕೇತಗಳು... ಹಣದ ಸುರಿಮಳೆ ಗ್ಯಾರಂಟಿ!
 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 


 

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಿನಲ್ಲಿ ಗಜಕೇಸರಿ ಹಾಗೂ ತ್ರಿಕೋನ ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಮೂರು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗ ರೂಪುತೊಳ್ಳುತ್ತಿದೆ (Spiritual News In Kannada).   

2 /5

ತುಲಾ ರಾಶಿ: ನಿಮ್ಮ ಪಾಲಿಗೆ ಗಜಕೇಸರಿ ರಾಜಯೋಗ ಮತ್ತು ತ್ರಿಕೋನ ರಾಜಯೋಗ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಇದರ ಜೊತೆಗೆ ಕೌಟುಂಬಿಕ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ಕೋರ್ಟ್ ಕಚೇರಿಗಳಲ್ಲಿ ಜಯ ನಿಮ್ಮದಾಗಲಿದೆ. ವ್ಯಾಪಾರ ವರ್ಗದ ಜನರಿಗೆ ಧನಲಾಭದ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರ ವಿಸ್ತರಣೆಯ ಎಲ್ಲಾ ಸಾಧ್ಯತೆಗಳಿವೆ. ಸಂಗೀತ, ಚಲನಚಿತ್ರೋದ್ಯಮ, ರಂಗಭೂಮಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ.  

3 /5

ಮಕರ ರಾಶಿ: ಗಜಕೇಸರಿ ಹಾಗೂ ತ್ರಿಕೋನ ರಾಜಯೋಗ ರೂಪುಗೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಮನೆ-ಆಸ್ತಿಪಾಸ್ತಿ ಖರೀದಿಸುವ ಎಲ್ಲಾ ಸಾಧ್ಯತೆಗಳಿವೆ. ಇದಲ್ಲದೆ ಇತರೆ ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ. ಪಿತ್ರಾರ್ಜಿತ ಆಸ್ತಿಯಿಂದ ನಿಮಗೆ ಲಾಭ ಸಿಗುವ ಸಾಧ್ಯತೆ ಇದೆ. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಅತ್ತೆ ಮನೆಯವರ ಜೊತೆಗೆ ನಿಮ್ಮ ಸಂಬಂಧ ಸುಧಾರಣೆಯಾಗಲಿದೆ. ವಿವಾಹಿತರ ವೈವಾಹಿಕ ಜೀವನ ಸುಧಾರಿಸಲಿದೆ. ನಿಂತುಹೋದ ಕೆಲಸ ಕಾರ್ಯಗಳಿಗೆ ಮತ್ತೆ ವೇಗ ಸಿಗಲಿದೆ.  

4 /5

ಮೇಷ ರಾಶಿ: ಗಜಕೇಸರಿ ರಾಜಯೋಗ ಹಾಗೂ ತ್ರಿಕೋನ ರಾಜಯೋಗಗಳ ರೂಪುಗೊಳ್ಳುವಿಕೆ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ಬಾಳಸಂಗಾತಿ ಭಾಗ್ಯ ಪ್ರಾಪ್ತಿಯಾಗಲಿದೆ. ಧನ ಪ್ರಾಪ್ತಿಯ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವು ಯಾವುದಾದರೊಂದು ಯಾತ್ರೆಗೆ ಹೋಗುವ ಸಾಧ್ಯತೆ ಇದೆ. ಜೊತೆಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)