ಕರ್ನಾಟಕ ವಿಧಾನಸಭೆಯ 222 ಕ್ಷೇತ್ರಗಳಿಗೆ ಇಂದು ರಾಜ್ಯಾದ್ಯಂತ ಮತದಾನ ಆರಂಭವಾಗಿದೆ. ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದರಿತಿರುವ ಮತದಾರರು ತಾವೆಷ್ಟೇ ಬ್ಯುಸಿ ಆಗಿದ್ದರೂ ಕೂಡ ತಪ್ಪದೆ ಬಂದು ಮತದಾನ ಮಾಡಿದ್ದಾರೆ. ಹಾಗೆ ಮತದಾನ ಮಾಡಿದ ಹಿರಿಯರು, ವಿಕಲಚೇತನರು, ವಧು-ವರ ವಿಶೇಷ ಫೋಟೋಗಳು ನಿಮಗಾಗಿ...
ಶಿವಮೊಗ್ಗದ 87 ವರ್ಷದ ವೃದ್ಧೆಯೊಬ್ಬರು ವೀಲ್ ಚೇರ್'ನಲ್ಲಿಯೇ ಮತಗಟ್ಟೆ ಸಂಖ್ಯೆ 150ಕ್ಕೆ ಬಂದು ಮತದಾನ ಮಾಡಿದರು.
ಇಂದು ತನ್ನ ವಿವಾಹವಿದ್ದರೂ ಸಹ ಮದುವೆ ಉಡುಪಿನಲ್ಲಿಯೇ ಬಂದ ವಧುವೊಬ್ಬರು ಮಡಿಕೇರಿಯ ಮತಗಟ್ಟೆ ಸಂಖ್ಯೆ 131ರಲ್ಲಿ ಮತ ಚಲಾಯಿಸಿದರು.
ಮತದಾನ ಪ್ರತಿಯೊಬ್ಬರ ಹಕ್ಕು ಎಂದರಿತ ಯುವ ಜನತೆ, ವಿದ್ಯಾರ್ಥಿಗಳು ಬೆಂಗಳೂರಿನ ಸದಾಶಿವನಗರದಲ್ಲಿ ಮತಚಲಾಯಿಸಲು ಕಾದು ನಿಂತಿರುವುದು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ವೀಲ್ ಚೇರ್'ನಲ್ಲಿ ಬಂದು ಮತ ಚಲಾಯಿಸಿದ ವಿಶೇಷಚೇತನ ವ್ಯಕ್ತಿ.
ಮದುವೆಯ ಬಳಿಕ ಹಾವೇರಿಯ ಮತಗಟ್ಟೆ ಸಂಖ್ಯೆ 228ಕ್ಕೆ ಬಂದು ಮತ ಚಲಾಯಿಸಿದ ವರ ಅನೂ ಪೂರ್ಚಿ ಹಾಗೂ ವಧು ಹರ್ಷಿಕಾ.
ಮಂಗಳೂರಿನ ಬೊಂದೇಲ್ ನಿವಾಸಿ ವಾಯ್ಲಾ ಮರಿಯಾ ಫರ್ನಾಂಡಿಸ್ ತನ್ನ ಮದುವೆಗೆ ಮುನ್ನ ಬೊಂದೇಲ್ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದಾರೆ.