ಧಂತೇರಸ್‍‍ನಲ್ಲಿ ಅಗ್ಗದ ಚಿನ್ನವನ್ನು ಖರೀದಿಸಲು ಕೊನೆಯ ಅವಕಾಶ!

             

  • Nov 13, 2020, 12:55 PM IST

ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆದಾರರು ಭೌತಿಕ ರೂಪದಲ್ಲಿ ಚಿನ್ನವನ್ನು ಪಡೆಯುವುದಿಲ್ಲ. ಇದು ಭೌತಿಕ ಚಿನ್ನಕ್ಕಿಂತ ಸುರಕ್ಷಿತವಾಗಿದೆ. ಅದರಲ್ಲಿ ಹೂಡಿಕೆ ಮಾಡುವವರಿಗೆ ಗೋಲ್ಡ್ ಬಾಂಡ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.  

1 /5

ನವದೆಹಲಿ: ಧಂತೇರಸ್ (Dhanteras) ಸಂದರ್ಭದಲ್ಲಿ ನೀವು ಚಿನ್ನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಇಂದು ಉತ್ತಮ ಅವಕಾಶವಿದೆ. ನವೆಂಬರ್ 9 ರಂದು ಪ್ರಾರಂಭವಾದ ಸರ್ಕಾರದ ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ 2020-21ರ (Sovereign Gold Bond Scheme 2020-21) ಎಂಟನೇ ಸರಣಿಯು ಇಂದು ಕೊನೆಗೊಳ್ಳುತ್ತಿದೆ.  ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯಡಿ ನೀವು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಬಹುದು.

2 /5

ಆರ್‌ಬಿಐ ಸರ್ಕಾರದ ಪರವಾಗಿ ಸಾರ್ವಭೌಮ ಚಿನ್ನದ ಬಾಂಡ್‌ಗಳನ್ನು ನೀಡುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ 1 ಗ್ರಾಂ ಚಿನ್ನವನ್ನು ಖರೀದಿಸಬಹುದು. ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ 2015 ರ ನವೆಂಬರ್‌ನಲ್ಲಿ ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಸರ್ಕಾರವು ಎಂಟನೇ ಸರಣಿಯಲ್ಲಿ 1 ಗ್ರಾಂ ಚಿನ್ನದ ಬೆಲೆಯನ್ನು 5,177 ರೂ.ಗೆ ನಿಗದಿಪಡಿಸಿದೆ, ನೀವು ಆನ್‌ಲೈನ್‌ನಲ್ಲಿ ಖರೀದಿಸಿದರೆ ನಿಮಗೆ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿ ಸಿಗುತ್ತದೆ. ಅಂದರೆ ನೀವು ಪ್ರತಿ ಗ್ರಾಂಗೆ 5127 ರೂ. ಗೆ ಖರೀದಿಸಬಹುದು. ಈ ಮೊದಲು 7ನೇ ಸರಣಿಯಲ್ಲಿ ಚಿನ್ನದ ಬಾಂಡ್‌ಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,051 ಆಗಿತ್ತು. 

3 /5

ನವೆಂಬರ್ 2015ರಲ್ಲಿ ಸಾರ್ವಭೌಮ ಚಿನ್ನದ ಬಾಂಡ್‌ಗಳ ಮೊದಲ ಸಂಚಿಕೆಗೆ ಚಂದಾದಾರರಾದ ಹೂಡಿಕೆದಾರರು ಕಳೆದ ಐದು ವರ್ಷಗಳಲ್ಲಿ ಸುಮಾರು 93% ಆದಾಯವನ್ನು ಪಡೆದಿದ್ದಾರೆ. ಈ ಬಾಂಡ್‌ಗಳು ಎಂಟು ವರ್ಷಗಳಲ್ಲಿ ಮೆಚೂರ್ ಆಗುತ್ತವೆ. ಆದರೆ ಹೂಡಿಕೆದಾರರಿಗೆ ಐದು ವರ್ಷಗಳ ನಂತರ ಅದನ್ನು ಮಾರುವ ಅವಕಾಶವಿದೆ.

4 /5

ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆಯಡಿ ಹೂಡಿಕೆದಾರರು ಒಂದು ವರ್ಷದಲ್ಲಿ ಗರಿಷ್ಠ 400 ಗ್ರಾಂ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು.  ನೀವು ಸಾರ್ವಭೌಮ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಪ್ಯಾನ್ ಹೊಂದಿರಬೇಕು. ನೀವು ಇದನ್ನು ಎಲ್ಲಾ ವಾಣಿಜ್ಯ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿ, ಸ್ಮಾಲ್ ಫೈನಾನ್ಸ್ ಬ್ಯಾಂಕ್, ಪಾವತಿ ಬ್ಯಾಂಕ್ ಹೊರತುಪಡಿಸಿ), ಪೋಸ್ಟ್ ಆಫೀಸ್, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಅಥವಾ ನೇರವಾಗಿ ಏಜೆಂಟರ ಮೂಲಕ ಖರೀದಿಸಬಹುದು. ನೀವು ಎಸ್‌ಬಿಐನಿಂದ ಚಿನ್ನದ ಬಾಂಡ್‌ಗಳನ್ನು ಖರೀದಿಸಲು ಬಯಸಿದರೆ, ಬ್ಯಾಂಕ್ ವೆಬ್‌ಸೈಟ್ https://sbi.co.in/web/personal-banking/investments-deposits/govt-schemes/gold-banking/sovereign-gold-bond-scheme-sgb ಗೆ ಭೇಟಿ ನೀಡಿ ಪರಿಶೀಲಿಸಬಹುದು.

5 /5

ಸಾರ್ವಭೌಮ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆದಾರರು ಭೌತಿಕ ರೂಪದಲ್ಲಿ ಚಿನ್ನವನ್ನು ಪಡೆಯುವುದಿಲ್ಲ. ಇದು ಭೌತಿಕ ಚಿನ್ನಕ್ಕಿಂತ ಸುರಕ್ಷಿತವಾಗಿದೆ. ಅದರಲ್ಲಿ ಹೂಡಿಕೆ ಮಾಡುವವರಿಗೆ ಗೋಲ್ಡ್ ಬಾಂಡ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಬಾಂಡ್ ಮೆಚೂರಿಟಿ ಆದ ಬಳಿಕ ಹೂಡಿಕೆದಾರರು ಅದನ್ನು ಪುನಃ ಪಡೆದುಕೊಳ್ಳಲು ಹೋದಾಗ, ಆ ಸಮಯದ ಚಿನ್ನದ ಮೌಲ್ಯಕ್ಕೆ ಸಮನಾದ ಹಣವನ್ನು ಪಡೆಯುತ್ತಾರೆ. ಇದರ ದರವನ್ನು ಕಳೆದ ಮೂರು ದಿನಗಳ ಸರಾಸರಿ ಮುಕ್ತಾಯದ ಬೆಲೆಯಲ್ಲಿ ನಿಗದಿಪಡಿಸಲಾಗಿದೆ. ಹೂಡಿಕೆದಾರರಿಗೆ ಬಾಂಡ್ ಅವಧಿಯಲ್ಲಿ ಮೊದಲೇ ನಿರ್ಧರಿಸಿದ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.