South Stars in Bollywood: ಬಾಲಿವುಡ್ ನಲ್ಲೂ ಛಾಪು ಮೂಡಿಸಲಿರುವ ದಕ್ಷಿಣದ ತಾರೆಯರಿವರು .!

ಪುಷ್ಪದಲ್ಲಿ ಶ್ರೀವಲ್ಲಿಯಾಗಿ ಎಲ್ಲರ ಹೃದಯ ಗೆದ್ದಿರುವ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಬಾಲಿವುಡ್ ಚಿತ್ರಕ್ಕೂ ಪಾದಾರ್ಪಣೆ ಮಾಡಲಿದ್ದಾರೆ. 

ಬೆಂಗಳೂರು : ಬಾಲಿವುಡ್ ಮತ್ತು ಸೌತ್ ಸಿನಿಮಾಗಳ  ಮಧ್ಯೆ ಅದೇನೇ ತಿಕ್ಕಾಟ ನಡೆಯುತ್ತಿರಲಿ ದಕ್ಷಿಣದ ತಾರೆಯರು ಬಾಲಿವುಡ್ ನಲ್ಲೂ ಮಿಂಚುತ್ತಿರುವುದು ಮಾತ್ರ ಸುಳ್ಳಲ್ಲ. ಮನರಂಜನೆ ಮತ್ತು ಸಿನಿಮಾಕ್ಕೆ ಧರ್ಮ ಮತ್ತು ಜಾತಿ ಇಲ್ಲ. ಅಲ್ಲದೆ ಪ್ರತಿಭೆ ಯಿದ್ದರೆ ಜನ ಬಾಚಿ ತಬ್ಬಿಕೊಳ್ಳುತ್ತಾರೆ ಎನ್ನುವುದು ಕೂಡಾ ಈಗಾಗಲೇ ಸಾಬೀತಾಗಿದೆ. ಅನೇಕ ತಾರೆಯರು ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ರಶ್ಮಿಕಾ ಮಂದಣ್ಣ: ಪುಷ್ಪದಲ್ಲಿ ಶ್ರೀವಲ್ಲಿಯಾಗಿ ಎಲ್ಲರ ಹೃದಯ ಗೆದ್ದಿರುವ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಬಾಲಿವುಡ್ ಚಿತ್ರಕ್ಕೂ ಪಾದಾರ್ಪಣೆ ಮಾಡಲಿದ್ದಾರೆ. ಅವರು ಮೊದಲು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಚಿತ್ರದಲ್ಲಿ ಕಾಣಿಸಿಕೊಂಡರೆ, ಅವರು ಪ್ರಸ್ತುತ ರಣಬೀರ್ ಕಪೂರ್ ಜೊತೆ ಅನಿಮಲ್ ಚಿತ್ರೀಕರಣದಲ್ಲಿದ್ದಾರೆ. ಅಂದಹಾಗೆ, ರಶ್ಮಿಕಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲೇ ಉತ್ತರ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. (ಫೋಟೋ - ಸಾಮಾಜಿಕ ಮಾಧ್ಯಮ)   

2 /6

ಅರ್ಜುನ್ ರೆಡ್ಡಿ ಚಿತ್ರದ ನಟನೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ವಿಜಯ್ ದೇವರಕೊಂಡ ಇಂದು ಚಿರಪರಿಚಿತ ಹೆಸರು. ಅವರು ಅನನ್ಯ ಪಾಂಡೆ ಅವರೊಂದಿಗೆ ಸ್ಪೋರ್ಟ್ಸ್ ಡ್ರಾಮಾ ಚಲನಚಿತ್ರ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರ  ಶೀಘ್ರದಲ್ಲೇ ಬಿಡುಗಡೆಯಾಗಲಿದೆ. (ಫೋಟೋ - ಸಾಮಾಜಿಕ ಮಾಧ್ಯಮ)

3 /6

ಸೌತ್ ಸಿನಿಮಾ ಇಂಡಸ್ಟ್ರಿಯ ನಾಗ ಚೈತನ್ಯ, ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಮೂಲಕ ಬಾಲಿವುಡ್‌ ಪ್ರವೇಶಿಸಲಿದ್ದಾರೆ. ಆಗಸ್ಟ್ 11 ರಂದು ಬಈ ಚಿತ್ರ ಬಿ ಡುಗದೆಯಾಗಲಿದೆ  .ಇದರಲ್ಲಿ ಕರೀನಾ ಕಪೂರ್ ಕೂಡ ನಟಿಸಿದ್ದಾರೆ. ಚ(ಫೋಟೋ - ಸಾಮಾಜಿಕ ಮಾಧ್ಯಮ)

4 /6

ನಯನತಾರಾ: ಸೌತ್ ಚಿತ್ರರಂಗದಲ್ಲಿ ರಜನಿಕಾಂತ್ ಅವರಂತಹ ಸ್ಟಾರ್ ಜೊತೆ ತೆರೆ ಹಂಚಿಕೊಂಡಿರುವ ನಯನತಾರಾ ದೊಡ್ಡ ಹೆಸರು.  ಆದರೆ ಶೀಘ್ರದಲ್ಲೇ ಬಾಲಿವುಡ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಶಾರುಖ್ ಖಾನ್ ಜೊತೆ ಇವ್ರು ಪರದೆಯ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. (ಫೋಟೋ - ಸಾಮಾಜಿಕ ಮಾಧ್ಯಮ)

5 /6

ದಕ್ಷಿಣದ ಸೂಪರ್‌ಸ್ಟಾರ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ್ ಸೇತುಪತಿ ಮೇರಿ ಕ್ರಿಸ್‌ಮಸ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದ ನಾಯಕಿ ಕತ್ರಿನಾ ಕೈಫ್. ಈ ಚಿತ್ರವು 2017 ರಲ್ಲಿ ಬಿಡುಗಡೆಯಾದ ತಮಿಳಿನ ಮಾನಗರಂ ಚಿತ್ರದ ಹಿಂದಿ ರೀಮೇಕ್ ಆಗಿದೆ. (ಫೋಟೋ - ಸಾಮಾಜಿಕ ಮಾಧ್ಯಮ)

6 /6

ಶಾಲಿನಿ ಪಾಂಡೆ: ಸೌತ್‌ನ ಸೂಪರ್‌ಹಿಟ್ ಚಿತ್ರ ಅರ್ಜುನ್ ರೆಡ್ಡಿಯಲ್ಲಿ ತನ್ನ ಅಮೋಘ ನಟನೆಯ ಮೂಲಕ ಎಲ್ಲರ ಮನ್ ಗೆದ್ದಿರುವ ಶಾಲಿನಿ ಪಾಂಡೆ ಈಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಅವರು ಜಯೇಶ್‌ಭಾಯ್ ಜೋರ್ದಾರ್ ಚಿತ್ರದಲ್ಲಿ ರಣವೀರ್ ಸಿಂಗ್ ಎದುರು ಕಾಣಿಸಿಕೊಳ್ಳಲಿದ್ದಾರೆ. (ಫೋಟೋ - ಸಾಮಾಜಿಕ ಮಾಧ್ಯಮ)