ಸೂರ್ಯಗ್ರಹಣವು ಇಂದು ಭಾರತ, ಯುರೋಪ್ ಮತ್ತು ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯದಲ್ಲಿ ಗೋಚರಿಸಿದೆ.
ನವದೆಹಲಿ: ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಆ ಸ್ಥಿತಿಯನ್ನು ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ. ಒಂದು ಗ್ರಹ ಅಥವಾ ಉಪಗ್ರಹದ ನೆರಳು ಭಾಗಶಃ ಅಥವಾ ಸಂಪೂರ್ಣವಾಗಿ ಮತ್ತೊಂದರ ಮೇಲೆ ಬಿದ್ದಾಗ ಗ್ರಹಣವೆಂಬ ಖಗೋಳ ವಿದ್ಯಮಾನ ನಡೆಯುತ್ತದೆ. ನೆರಳಿನ ಹಾದಿಯ ಮಧ್ಯಭಾಗಕ್ಕೆ ಹತ್ತಿರವಾದಷ್ಟೂ ನಮಗೆ ಗ್ರಹಣವು ದೊಡ್ಡದಾಗಿ ಕಾಣುತ್ತದೆ.
ಸೂರ್ಯಗ್ರಹಣವು ಇಂದು ಭಾರತ, ಯುರೋಪ್ ಮತ್ತು ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯದಲ್ಲಿ ಗೋಚರಿಸಿದೆ. ಈ ಭಾಗಶಃ ಸೂರ್ಯಗ್ರಹಣವನ್ನು ದೇಶದ ಹಲವಾರು ಭಾಗಗಳಲ್ಲಿ ವೀಕ್ಷಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಸೂರ್ಯಗ್ರಹದ ಸುಂದರ ಫೋಟೋಗಳು ಇಲ್ಲಿವೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಭಾಗಶಃ ಸೂರ್ಯಗ್ರಹಣವು ದೆಹಲಿಯಲ್ಲಿ ಸಂಜೆ 4:29ಕ್ಕೆ ಸಂಭವಿಸಿತು, ಸಂಜೆ 6.26ಕ್ಕೆ ಮುಕ್ತಾಯವಾಯಿತು. ಈ ಅಪರೂಪದ ಖಗೋಳ ವಿದ್ಯಮಾನವನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು.
ಗ್ರಹಣವು ಸಾಯಂಕಾಲ ನಡೆಯುತ್ತಿರುವುದರಿಂದ, ಸೂರ್ಯಾಸ್ತದ ನಂತರ ನಡೆಯಲಿರುವ ಖಗೋಳ ವಿದ್ಯಮಾನದ ಅಂತ್ಯವು ಗೋಚರಿಸುವುದಿಲ್ಲ.
ಅಲ್ಯೂಮಿನೈಸ್ಡ್ ಮೈಲಾರ್, ಕಪ್ಪು ಪಾಲಿಮರ್, ವೆಲ್ಡಿಂಗ್ ಗ್ಲಾಸ್ನಂತಹ ಫಿಲ್ಟರ್ ಮತ್ತು ದೂರದರ್ಶಕದ ಮೂಲಕ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳುವುದು ಅತ್ಯಂತ ಸುರಕ್ಷಿತ ವಿಧಾನವಾದಿದೆ. ದೇಶದ ವಿವಿಧ ಭಾಗಗಳಲ್ಲಿ ಅಪರೂಪದ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡು ಲಕ್ಷಾಂತರ ಜನರು ಖುಷಿಪಟ್ಟಿದ್ದಾರೆ.
ಗ್ರಹಣದ ವೇಳೆ ಭಾರತದಲ್ಲಿ ಜನರು ಸಾಮಾನ್ಯವಾಗಿ ಮನೆಯೊಳಗೆ ಇರಲು ಬಯಸುತ್ತಾರೆ. ಈ ವೇಳೆ ಯಾವುದೇ ರೀತಿಯ ಆಹಾರ ಸೇವಿಸುವುದಿಲ್ಲ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಹೊಸ ಬಟ್ಟೆ ತೊಡಬೇಕು ಎಂದು ಹಲವರು ನಂಬುತ್ತಾರೆ. ಸೂರ್ಯ ದೇವರಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ದೇಶದ ಅನೇಕ ಮನೆಗಳಲ್ಲಿ ಅನುಸರಿಸುವ ಮತ್ತೊಂದು ಅಭ್ಯಾಸವಾಗಿದೆ.