ಸೆಪ್ಟೆಂಬರ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಹಬ್ಬದ ಸೀಸನ್ ಪ್ರಾರಂಭವಾಗುತ್ತಿದ್ದಂತೆಯೇ 7 ವಿಭಿನ್ನ ಬ್ರಾಂಡ್‌ಗಳು ಈಗಾಗಲೇ ಸೆಪ್ಟೆಂಬರ್‌ನಲ್ಲಿ ಸ್ಮಾರ್ಟ್‍ಫೋನ್ ಬಿಡುಗಡೆಗೆ ಸಿದ್ಧವಾಗಿವೆ.

ನವದೆಹಲಿ: ಹಬ್ಬದ ಸೀಸನ್ ಪ್ರಾರಂಭವಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. 7 ವಿಭಿನ್ನ ಬ್ರಾಂಡ್‌ಗಳು ಈಗಾಗಲೇ ಸೆಪ್ಟೆಂಬರ್‌ನಲ್ಲಿ ಸ್ಮಾರ್ಟ್‍ಫೋನ್ ಬಿಡುಗಡೆಗೆ ಸಿದ್ಧವಾಗಿವೆ. ಅಧಿಕೃತ ಮಾಹಿತಿ ಪ್ರಕಾರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯ ನಿರೀಕ್ಷೆಯಿರುವ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಆ್ಯಪಲ್ ಸೆಪ್ಟೆಂಬರ್ 7ಕ್ಕೆ iPhone 14 ಸರಣಿಯ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದೆ. ಈ ವೇಳೆ ಕಂಪನಿಯು 4 ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. iPhone 14, iPhone 14 Max, iPhone 14 Pro ಮತ್ತು iPhone 14 Pro Max ರಿಲೀಸ್ ಆಗಲಿವೆ ಎಂದು ಹೇಳಲಾಗುತ್ತಿದೆ. ಹೊಸ ಮ್ಯಾಕ್ಸ್ ಮಾಡೆಲ್ ಮಿನಿ ಬದಲಿಗೆ ಬರುತ್ತದೆ ಎಂಬ ವದಂತಿಗಳಿವೆ. ಇದರ ಹೊರತಾಗಿ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾತ್ರ ಮರುವಿನ್ಯಾಸದಲ್ಲಿ A16 ಬಯೋನಿಕ್ SoC, ಸುಧಾರಿತ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 48MP ಮುಖ್ಯ ಕ್ಯಾಮೆರಾದಂತಹ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ರಿಲೀಸ್ ಆಗಲಿದೆ ಎಂದು ವರದಿಯಾಗಿದೆ.

2 /6

ಮೊಟೊರೊಲಾ ಹೊಸ ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಸೆಪ್ಟೆಂಬರ್ 8ರಂದು ಬಿಡುಗಡೆ ಮಾಡುತ್ತಿದೆ. ಆರಂಭದಲ್ಲಿ, ಎಡ್ಜ್ 30 ಅಲ್ಟ್ರಾ ಮತ್ತು ಎಡ್ಜ್ 30 ಫ್ಯೂಷನ್ ಮಾತ್ರ ನಿರೀಕ್ಷಿಸಲಾಗಿತ್ತು. ಈಗ ಹೊಸ ಮಾಹಿತಿ ಸೋರಿಕೆಯ ಪ್ರಕಾರ, ಈ ಜೋಡಿ ಸ್ಮಾರ್ಟ್‍ಫೋನ್‍ಗಳು ಎಡ್ಜ್ 30 ನಿಯೋ ಜೊತೆಗೆ ಬರಲಿದೆ. ಎಡ್ಜ್ 30 ಅಲ್ಟ್ರಾ ಮತ್ತು ಎಡ್ಜ್ 30 ಫ್ಯೂಷನ್ ಚೀನಾದಲ್ಲಿ ಮಾರಾಟವಾಗುವ Moto X30 Pro ಮತ್ತು Moto S30 Proನ ಅಂತಾರಾಷ್ಟ್ರೀಯ ರೂಪಾಂತರಗಳಲ್ಲ. ಅದೇ ರೀತಿ ಎಡ್ಜ್ 30 ನಿಯೋ ಹೊಸ ಹ್ಯಾಂಡ್‌ಸೆಟ್ ಆಗಿರುತ್ತದೆ.

3 /6

Realme GT Neo 3Tಯನ್ನು ಭಾರತದಲ್ಲಿ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಹ್ಯಾಂಡ್‌ಸೆಟ್ ಇದೀಗ ಗ್ರಾಹಕರ ಕೈಸೇರಲು ಸಜ್ಜಾಗಿದೆ. ಈ ಸಾಧನವು ಚೀನಾದಲ್ಲಿ ಮಾರಾಟವಾದ ಮರುಬ್ರಾಂಡೆಡ್ Realme Q5 Pro ಆಗಿದೆ. ಇದು 6.62-ಇಂಚಿನ FHD+ 120Hz AMOLED ಡಿಸ್ಪ್ಲೇ, Qualcomm Snapdragon 870 SoC, LPDDR5 RAM, UFS 3.1 ಸ್ಟೋರೇಜ್, Android 12, 64MP ಮುಖ್ಯ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ, 5,000mAh ದೀರ್ಘಕಾಲಿನ ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

4 /6

Sony ಸೆಪ್ಟೆಂಬರ್ 1ರಂದು IFA 2022ನಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಕಂಪನಿಯು ತನ್ನ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ನ 4ನೇ ತಲೆಮಾರಿನ ಎಕ್ಸ್‌ಪೀರಿಯಾ 5 IVಯನ್ನು ಘೋಷಿಸುವ ನಿರೀಕ್ಷೆಯಿದೆ. ಈ ಸಾಧನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಇದು ಸುಮಾರು 6-ಇಂಚಿನ ಡಿಸ್ಪ್ಲೇ, 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-ಸಿ ಪೋರ್ಟ್, ವೈಫೈ 6 ಮತ್ತು NFC ನೊಂದಿಗೆ ಫೆಲಿಕಾದ ಬೆಂಬಲದೊಂದಿಗೆ ಬರಲಿದೆಯಂತೆ.

5 /6

Poco M5 ಸರಣಿಯು ಸೆಪ್ಟೆಂಬರ್ 5ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಶ್ರೇಣಿಯಲ್ಲಿ 2 ಮಾದರಿಗಳಿವೆ, ಅವುಗಳೆಂದರೆ Poco M5 ಮತ್ತು Poco M5s. ಈ 2 ಸಾಧನಗಳು M5sನ ಕೆಲವು ಬದಲಾವಣೆಗಳೊಂದಿಗೆ ರೀಬ್ರಾಂಡೆಡ್ Redmi Note 10S ಆಗಿರುತ್ತದೆ. ಆದರೆ M5 ಮೀಡಿಯಾ ಟೆಕ್ ಹೆಲಿಯೊ G99 SoC ನಿಂದ ಕಾರ್ಯನಿರ್ವಹಿಸಲಿರುವ ಹೊಸ ಹ್ಯಾಂಡ್‌ಸೆಟ್ ಆಗಿರುತ್ತದೆ.

6 /6

Redmi 11 Prime 5G ಸೆಪ್ಟೆಂಬರ್ 6ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ. ಈ ಸಾಧನವು ರೀಬ್ರಾಂಡೆಡ್ Redmi Note 11E ಹೊರತು ಬೇರೇನೂ ಅಲ್ಲ. ಇದು 6.58-ಇಂಚಿನ FHD+ 90Hz ಡಿಸ್ಪ್ಲೇ (LCD), ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC, LPDDR4x RAM, UFS 2.2 ಸ್ಟೋರೇಜ್, 50MP (ಅಗಲ) + 2MP (ಆಳ) ಡ್ಯುಯಲ್-ಕ್ಯಾಮೆರಾ ಸೆಟಪ್, 5MP ಸೆಲ್ಫಿ ಕ್ಯಾಮೆರಾ, MIUI5, MIUI, 8Ah 8Ah ಬ್ಯಾಟರಿ ವೈರ್ಡ್ ಚಾರ್ಜಿಂಗ್ ಬೆಂಬಲ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‍ನೊಂದಿಗೆ ಬರುತ್ತದೆ.