ಫಾಲ್ಕೆ ಪ್ರಶಸ್ತಿ ಗೆದ್ದ ಬಾಲಿವುಡ್’ನ ಖ್ಯಾತ ಸಿಂಗರ್ ಪ್ರೀತಿಯಲ್ಲಿ ಬಿದ್ದ ಸ್ಮೃತಿ ಮಂಧಾನ! ಯಾರಾತ ಗೊತ್ತಾ?

Smriti Mandhana Cricket News in Kannada: ಸ್ಮೃತಿ ಮಂಧಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಸ್ಮೃತಿ ಮಂಧಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರು. ಬ್ಯಾಟಿಂಗ್ ಮಾತ್ರವಲ್ಲದೆ, ತನ್ನ ಸೌಂದರ್ಯದಿಂದಲೇ ಅದೆಷ್ಟೋ ಅಭಿಮಾನಿಗಳ ಮನಗೆದ್ದ ಚೆಲುವೆ ಈಕೆ.

2 /7

ಐಸಿಸಿ ಮಹಿಳಾ ಕ್ರಿಕೆಟ್ ಶ್ರೇಯಾಂಕದಲ್ಲಿ ಒಂದೊಮ್ಮೆ ವಿಶ್ವ ನಂ. 1 ODI ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇನ್ನು ಬಾಂಗ್ಲಾದೇಶ ಮಹಿಳೆಯರ ವಿರುದ್ಧದ T20 ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆಟವಾಡಿದ ಸ್ಮೃತಿ, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಆಗ ಕೇವಲ 16 ವರ್ಷ ವಯಸ್ಸು.

3 /7

ವೇಗವಾಗಿ T20 ಅಂತರಾಷ್ಟ್ರೀಯ ಪಂದ್ಯದಲ್ಲಿ 50 ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ, T20I ಕ್ರಿಕೆಟ್‌ನಲ್ಲಿ 2,000 ರನ್ ಗಳಿಸಿದ ಮೂರನೇ ಭಾರತೀಯ ಮಹಿಳೆ ಎಂಬೆಲ್ಲಾ ಕೀರ್ತಿಗೆ ಪಾತ್ರರಾಗಿದ್ದಾರೆ. ಇದೀಗ ಸ್ಮೃತಿ ಸುದ್ದಿಯಲ್ಲಿರುವುದು ಕ್ರಿಕೆಟ್ ವಿಚಾರದಿಂದ ಅಲ್ಲ. ಬದಲಾಗಿ ತಮ್ಮ ಪ್ರೇಮ ವದಂತಿಯಿಂದ.

4 /7

ಜನಪ್ರಿಯ ಬಾಲಿವುಡ್ ಗಾಯಕಿ ಪಾಲಕ್ ಮುಚ್ಚಲ್ ಅವರ ಸಹೋದರ ಪಲಾಶ್ ಜೊತೆ ಸ್ಮೃತಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲಾ ವರದಿಗಳು ಸಿಕ್ಕಾಪಟ್ಟೆ ವರದಿಯಾಗುತ್ತಿದೆ.

5 /7

ಇಬ್ಬರೂ ಒಬ್ಬರ ಪೋಸ್ಟ್‌ ಗಳಿಗೆ ಪರಸ್ಪರ ಕಾಮೆಂಟ್‌ ಮಾಡಿಕೊಳ್ಳುವುದು, ಜೊತೆಗಿರುವ ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಸ್ಮೃತಿ, ಪಲಾಶ್ ಅವರ ಜನ್ಮದಿನದಂದು “ಹ್ಯಾಪಿ ಬರ್ತ್ ಡೇ ಟು ದ ಪ್ಯೂರ್ ಹಾರ್ಟ್” ಎಂದು ಶುಭ ಹಾರೈಸಿದ್ದರು.

6 /7

ಅದೇ ರೀತಿ, ಪಲಾಶ್ ಕೂಡ ಸ್ಮೃತಿಯ ಜನ್ಮದಿನದಂದು "ನನಗೆ ತಿಳಿದಿರುವ ಬಲಿಷ್ಠ ಹುಡುಗಿಗೆ ಜನ್ಮದಿನದ ಶುಭಾಶಯಗಳು" ಎಂದು ಬರೆದಿದ್ದರು. ಇದಲ್ಲದೆ, ಪಲಾಶ್ SM18 ಎಂಬ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಇದರ ಅರ್ಥ ಏನೆಂದು ತಿಳಿದಿಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಇದು ಸ್ಮೃತಿ ಮಂಧಾನ ಅವರ ಹೆಸರಿನ ಮೊದಲಕ್ಷರ ಮತ್ತು ಅವರ ಜರ್ಸಿ ಸಂಖ್ಯೆ 18 ಎಂದು ಭಾವಿಸುತ್ತಿದ್ದಾರೆ.

7 /7

ಪಲಾಶ್ ವೃತ್ತಿಪರ ಗಾಯಕ ಮತ್ತು ಸಂಗೀತ ಸಂಯೋಜಕ. 27 ವರ್ಷ ವಯಸ್ಸಿ ಪಲಾಶ್ ಪ್ರಸಿದ್ಧ ವೆಬ್ ಸರಣಿ 'ಅರ್ಧ್' ಅನ್ನು ಬರೆದು ನಿರ್ದೇಶಿಸಿದ್ದಾರೆ. ಈ ಸಿರೀಸ್’ಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ವಿಭಾಗದಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.