Offer! ಕೇವಲ 7,199 ಬೆಲೆಗೆ ಸಿಗುತ್ತಿದೆ ಈ ಪವರ್ಫುಲ್ Smart TV

Flipkart Grand Home Appliances Sale 2021 - Flipkart ನಲ್ಲಿ ಗ್ರಾಂಡ್ ಹೋಮ್ ಅಪ್ಲೈನ್ಸೆಸ್ ಸೆಲ್ ಆರಂಭಗೊಂಡಿದೆ. ಇದರಲ್ಲಿ ನೀವು Smart TVಯನ್ನು ಉತ್ತಮ ಆಫರ್ ನಲ್ಲಿ ಖರೀದಿಸಬಹುದು. ಯಾವ TV ಮೇಲೆ ಕೊಡುಗೆ ನೀಡಲಾಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.

ನವದೆಹಲಿ: Flipkart Grand Home Appliances Sale 2021 - ಸ್ಮಾರ್ಟ್ TVಯ ಈ ಯುಗದಲ್ಲಿ TV ಬೆಲೆ ಹೆಚ್ಚಾಗಿರುವ ಕಾರಣ ಹಲವರಿಗೆ ಬ್ರಾಂಡೆಡ್ TV ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ಇದೀಗ ಚಿಂತಿಸುವ ಅಗತ್ಯವಿಲ್ಲ. ಇ-ಕಾಮರ್ಸ್ ಕ್ಷೇತ್ರದ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ನಿಮಗಾಗಿಯೇ ಒಂದು ಉತ್ತಮ ಕೊಡುಗೆಯನ್ನು ಹೊತ್ತು ತಂದಿದೆ. ಹೌದು, ಸದ್ಯ ಫ್ಲಿಪ್ ಕಾರ್ಟ್ ನಲ್ಲಿ ಗ್ರಾಂಡ್ ಹೋಮ್ ಅಪ್ಲೈನ್ಸೆಸ್ ಸೆಲ್ ಆರಂಭಗೊಂಡಿದ್ದು, ಇದು ಮಾರ್ಚ್ 8ರವರೆಗೆ ಜಾರಿಯಲ್ಲಿರಲಿದೆ. ಮಾರ್ಚ್ 4 ರಂದು ಆರಂಭಗೊಂಡ ಈ ಸೆಲ್ ನಲ್ಲಿ ನೀವು ಕೇವಲ 7,199 ಆರಂಭಿಕ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ನಿಮ್ಮ ಮನೆಗೆ ತರಬಹುದು. ಒಂದು ವೇಳೆ ನೀವು ICICI ಬ್ಯಾಂಕ್ ಕಾರ್ಡ್ ಬಳಸಿ ಸ್ಮಾರ್ಟ್ ಟಿವಿ ಖರೀದಿಸಿದರೆ ರೂ.3,500 ಹೆಚ್ಚುವರಿ ರಿಯಾಯಿತಿ ಕೂಡ ಪಡೆಯಬಹುದು.

 

ಇದನ್ನೂ ಓದಿ-SBI YONO ಅಪ್ಲಿಕೇಶನ್‌ನಲ್ಲಿ ಬಂಪರ್ ರಿಯಾಯಿತಿ, ಯಾವ ಬ್ರಾಂಡ್‌ನಲ್ಲಿ ಎಷ್ಟು ಆಫರ್‌ ಲಭ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. Realme 80 cm (32 inch) HD Ready LED Smart Android TV  (TV 32): ಫ್ಲಿಪ್ ಕಾರ್ಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಇದೊಂದು ಬೆಸ್ಟ್ ಸೆಲ್ಲರ್ ಸ್ಮಾರ್ಟ್ ಟಿವಿಯಾಗಿದ್ದು, ಫ್ಲಿಪ್ ಕಾರ್ಟ್ ವೇದಿಕೆಯ ಮೇಲೆ ಇದು ಮಾರುಕಟ್ಟೆ ಬೆಲೆ (14,999ರೂ.)ಗಿಂತ ಕಮ್ಮಿ ಬೆಲೆಗೆ ಅಂದರೆ 13,999 ಕ್ಕೆ ಸಿಗುತ್ತಿದೆ. ಮಾರುಕಟ್ಟೆಯ ಬೆಲೆಯ ಮೇಲೆ ಶೇ.6 ರಷ್ಟು ಡಿಸ್ಕೌಂಟ್ ಕೂಡ ನೀಡಲಾಗುತ್ತಿದೆ. ಸೆಲ್ ನಲ್ಲಿ ಒಂದು ವೇಳೆ ನೀವು ಈ ಟಿವಿಯನ್ನು ಖರೀದಿಸಲು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ ರೂ.1500 ಹೆಚ್ಚುವರಿ ರಿಯಾಯ್ತಿ ಕೂಡ ನೀಡಲಾಗುತ್ತಿದೆ. ಇದಲ್ಲದೆ ICICI ಡೆಬಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡುವವರಿಗೆ 1250 ರೂ. ರಿಯಾಯ್ತಿ ನೀಡಲಾಗುತ್ತಿದೆ.

2 /4

2. Mi 4A PRO 80 cm (32 inch) HD Ready LED Smart Android TV with Google Data Saver:ಈ ಟಿವಿಯನ್ನು ಗ್ರಾಹಕರು ಶೇ.3 ರಷ್ಟು ಡಿಸ್ಕೌಂಟ್ ಮೇಲೆ ಖರೀದಿಸಬಹುದು. ಸೆಲ್ ನಲ್ಲಿ 14,999 ರೂ. ಬೆಲೆಯ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ರೂ.14, 499ಕ್ಕೆ ಖರೀದಿಸಬಹುದು.

3 /4

3. Thomson R9 60 cm (24 inch) HD Ready LED TV  (24TM2490): ಈ 24 ಇಂಚಿನ ಟಿವಿಯನ್ನು ಶೇ.23ರಷ್ಟು ರಿಯಾಯ್ತಿಯೊಂದಿಗೆ ಮನೆಗೆ ಕೊಂಡೊಯ್ಯಬಹುದು. ವೇದಿಕೆಯ ಮೇಲೆ 10999 ಬೆಲೆಯ ಈ ಸ್ಮಾರ್ಟ್ ಟಿವಿಯನ್ನು 7,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಫ್ಲಿಪ್ ಕಾರ್ಟ್ ಮೇಲೆ ಒಂದು ವೇಳೆ ನೀವು AXIS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ, ನಿಮಗೆ ಹೆಚ್ಚುವರಿ ಶೇ.5ರಷ್ಟು ಅನಿಯಮಿತ ಕ್ಯಾಶ್ ಬ್ಯಾಕ್ ಹಾಗೂ ಬ್ಯಾಂಕ್ ಆಫ್ ಬರೋಡಾ mestrocard ಡೆಬಿಟ್ ಕಾರ್ಡ್ ಮೇಲೆ ಶೇ.10ರಷ್ಟು ರಿಯಾಯ್ತಿ ನೀಡಲಾಗುತ್ತಿದೆ.

4 /4

4. Vu Premium 80 cm (32 inch) HD Ready LED Smart Android TV  (32US): ಈ ಟಿವಿ ಬೆಲೆಯ ಮೇಲೆ ಶೇ.4ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಸೆಲ್ ನಲ್ಲಿ ಈ 32 ಇಂಚಿನ ಟಿವಿಯನ್ನು 15000 ಬದಲಿಗೆ 14,399 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಸೆಲ್ ನಲ್ಲಿ ಒಂದು ವೇಳೆ ನೀವು ಈ ಟಿವಿಯನ್ನು ಖರೀದಿಸಲು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ ಹೆಚ್ಚುವರಿ 1500 ರಿಯಾಯ್ತಿ ಪಡೆಯಬಹುದು. ICICI ಡೆಬಿಟ್ ಕಾರ್ಡ್ ಬಳಕೆಯ ಮೇಲೆ 1250 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ.