Atum 1.0 : ಕೇವಲ 7 ರೂಪಾಯಿಯಲ್ಲಿ 100 ಕಿಲೋಮೀಟರ್ ಪ್ರಯಾಣ..!

ಹೈದರಾಬಾದ್ ಮೂಲದ ವೆಹಿಕಲ್ ಸ್ಟಾರ್ಟ್ ಅಪ್ Atumobile ಪ್ರೈವೇಟ್ ಲಿಮಿಟೆಡ್ Atum 1.0 ಅನ್ನುತಯಾರಿಸಿದೆ. ಹೆಚ್ಚುತ್ತಿರುವ ಮಾಲಿನ್ಯ ಮತ್ತು ಪೆಟ್ರೋಲ್ ಬೆಲೆ ಎರಡೂ ಸಮಸ್ಯೆಗೂ Atum1.0 ಪರಿಹಾರ ನೀಡುತ್ತದೆ ಎಂದು ಕಂಪನಿ ಹೇಳಿದೆ. 

ನವದೆಹಲಿ : ಪೆಟ್ರೋಲ್-ಡೀಸೆಲ್ ಬೆಲೆಗಳು ದಾಖಲೆ ಮಟ್ಟ ತಲುಪಿದೆ.  ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ.  ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಿಂದಾಗಿ ಜನ ಪರ್ಯಾಯ ಹುಡುಕುವಂತಾಗಿದೆ.  ಇಂಥಹ ಸಂದರ್ಭದಲ್ಲಿ ,  Atumobile ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ಪೀಳಿಗೆಯ ಎಲೆಕ್ಟ್ರಿಕ್ ಬೈಕ್  Atum 1.0 ಅನ್ನು ಲಾಂಚ್ ಮಾಡಿದೆ. Atum 1.0 ಸುಮಾರು 100 ಕಿ.ಮೀ ಪ್ರಯಾಣವನ್ನು ಕೇವಲ 7 ರೂಪಾಯಿಯಲ್ಲಿ ಕ್ರಮಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೈದರಾಬಾದ್ ಮೂಲದ ವೆಹಿಕಲ್ ಸ್ಟಾರ್ಟ್ ಅಪ್ Atumobile ಪ್ರೈವೇಟ್ ಲಿಮಿಟೆಡ್ Atum 1.0 ಅನ್ನುತಯಾರಿಸಿದೆ. ಹೆಚ್ಚುತ್ತಿರುವ ಮಾಲಿನ್ಯ ಮತ್ತು ಪೆಟ್ರೋಲ್ ಬೆಲೆ ಎರಡೂ ಸಮಸ್ಯೆಗೂ Atum1.0 ಪರಿಹಾರ ನೀಡುತ್ತದೆ ಎಂದು ಕಂಪನಿ ಹೇಳಿದೆ. 

2 /5

Atumobile ಪ್ರೈವೇಟ್ ಲಿಮಿಟೆಡ್ ಪ್ರಕಾರ, Atum1.0 ಬ್ಯಾಟರಿ ಕೇವಲ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಆದರೆ 100 ಕಿಲೋಮೀಟರ್ ವರೆಗೆ ಚಲಿಸಬಹುದು. ಅಲ್ಲದೆ ಸಂಪೂರ್ಣವಾಗಿ ಚಾರ್ಜ್ ಮಾಡಲು ತಗಲುವ ವೆಚ್ಚ ಕೇವಲ 7-8 ರೂಪಾಯಿಗಳು ಮಾತ್ರ.  ಕಂಪನಿಯು   ಈ ಬೈಕ್ ನ ಬ್ಯಾಟರಿಗೆ  2 ವರ್ಷಗಳ ಗ್ಯಾರಂಟಿ ಸಹ ನೀಡುತ್ತಿದೆ.

3 /5

Atum1.0 ಅನ್ನು ಕಂಪನಿಯ ಅಧಿಕೃತ ಪೋರ್ಟಲ್ atumobile.co ಮೂಲಕ ಬುಕ್ ಮಾಡಬಹುದು. ಬುಕ್ಕಿಂಗ್ ಆರಂಭವಾದಾಗಿನಿಂದ  ಇದುವರೆಗೆ 400 ಕ್ಕೂ ಹೆಚ್ಚು ಬುಕಿಂಗ್ ಆಗಿದ್ದು, ಈಗ ವಿತರಣೆಯ ಕೆಲಸವೂ ಪ್ರಾರಂಭವಾಗಿದೆ ಎಂದು ಕಂಪನಿ ಹೇಳಿದೆ.   

4 /5

ಎಲೆಕ್ಟ್ರಿಕ್ ಬೈಕ್  Atum1.0 ನ ಬೇಸ್ ಪ್ರೈಸ್ 50,000 ರೂ. ಇದನ್ನು ಸಂಪೂರ್ಣವಾಗಿ ಭಾರತದಲ್ಲೆ ತಯಾರಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ಬೈಕ್‌ನ ವೇಗವನ್ನು ತುಂಬಾ ಕಡಿಮೆ ಇಡಲಾಗಿದೆ.  Atum1.0 ಆರಾಮದಾಯಕ ಆಸನ, ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಹೆಡ್ಲೈಟ್, ಇಂಡಿಕೆಟರ್, ಟೆಲ್ ಲೈಟ್ ಗಳನ್ನು ಹೊಂದಿದೆ.   

5 /5

Atum1.0, Revoltನ RV400 ಬೈಕ್ ನೊಂದಿಗೆ  ಸ್ಪರ್ಧಿಸುತ್ತದೆ ಎನ್ನಲಾಗಿದೆ.  RV400 ಸಂಪೂರ್ಣವಾಗಿ ಸ್ಮಾರ್ಟ್ ಬೈಕ್ ಮತ್ತು ನಿಮ್ಮ ಫೋನ್‌ಗೆ ಸಂಪರ್ಕದಲ್ಲಿರುತ್ತದೆ. ಹತ್ತಿರದ ಸ್ವಾಪ್ ಸ್ಟೇಷನ್‌ನ ವಿಳಾಸವನ್ನೂ  ಈ ಬೈಕ್‌ ತೋರಿಸುತ್ತದೆ. ಸ್ವಾಪ್ ಸ್ಟೇಷನ್‌ ನಲ್ಲಿ ಬೈಕ್ ನ ಬ್ಯಾಟರಿಯನ್ನು ಬದಲಾಯಿಸಬಹುದು.