ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಜೊತೆಗೆ ನೀವು ಈ ಎಮ್ಮೆಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸಬಹುದು.
ನವದೆಹಲಿ: ನೀವು ಹೊಸ ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಖುಷಿಯ ಸುದ್ದಿ. ಉದ್ಯೋಗದೊಂದಿಗೆ ವ್ಯಾಪಾರ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸುವ ಅನೇಕ ಜನರನ್ನು ನಾವು ಕಾಣಬಹುದು. ಇಂದು ನಾವು ನಿಮಗೆ ಅದ್ಭುತವಾದ ಬ್ಯುಸಿನೆಸ್ ಐಡಿಯಾವನ್ನು ನೀಡುತ್ತಿದ್ದೇವೆ. ಈ ಸೂಪರ್ ಹಿಟ್ ವ್ಯವಹಾರ ಪ್ರಾರಂಭಿಸಿ ನೀವು ಶೀಘ್ರದಲ್ಲೇ ಮಿಲಿಯನೇರ್ ಆಗಬಹುದು. ಈ ಬ್ಯುಸಿನೆಸ್ ಆರಂಭಿಸಿ ಸುಲಭವಾಗಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಬಹುದು. ಈ ವ್ಯವಹಾರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಸಣ್ಣ ಬಜೆಟ್‌ನಲ್ಲಿ ವ್ಯಾಪಾರ ಆರಂಭಿಸಿ ಅಪಾರ ಲಾಭ ಗಳಿಸಲು ಬಯಸಿದರೆ ಎಮ್ಮೆ ಸಾಕಣೆ ಮಾಡುವ ಮೂಲಕ ಹೈನುಗಾರಿಕೆ ಆರಂಭಿಸಬಹುದು. ಎಮ್ಮೆ ತಳಿಗಳಲ್ಲಿ ಮುರ್ರಾ ತಳಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಎಮ್ಮೆಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ವಾಸ್ತವವಾಗಿ ಈ ತಳಿಯ ಎಮ್ಮೆಗಳು ಉತ್ತಮ ಎತ್ತರ ಹೊಂದಿದ್ದು, ಇತರ ತಳಿಗಳಿಗೆ ಹೋಲಿಸಿದರೆ ಹೆಚ್ಚು ಹಾಲನ್ನು ನೀಡುತ್ತವೆ.
ನೀವು ದೂರದಿಂದಲೂ ಮುರ್ರಾ ಎಮ್ಮೆಯನ್ನು ಗುರುತಿಸಬಹುದು. ಈ ತಳಿಯ ಬಣ್ಣವು ಗಾಢ ಕಪ್ಪು ಮತ್ತು ತಲೆಯ ಗಾತ್ರವು ತುಂಬಾ ಚಿಕ್ಕದಾಗಿರುತ್ತದೆ. ಈ ಎಮ್ಮೆಯ ದೇಹದ ಉಳಿದ ಭಾಗಗಳು ಆರೋಗ್ಯಕರವಾಗಿರುತ್ತವೆ. ಅವುಗಳ ಕೊಂಬುಗಳು ಉಂಗುರಗಳಂತಿರುತ್ತವೆ. ಇವುಗಳ ಬಾಲವೂ ಇತರ ಎಮ್ಮೆಗಳಿಗಿಂತ ಉದ್ದವಾಗಿರುತ್ತವೆ. ಹರಿಯಾಣ, ಪಂಜಾಬ್ ಮುಂತಾದ ಪ್ರದೇಶಗಳಲ್ಲಿ ಇಂತಹ ಎಮ್ಮೆಗಳನ್ನು ಹೆಚ್ಚಾಗಿ ಸಾಕಲಾಗುತ್ತದೆ. ಅಷ್ಟೇ ಅಲ್ಲ ಇಟಲಿ, ಬಲ್ಗೇರಿಯಾ, ಈಜಿಪ್ಟ್ ನ ಡೈರಿ ಉದ್ಯಮದಲ್ಲಿಯೂ ಇವುಗಳನ್ನು ಬಳಸುತ್ತಾರೆ.
ಮುರ್ರಾ ಎಮ್ಮೆಯನ್ನು ಸಾಕುವುದರ ಮೂಲಕ ನೀವು ಬಂಪರ್ ಲಾಭ ಗಳಿಸಬಹುದು. ಇದರ ಮೂಲಕ ನೀವು ಡೈರಿ ಸಂಬಂಧಿತ ವ್ಯವಹಾರದ ಉತ್ಪಾದನೆಯನ್ನು ಸಹ ಪ್ರಾರಂಭಿಸಬಹುದು. ಈ ಎಮ್ಮೆ ಇತರ ತಳಿಯ ಎಮ್ಮೆಗಳಿಗಿಂತ ಹೆಚ್ಚು ಹಾಲು ನೀಡುವುದರಿಂದ ಲಾಭವೂ ಹೆಚ್ಚು. ಮುರ್ರಾ ತಳಿಯ ಎಮ್ಮೆ ದಿನಕ್ಕೆ 20 ಲೀಟರ್ ವರೆಗೆ ಹಾಲು ನೀಡುತ್ತದೆ. ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿ ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ಕೈತುಂಬಾ ಹಣ ಗಳಿಸಬಹುದು. ಈ ಎಮ್ಮೆಗಳು 30-35 ಲೀಟರ್ ವರೆಗೆ ಹಾಲು ನೀಡುತ್ತವೆ.
ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಜೊತೆಗೆ ನೀವು ಈ ಎಮ್ಮೆಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸಬಹುದು. ಉದ್ದ ಮತ್ತು ಎತ್ತರದ ಕಾರಣ ಜಾನುವಾರು ಸಾಕಣೆದಾರರು ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ. ಈ ತಳಿಯ ಎಮ್ಮೆಗಳ ಬೆಲೆ 4-5 ಲಕ್ಷದಿಂದ ಪ್ರಾರಂಭವಾಗಿ 50 ಲಕ್ಷದವರೆಗೆ ಇದೆ. ಸಾಮಾನ್ಯ ತಳಿಯ ಎಮ್ಮೆಗಳ ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಯನ್ನು ಈ ತಳಿಯ ಎಮ್ಮೆಗಳು ಹೊಂದಿರುತ್ತವೆ.