Shadow Planet Ketu Transit 2022: ಇದೇ ತಿಂಗಳು ಸಂಭವಿಸಲಿದೆ ಛಾಯಾಗ್ರಹ ಕೇತು ಗೋಚರ, ಈ 3 ರಾಶಿಯ ಜನರಿಗೆ ನೌಕರಿಯಲ್ಲಿ ಪ್ರಮೋಶನ್ ಯೋಗ

Ketu Gochar 2022 - ಏಪ್ರಿಲ್ ತಿಂಗಳಿನಲ್ಲಿ ಹಲವು ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಛಾಯಾಗ್ರಹ (Shadow Planet) ಎಂದೇ ಕರೆಯಲಾಗುವ ರಾಹು ಹಾಗೂ ಕೇತುಗಳು (Rahu-Ketu Gochara 2022) ಕೂಡ ಶಾಮೀಲಾಗಿವೆ. 

Ketu Gochar 2022 - ಏಪ್ರಿಲ್ ತಿಂಗಳಿನಲ್ಲಿ ಹಲವು ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಛಾಯಾಗ್ರಹ (Shadow Planet) ಎಂದೇ ಕರೆಯಲಾಗುವ ರಾಹು ಹಾಗೂ ಕೇತುಗಳು (Rahu-Ketu Gochara 2022) ಕೂಡ ಶಾಮೀಲಾಗಿವೆ. ರಾಹು ಕೇತುಗಳ ರಾಶಿ ಪರಿವರ್ತನೆಯಿಂದ ಹಲವು ರಾಶಿಗಳ ಜನರ ಜೀವನದ ಮೇಲೆ ಮಹತ್ವದ ಬದಲಾವಣೆ ಕಾಣಿಸಿಕೊಳ್ಳಲಿವೆ. ಇಲ್ಲಿವೆ ಆ ರಾಶಿಗಳ (Zodiac Signs) ಪಟ್ಟಿ.

 


(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Chanakya Niti: ಮನುಷ್ಯನ ಇಂತಹ ವರ್ತನೆ ಮನೆ ಕುಟುಂಬವನ್ನೇ ಸರ್ವನಾಶ ಮಾಡುತ್ತದೆ, ಈಗಲೇ ಎಚ್ಚೆತ್ತುಕೊಳ್ಳಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಯಾವುದೇ ಒಂದು ಗ್ರಹ ಗೋಚರಿಸಿದರೆ (Planatary Transit) ಅಥವಾ ಉದಯವಾದರೆ ಅಥವಾ ಅಸ್ತಮಿಸಿದರೆ, ಜನರ ಜೀವನದ ಮೇಲೆ ಆಧಾರ ನೇರ ಪ್ರಭಾವ ಉಂಟಾಗುತ್ತದೆ. ಏಪ್ರಿಲ್ 12, 2022 ರಂದು ಬೆಳಗ್ಗೆ 11.18ಕ್ಕೆ ಛಾಯಾಗ್ರಹ ಕೇತು (Ketu Rashi Parivartan 2022) ಮಂಗಳನ ಅಧಿಪತ್ಯವಿರುವ ವೃಶ್ಚಿಕ ರಾಶಿಯಿಂದ ಶುಕ್ರನ ಅಧಿಪತ್ಯವಿರುವ ತುಲಾ ರಾಶಿಯಲ್ಲಿ ಗೋಚರಿಸಲಿದೆ. ಕೇತುವಿನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಉಂಟಾಗಲಿದೆ. ಇದರಿಂದ ಯಾವ ರಾಶಿಯ ಜನರಿಗೆ ಜಬರ್ದಸ್ತ್ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ.

2 /4

ಮಕರ ರಾಶಿ- ಕೇತುವಿನ ಈ ಗೋಚರದಿಂದ ಮಕರ ರಾಶಿಗಳ ಜನರ 'ಅಚ್ಚೆ ದೀನ್' (ಒಳ್ಳೆಯ ದಿನಗಳು) ಆರಂಭವಾಗಲಿವೆ . ಮಕರ ರಾಶಿಯ 11ನೇ ಭಾವದಲ್ಲಿ ಕೇತುವಿನ ಈ ಗೋಚರ ಸಂಭವಿಸಲಿದೆ. ಸಾಮಾನ್ಯವಾಗಿ ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹಲವು ಮೂಲಗಳಿಂದ ಆದಾಯ ಅಥವಾ ಲಾಭ ಹರಿದು ಬರಲಿದೆ. ಅಂದರೆ, ನಿಮ್ಮ ಜೀವನದಲ್ಲಿ ಆಕಸ್ಮಿಕ ಧನಲಾಭದ ಸಂಕೇತಗಳು ಗೋಚರಿಸುತ್ತಿವೆ. ವ್ಯಾಪಾರಿಗಳಿಗೆ ಈ ಕೇತು ಗೋಚರ ಲಾಭಕಾರಿ ಸಾಬೀತಾಗಲಿದೆ. 

3 /4

ಕರ್ಕ ರಾಶಿ -  ಕೇತುವಿನ ಈ ಸ್ಥಾನಪಲ್ಲಟ ಕರ್ಕ ರಾಶಿಯ ಜನರ ಪಾಲಿಗೂ ಕೂಡ ಲಾಭಕಾರಿ ಸಾಬೀತಾಗಲಿದೆ. ಕೇತುವಿನ ಈ ಗೋಚರ ಕರ್ಕ ರಾಶಿಯ ಚತುರ್ಥ ಅಂದರೆ 4ನೇ ಭಾವದಲ್ಲಿ ಸಂಭವಿಸುತ್ತಿದೆ. ಈ ಸ್ಥಾನವನ್ನು ಸುಖ ಹಾಗೂ ತಾಯಿಯ ಸ್ಥಾನ ಎಂದೇ ಪರಿಗಣಿಸಲಾಗುತ್ತದೆ. ಹಲವು ಭಾಷೆಗಳನ್ನು ಕಲಿಯುವ ಹವ್ಯಾಸಿಗಳಿಗೆ ಇದರಿಂದ ವಿಶೇಷ ಲಾಭ ಪ್ರಾಪ್ತಿಯಾಗಲಿದೆ. ನೌಕರಿಯಲ್ಲಿ ತೊಡಗಿದವರಿಗೆ ಹೊಸ ಪ್ರಸ್ತಾವನೆಗಳು ಸಿಗಲಿವೆ. ಅದರಲ್ಲೂ ವಿಶೇಷವಾಗಿ ಸಿಂಗಲ್ ಆಗಿ ಇರುವವರ ಜೀವನದಲ್ಲಿ ವಿಶೇಷ ವ್ಯಕ್ತಿಯ ಎಂಟ್ರಿ ಆಗಲಿದೆ.

4 /4

ಕುಂಭ ರಾಶಿ - ಕುಂಭ ರಾಶಿಯ ನವಮ ಅಂದರೆ ಒಂಭತ್ತನೇ ಭಾವದಲ್ಲಿ ಕೇತುಗೋಚರ ನೆರವೇರಲಿದೆ. ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಭತ್ತನೇ ಭಾವವನ್ನು ಭಾಗ್ಯದ ಭಾವ ಎಂದೇ ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕುಂಭರಾಶಿಯ ಜಾತಕದ ಜನರಿಗೆ ಭಾಗ್ಯದ ಸಕತ್ ಸಾಥ್ ಸಿಗಲಿದೆ. ಅಂದರೆ, ನೀವು ಕೈಗೊಂಡ ಕೆಲಸದಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆಯಲ್ಲಿ ತೊಡಗಿದವರಿಗೆ ಈ ಸಮಯ ತುಂಬಾ ಶುಭವಾಗಿದೆ. ಈ ಅವಧಿಯಲ್ಲಿ ನಿಮಗೆ ನೌಕರಿಯಲ್ಲಿ ಬಡ್ತಿ ಪ್ರಾಪ್ತಿಯಾಗುವ ಸಂಕೇತಗಳು ಗೋಚರಿಸುತ್ತಿವೆ.