Rahu: ನಿಮ್ಮ ಜಾತಕದಲ್ಲಿ ರಾಹು ಬಲವಾಗಿದ್ದಾನೆಯೇ? ಇಲ್ಲ ದುರ್ಬಲನೋ! ಈ ರೀತಿ ತಿಳಿಯಿರಿ

                                         

Rahu in Jataka: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹ ಎಂತಲೇ ಬಣ್ಣಿಸಲ್ಪಡುವ ರಾಹು ಸದಾ ಕೆಟ್ಟ ಫಲಗಳನ್ನೇ ನೀಡುತ್ತಾನೆ ಎಂಬುದು ಕೆಲವರ ನಂಬಿಕೆ. ಆದರೆ, ರಾಹು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಶುಭ ಫಲಗಳನ್ನು ನೀಡುತ್ತಾನೆ ಎಂದು ನಿಮಗೆ ತಿಳಿದಿದೆಯೇ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ನವ ಗ್ರಹಗಳಲ್ಲಿ ಶನಿ ದೇವನನ್ನು ಬಿಟ್ಟರೆ, ಪಾಪ ಗ್ರಹಗಳಾದ ರಾಹು-ಕೇತು ಗ್ರಹಗಳ ಹೆಸರು ಕೇಳಿದರೆ ಕೆಲವರು ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಇವೆರಡೂ ದುಷ್ಟ ಗ್ರಹಗಳು. 

2 /7

ಜ್ಯೋತಿಷ್ಯ ಶಾಸ್ತ್ರದಲ್ಲಿ, ರಾಹು ಗ್ರಹವನ್ನು ಪ್ರಭಾವಿ ಗ್ರಹ ಎಂತಲೂ ಕರೆಯಲಾಗುತ್ತದೆ. ರಾಹುವನ್ನು ನೆರಳು ಗ್ರಹ ಎಂತಲೂ ಕರೆಯಲಾಗುತ್ತದೆ. 

3 /7

ಯಾವ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿರುತ್ತಾನೋ ಅವರ ಜೀವನದಲ್ಲಿ ತೊಂದರೆಗಳಿಗೆ ಕೊನೆಯೇ ಇರುವುದಿಲ್ಲ. ಅಂತೆಯೇ, ವ್ಯಕ್ತಿಯ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದಾಗ ಆ ವ್ಯಕ್ತಿ ಅಪಾರ ಧನ ಸಂಪತ್ತಿನ ಒಡೆಯರಾಗುತ್ತಾರೆ. ಅವರು ರಾಜ ಯೋಗವನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ. 

4 /7

ಹಾಗಿದ್ದರೆ, ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿ ಪ್ರಬಲನಾಗಿದ್ದಾನೋ, ಇಲ್ಲವೇ, ದುರ್ಬಲ ಸ್ಥಾನದಲ್ಲಿದ್ದಾನೋ ಎಂದು ಹೇಗೆ ತಿಳಿಯುವುದು ಎಂದು ನೀವು ಯೋಚಿಸುತ್ತಿದ್ಧೀರಾ... ಕೆಲವು ಸಂಕೇತಗಳ ಮೂಲಕ ನೀವು ಇದನ್ನು ಸುಲಭವಾಗಿ ತಿಳಿಯಬಹುದು. 

5 /7

ಜಾತಕದಲ್ಲಿ ರಾಹು ಬಲಶಾಲಿ ಎಂಬುದರ ಸಂಕೇತಗಳಿವು:  * ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ರಾಹು 11ನೇ ಮನೆಯಲ್ಲಿರುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ.  *  ಇದಲ್ಲದೆ, ಜಾತಕದಲ್ಲಿ ರಾಹು ಗ್ರಹವು 5, 10 ಮತ್ತು 11ನೇ ಮನೆಯಲ್ಲಿದ್ದಾಗ ರಾಹು ದಶಾ ಆರಂಭವಾಗುತ್ತದೆ. ಅಂತಹ ವ್ಯಕ್ತಿ  ಜೀವನದ ರಾಜಯೋಗದ ಸುಖವನ್ನು ಅನುಭವಿಸುತ್ತಾನೆ ಎಂದು ನಂಬಲಾಗಿದೆ.  * ಅಷ್ಟೇ ಅಲ್ಲದೆ, ಜಾತಕದಲ್ಲಿ ರಾಹು 6ನೇ ಮನೆಯಲ್ಲಿದ್ದರೂ ಶುಭ ಎಂದು ಹೇಳಲಾಗುತ್ತದೆ.   

6 /7

ಜಾತಕದಲ್ಲಿ ರಾಹು ಬಲಹೀನ ಎಂಬುದರ ಸಂಕೇತಗಳಿವು: >> ಯಾವುದೇ ವ್ಯಕ್ತಿ ಕನಸಿನಲ್ಲಿಯೇ ಆಗಲಿ, ಇಲ್ಲವೇ ನಿಜವಾಗಿಯೇ ಆಗಿರಲಿ ಪದೇ ಪದೇ ಹಾವನ್ನು ಕಂಡರೆ ನಿಮ್ಮ ಜಾತಕದಲ್ಲಿ ರಾಹು ದುರ್ಬಲನಾಗಿದ್ದಾನೆ. ನಿಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹೆಚ್ಚಾಗಲಿದೆ ಎಂಬುದರ ಸೂಚನೆ.  >> ಸತ್ತ ಹಲ್ಲಿಯನ್ನು ಕಾಣುವುದು ಕೂಡ ಜಾತಕದಲ್ಲಿ ರಾಹು ಬಲಹೀನ ಎಂಬುದನ್ನೂ ಸೂಚಿಸುತ್ತದೆ.  >> ಇದಲ್ಲದೆ, ಮರೆವು ಹೆಚ್ಚಾಗುವುದು, ಕೌಟುಂಬಿಕ ಕಲಹ ಹೆಚ್ಚಾಗುವುದು ಕೂಡ ರಾಹು ಬಲಹೀನ ಎಂಬುದರ ಸಂಕೇತವಾಗಿದೆ. 

7 /7

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.