Sidharth Kiara wedding : ಸಿದ್ಧಾರ್ಥ್ ಕಿಯಾರಾ ಮದುವೆ ಸಂಭ್ರಮ ಶುರು.. ಕೇವಲ 100 ಜನ ಗೆಸ್ಟ್‌ ಮಾತ್ರ ಭಾಗಿ

Sidharth Malhotra Kiara Advani wedding : ಇಂದಿನಿಂದ ಖ್ಯಾತ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹ ಮಹೋತ್ಸವ ಪ್ರಾರಂಭವಾಗಿದೆ. ಇಷ್ಟು ದಿನ ಡೇಟಿಂಗ್ ಅಂತ ಎಂಜಾಯ್‌ ಮಾಡುತ್ತಿದ್ದ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
 

 ಇಂದಿನಿಂದ ಖ್ಯಾತ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹ ಮಹೋತ್ಸವ ಪ್ರಾರಂಭವಾಗಿದೆ. ಇಷ್ಟು ದಿನ ಡೇಟಿಂಗ್ ಅಂತ ಎಂಜಾಯ್‌ ಮಾಡುತ್ತಿದ್ದ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
 

1 /7

ಈಗಾಗಲೇ ಅನೇಕ ಬಾಲಿವುಡ್ ತಾರೆಯರು ಮತ್ತು ಕಿಯಾರಾ-ಸಿದ್ದಾರ್ಥ್ ಜೈಸಲ್ಮೇರ್ ತಲುಪಿದ್ದಾರೆ. 

2 /7

ಜೈಸಲ್ಮೇರ್‌ನ ಸೂರ್ಯಗಢ ಅರಮನೆ ಕೋಟೆಯಲ್ಲಿ ಇಂದು ಅಥವಾ ನಾಳೆ ಇಬ್ಬರ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.  

3 /7

ಕೆಲವು ವರದಿಗಳ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಅತಿಥಿಗಳು ಮತ್ತು ಸಿಬ್ಬಂದಿಗೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಂತೆ ಭದ್ರತೆ ಒದಗಿಸಲಾಗಿದೆ.  

4 /7

ಅಲ್ಲದೆ, ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಗೆ ಕೇವಲ 100 ಅತಿಥಿಗಳು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.  

5 /7

ಸಿದ್ ಮತ್ತು ಕಿಯಾರಾ ನೆಚ್ಚಿನ ನಿರ್ಮಾಪಕರು, ನಿರ್ದೇಶಕರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಸದಸ್ಯರು ಭಾಗವಹಿಸಲಿದ್ದಾರೆ. ಮದುವೆಗೆ ಆಗಮಿಸುತ್ತಿರುವ ಸೆಲೆಬ್ರಿಟಿಗಳ ಹೆಸರನ್ನು ಇನ್ನೂ ಖಚಿತಪಡಿಸಿಲ್ಲ.   

6 /7

ಆದ್ರೆ, ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಮದುವೆಗೆ ಹಾಜರಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.  

7 /7

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಂದು ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಕಿಯಾರಾ ಜೈಸಲ್ಮೇರ್ ತಲುಪಿದ್ದರೆ, ಸಿದ್ಧಾರ್ಥ್ ಕೂಡ ಶೀಘ್ರದಲ್ಲೇ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ.