ಅಡುಗೆ ಮನೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಿರುವ ಮಿಕ್ಸರ್ ಗ್ರೈಂಡರ್ನಲ್ಲಿ ಕೆಲವು ವಸ್ತುಗಳನ್ನು ಅಪ್ಪಿತಪ್ಪಿಯೂ ರುಬ್ಬಬಾರದು ಎಂದು ನಿಮಗೆ ತಿಳಿದಿದೆಯೇ? ಅಂತಹ ವಸ್ತುಗಳು ಯಾವುವು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
ಕೆಲವರು ಜ್ಯೂಸ್ ತಯಾರಿಸುವಾಗ ಐಸ್ ಕ್ಯೂಬ್ಗಳನ್ನು ಕೂಡ ಮಿಕ್ಸರ್ಗೆ ಹಾಕುತ್ತಾರ್. ಆದರೆ, ಮಿಕ್ಸರ್ನ ಬ್ಲೇಡ್ಗಳಿಗೆ ಐಸ್ ಕ್ಯೂಬ್ಗಳು ಸವಾಲಾಗಬಹುದು. ಇದು ಬ್ಲೇಡ್ಗಳು ಬೇಗ ಹಾಳಾಗಲು ಕಾರಣವಾಗಬಹುದು.
ಅಡುಗೆಮನೆಯಲ್ಲಿ ಮಿಕ್ಸರ್ ಇದ್ದರೆ ನಾವು ಕೈಯಿಂದ ರುಬ್ಬುವ ಕೆಲಸದಿಂದ ಕೊಂಚ ಪರಿಹಾರ ಪಡೆಯಬಹುದು ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗಂತ ತುಂಬಾ ಗಟ್ಟಿಯಾದ ಮಸಾಲೆ ಪದಾರ್ಥಗಳನ್ನು ಮಿಕ್ಸರ್ನಲ್ಲಿ ಹಾಕುವುದರಿಂದ ಅದು ಬೇಗನೆ ಹಾಳಾಗಬಹುದು. ಇದನ್ನು ತಪ್ಪಿಸಲು ಅವುಗಳನ್ನು ಸ್ವಲ್ಪ ಪುಡಿಮಾಡಿ, ಇಲ್ಲವೇ ತುಂಡುಗಳಾಗಿ ಕತ್ತರಿಸಿ ಹಾಕಬಹುದು.
ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಫ್ರೂಟ್ಸ್ ಜ್ಯೂಸ್ ತಯಾರಿಸುವಾಗ ಹಣ್ಣನ್ನು ಬೀಜದೊಂದಿಗೆ ಮಿಕ್ಸಿಗೆ ಹಾಕುತ್ತಾರೆ. ಆದರೆ, ಏಪ್ರಿಕಾಟ್ ಮತ್ತು ಆವಕಾಡೊದಂತಹ ಹಣ್ಣುಗಳಲ್ಲಿ ದೊಡ್ಡ ಬೀಜಗಳು ಇರುತ್ತವೆ. ಇಂತಹ ಹಣ್ಣುಗಳನ್ನು ಬೀಜದೊಂದಿಗೆ ಮಿಕ್ಸಿಗೆ ಹಾಕಿದಾಗ ಬೀಜವು ಬ್ಲೇಡ್ನಲ್ಲಿ ಸಿಲುಕಿಕೊಂಡರೆ, ಬ್ಲೇಡ್ ಮುರಿಯಬಹುದು.
ಮಂಜುಗೆಡ್ಡೆ ಮಾತ್ರವಲ್ಲದೆ, ಹೆಪ್ಪುಗಟ್ಟಿದ ಆಹಾರವನ್ನು ಕೂಡ ಮಿಕ್ಸಿಯಲ್ಲಿ ಹಾಕಿ ರುಬ್ಬಬಾರದು. ಇದು ಬ್ಲೇಡ್ ಅನ್ನು ಹಾನಿಗೊಳಿಸುವುದು ಮಾತ್ರವಲ್ಲ, ಕೆಲವೊಮ್ಮೆ ಮಿಕ್ಸಿ ಸ್ಫೋಟಗೊಳ್ಳುವುದಕ್ಕೂ ಕಾರಣವಾಗಬಹುದು.
ಮಿಕ್ಸಿಯಲ್ಲಿ ಬಿಸಿಯಾದ ಆಹಾರ, ಇಲ್ಲವೇ, ಬಿಸಿಯಾದ ವಸ್ತುಗಳನ್ನು ಹಾರಿ ರುಬ್ಬಬಾರದು. ಕೆಲವೊಮ್ಮೆ ಗ್ರೇವಿ ತಯಾರಿಸಲು ಮಸಾಲೆಯನ್ನು ಫ್ರೈ ಮಾಡಿದ ತಕ್ಷಣ ಬಿಸಿ ಇರುವಾಗಲೇ ಮಿಕ್ಸಿಗೆ ಹಾಕಿ ರುಬ್ಬುತ್ತಾರೆ. ಆದರೆ, ಇದು ಕೆಲವೊಮ್ಮೆ ಅಪಘಾತಕ್ಕೂ ಕಾರಣವಾಗಬಹುದು. ಹಾಗಾಗಿ, ಸಾಧ್ಯವಾದಷ್ಟು ಬಿಸಿ ವಸ್ತುಗಳನ್ನು ಮಿಕ್ಸರ್ಗೆ ಹಾಕಿ ಗ್ರೈಂಡ್ ಮಾಡುವುದನ್ನು ತಪ್ಪಿಸಿ.