ನೇರಳೆ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೂ ಕೂಡಾ ಈ ಹಣ್ಣನ್ನು ತಿನ್ನುವಾಗ ಜಾಗರೂಕರಾಗಿರಬೇಕು.
ಬೆಂಗಳೂರು : ನೇರಳೆ ಹಣ್ಣು ಬಹಳ ರುಚಿಕರವಾದ ಹಣ್ಣು. ಈ ಹಣ್ಣು ತಿನ್ನಲು ರುಚಿಯ ಜೊತೆಗೆ ಉತ್ತಮ ಪೋಷಕಾಂಶಗಳನ್ನು ಕೂಡಾ ಹೊಂದಿದೆ. ಅಲ್ಲದೆ ಈ ಹಣ್ಣು ತಿಂದ ನಂತರ ಬಾಯಿಯೆಲ್ಲಾ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದೇ ಕಾರಣಕ್ಕೆ ಮಕ್ಕಳಿಗೂ ಈ ಹಣ್ಣೆಂದರೆ ಪಂಚ ಪ್ರಾಣ. ನೇರಳೆ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೂ ಕೂಡಾ ಈ ಹಣ್ಣನ್ನು ತಿನ್ನುವಾಗ ಜಾಗರೂಕರಾಗಿರಬೇಕು. ಕೆಲವು ವಸ್ತುಗಳ ಜೊತೆ ನೇರಳೆ ಹಣ್ಣನ್ನು ಸೇವಿಸಲೇಬಾರದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನೇರಳೆ ಹಣ್ಣು ನೋಡುವುದಕ್ಕೆ ಸಣ್ಣದಾಗಿರಬಹುದು. ಆದರೆ ಇದರಲ್ಲಿ ಪೋಷಕಾಂಶಗಳ ಕೊರತೆಯಿರುವುದಿಲ್ಲ. ಇದನ್ನು ತಿಂದರೆ ದೇಹಕ್ಕೆ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಮೆಗ್ನೀಷಿಯಂ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಥೇಚ್ಛವಾಗಿ ದೊರೆಯುತ್ತದೆ.
ಮೊದಲೇ ಹೇಳಿದಂತೆ ನೇರಳೆ ಹಣ್ಣು ಆರೋಗ್ಯದ ಗಣಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು, ಒಸಡುಗಳಲ್ಲಿ ರಕ್ತಸ್ರಾವವನ್ನು ತಡೆಯಲು, ತೂಕ ನಷ್ಟಕ್ಕೆ ನೇರಳೆ ಹಣ್ಣು ಸಹಕಾರಿ. ಆದರೆ ಈ ಹಣ್ಣಿನೊಂದಿಗೆ 3 ವಸ್ತುಗಳನ್ನು ತಿನ್ನಬಾರದು.
ಅರಿಶಿನ ಕೂಡಾ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭ ನೀಡುತ್ತದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಆದರೆ ಇದನ್ನು ಎಂದಿಗೂ ನೇರಳೆ ಹಣ್ಣಿನೊಂದಿಗೆ ತಿನ್ನಬಾರದು. ಈ ಎರಡು ವಸ್ತುಗಳು ಪರಸ್ಪರ ಪ್ರತಿಕ್ರಿಯಿಸುತ್ತವೆ. ಇದರಿಂದ ಹೊಟ್ಟೆ ನೋವು, ಅಲರ್ಜಿಗಳು ಸಂಭವಿಸುವ ಅಪಾಯ ಎದುರಾಗುತ್ತದೆ.
ನೇರಳೆ ಹಣ್ಣನ್ನು ಹಾಲು ಅಥವಾ ಹಾಲಿನ ಉತ್ಪನ್ನಗಳೊಂದಿಗೆ ತಿನ್ನಬಾರದು. ಹಾಲು ಮತ್ತು ನೇರಳೆ ಹಣ್ಣನ್ನು ಒಟ್ಟಿಗೆ ತಿಂದರೆ ಅಜೀರ್ಣ, ಗ್ಯಾಸ್, ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ನೇರಳೆ ಹಣ್ಣು ತಿನ್ನುವ ಮೊದಲು ಅಥವಾ ತಿಂದ ನಂತರ ತಕ್ಷಣ ಹಾಲು ಕುಡಿಯಬಾರದು.
ಉಪ್ಪಿನಕಾಯಿ ತಿನ್ನುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ನೇರಳೆ ಹಣ್ಣು ತಿನ್ನುವ ಮೊದಲು ಅಥವಾ ನಂತರ ಉಪ್ಪಿನಕಾಯಿ ಸೇವಿಸಿದರೆ, ವಾಂತಿ, ಗ್ಯಾಸ್ ಮತ್ತು ಎದೆಯುರಿ ಸಮಸ್ಯೆಗಳು ಎದುರಾಗಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)