ಶನಿ ಸಂಕ್ರಮಣ ಮತ್ತು ಸೂರ್ಯ ಗ್ರಹಣ ಒಟ್ಟಿಗೆ ಸಂಭವಿಸುವ ಕಾರಣ ಮೂರೂ ರಾಶಿಯವರ ಅದೃಷ್ಟ ಹೆಚ್ಚುವುದು .
ಬೆಂಗಳೂರು : ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣ ಮತ್ತು ಸೂರ್ಯಗ್ರಹಣ ಎರಡೂ ಘಟನೆಗಳು ಬಹಳ ಮುಖ್ಯ.ಮುಂದಿನ ವರ್ಷ ಶನಿ ಮತ್ತು ಸೂರ್ಯ ಒಟ್ಟಿಗೆ ದೊಡ್ಡ ಚಲನೆಯನ್ನು ಮಾಡುತ್ತಾರೆ.ಇದು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಶನಿ ಗೋಚರ ದಿನದಂದು ಆಗುವ ಸೂರ್ಯಗ್ರಹಣದಿಂದ ಯಾವ ರಾಶಿಯವರಿಗೆ ಲಾಭವಿದೆ ನೋಡೋಣ.
ಸೂರ್ಯಗ್ರಹಣ ಮತ್ತು ಶನಿ ಸಂಕ್ರಮಣವು 2025 ರ ಮಾರ್ಚ್ 29 ರಂದು ರಾತ್ರಿ 11.01 ಕ್ಕೆ ಒಂದೇ ದಿನದಲ್ಲಿ ಸಂಭವಿಸುತ್ತದೆ.ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುವ ದಿನವದು.ಮತ್ತೆ ಎರಡೂವರೆ ವರ್ಷಗಳ ಕಾಲ ಶನಿ ಗ್ರಹ ಮೀನ ರಾಶಿಯಲ್ಲಿ ಇರುವುದು. ಈ ದಿನ ಸೂರ್ಯಗ್ರಹಣ ಕೂಡಾ ಸಂಭವಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶನಿಯು ಒಮ್ಮೆ ಸಂಕ್ರಮಿಸಿದ ನಂತರ ಮತ್ತೆ ಎರಡೂವರೆ ವರ್ಷಗಳ ಕಾಲ ಅದೇ ರಾಶಿಯಲ್ಲಿ ನೆಲೆಸಿರುತ್ತಾನೆ. ಹಾಗಾಗಿ ಆತ ರಾಶಿ ಜಾತಕದ ಮೇಲೆ ಬೀರುವ ಪರಿಣಾಮ ಎರಡೂವರೆ ವರ್ಷಗಳ ಕಾಲ ಹಾಗೆಯೆ ಇರುವುದು.
ಹಾಗಾಗಿ 2027ರವರೆಗೆ ಶನಿ ಸಂಕ್ರಮಣದ ಕಾರಣ ಮೂರು ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ. ಇವರು ಏನೇ ಮಾಡಿದರೂ ಶನಿ ಕೃಪೆ ಇವರ ಮೇಲೆ ಇರುತ್ತದೆ.
ಸಿಂಹ ರಾಶಿಯವರು ಎಲ್ಲ ರೀತಿಯ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆ. ಶನಿಯ ಪ್ರಭಾವದಿಂದಲೇ ಜೀವನದ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ನಿವೇನೆ ಮಾಡಿದರೂ ಶನಿದೆವನ ಆಶೀರ್ವಾದ ಇದ್ದೇ ಇರುತ್ತದೆ.
ಶನಿದೇವನ ಕೃಪೆಯಿಂದ ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಹಣಕಾಸಿನ ತೊಂದರೆಗಳಿಂದ ಮುಕ್ತರಾಗುತ್ತೀರಿ. ನಿಮ್ಮ ಎಲ್ಲಾ ಕಷ್ಟಗಳಿಗೆ ಪೂರ್ಣ ವಿರಾಂ ಬೀಳುವುದು. ಇನ್ನೇನಿದ್ದರೂ ನಿಮ್ಮದು ನೆಮ್ಮದಿಯ ಬದುಕು.
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಈ ಅವಧಿಯಲ್ಲಿ ಭೌತಿಕ ಸಂತೋಷ ಮತ್ತು ಸಂಪತ್ತು ಹೆಚ್ಚುವುದು.ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ.ಹಣ ಕೂಡಿಡುವಲ್ಲಿ ಯಶಸ್ವಿಯಾಗುವಿರಿ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA ಅದನ್ನು ಖಚಿತಪಡಿಸುವುದಿಲ್ಲ.