ಇನ್ನು ಏಳು ತಿಂಗಳು ಈ ರಾಶಿಯವರಿಗೆ ಕಷ್ಟಗಳೇ ಇಲ್ಲ! ಸೋಲು ಇವರ ಹತ್ತಿರವೂ ಸುಳಿಯದು

30 ವರ್ಷಗಳ ನಂತರ ಶನಿಯು ನಕ್ಷತ್ರ  ಬದಲಾಯಿಸಿ, ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇನ್ನು ಅಕ್ಟೋಬರ್ 17, 2023 ರವರೆಗೆ ಅಂದರೆ ಮುಂದಿನ ಏಳು ತಿಂಗಳವರೆಗೆ ಶತಭಿಷಾ ನಕ್ಷತ್ರದಲ್ಲಿಯೇ ನೆಲೆಯಾಗಿರುತ್ತಾನೆ. ಶತಭಿಷಾ ನಕ್ಷತ್ರದ ಅಧಿಪತಿ ರಾಹು. ರಾಹುವಿನ ನಕ್ಷತ್ರಕ್ಕೆ  ಶನಿಯ ಪ್ರವೇಶವು ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಐದು   ರಾಶಿಯವರು ಏನೇ ಮಾಡಿದರೂ ಯಶಸ್ಸು ಸಿಗಲಿದೆ. 

ಬೆಂಗಳೂರು : 30 ವರ್ಷಗಳ ನಂತರ ಶನಿಯು ನಕ್ಷತ್ರ  ಬದಲಾಯಿಸಿ, ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇನ್ನು ಅಕ್ಟೋಬರ್ 17, 2023 ರವರೆಗೆ ಅಂದರೆ ಮುಂದಿನ ಏಳು ತಿಂಗಳವರೆಗೆ ಶತಭಿಷಾ ನಕ್ಷತ್ರದಲ್ಲಿಯೇ ನೆಲೆಯಾಗಿರುತ್ತಾನೆ. ಶತಭಿಷಾ ನಕ್ಷತ್ರದ ಅಧಿಪತಿ ರಾಹು. ರಾಹುವಿನ ನಕ್ಷತ್ರಕ್ಕೆ  ಶನಿಯ ಪ್ರವೇಶವು ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಐದು   ರಾಶಿಯವರು ಏನೇ ಮಾಡಿದರೂ ಯಶಸ್ಸು ಸಿಗಲಿದೆ. 
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ- ಶನಿಯ ರಾಶಿ ಸಂಕ್ರಮಣವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ರಾಶಿಯವರ ಆರ್ಥಿಕ ಜೀವನ ಸುಧಾರಿಸುತ್ತದೆ. ಆದಾಯದಲ್ಲಿ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ದಿ ಕಾಣುವುದು. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಅದೃಷ್ಟ ಸದಾ ಬೆನ್ನ ಹಿಂದೆ ಇರಲಿದೆ.  ಉದ್ಯಮಿಗಳು ಹೊಸ ಕೆಲಸವನ್ನು ಪ್ರಾರಂಭಿಸಬಹುದು.   

2 /5

ಮಿಥುನ ರಾಶಿ -  ಮಿಥುನ ರಾಶಿಯವರ ಕನಸು ನನಸಾಗುವ ಕಾಲವಿದು. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ವಿದೇಶ ಪ್ರವಾಸ ಮಾಡುವ ಯೋಗವಿದೆ. ಜೀವನದಲ್ಲಿ ಎದುರಾಗುವ ಕಷ್ಟಗಳು ಕರಗಿ ಹೋಗುವುದು.     

3 /5

ಸಿಂಹ ರಾಶಿ-  ಈ ರಾಶಿಯವರ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಬಹಳ ಸಮಯದಿಂದ ಕಾಯುತ್ತಿರುವ ಯಶಸ್ಸು ಈ ಸಮಯದಲ್ಲಿ ಪ್ರಾಪ್ತಿಯಾಗುವುದು. ಉದ್ಯೋಗ ಬದಲಾಯಿಸುವ ಯೋಚನೆ ಇದ್ದರೆ ಇದೇ ಸಕಾಲ. 

4 /5

ತುಲಾ ರಾಶಿ- ತುಲಾ ರಾಶಿಯವರು ವೃತ್ತಿ ಜೀವನದಲ್ಲಿ ದೊಡ್ಡ ಪ್ರಗತಿ ಕಾಣುವರು. ಹೊಸ ಕೆಲಸಕ್ಕೆ ಸೇರಬಹುದು. ಈ ಸಮಯವು ಈ ರಾಶಿಯವರು ಏನೇ ಕೆಲಸ ಮಾಡಿದರೂ ತಾವು ಅಂದು ಕೊಂಡ ಫಲವನ್ನೇ ಪಡೆಯುವರು. ದೊಡ್ಡ ಮಟ್ಟದ ಧನಲಾಭವಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಜೀವನದಲ್ಲಿ ಸಂತೋಷ ಮಾತ್ರ ಇರುತ್ತದೆ.   

5 /5

ಧನು ರಾಶಿ- ಶನಿಯ ಸಂಕ್ರಮಣವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು  ಕಟ್ಟಿಟ್ಟ ಬುತ್ತಿ. ಬಡ್ತಿ, ಸಂಬಳ ಹೆಚ್ಚಳಕ್ಕೆ ದೊಡ್ಡ ಮಟ್ಟದ  ಅವಕಾಶಗಳಿವೆ.  ನಿಮ್ಮ ಮನಸ್ಸಿನ ಇಚ್ಚೆಯನ್ನು ಈ ಬಾರಿ ಶನಿ ಮಹಾತ್ಮ ಈಡೇರಿಸಲಿದ್ದಾನೆ. ದೊಡ್ಡ ಮಟ್ಟದ ಆದಾಯ ಕೈ ಸೇರುತ್ತದೆ.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)