SBI vs Post office : ಉಳಿತಾಯ ಖಾತೆ ತೆರೆಯುವ ಮುನ್ನ ತಿಳಿಯಿರಿ ಯಾವುದರಲ್ಲಿದೆ ಅಧಿಕ ಲಾಭ

ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಏನು ಪ್ರಯೋಜನ ಮತ್ತು ಅಂಚೆ ಕಚೇರಿಯಲ್ಲಿ ಅದೇ ಖಾತೆಯನ್ನು ತೆರೆದರೆ ಗ್ರಾಹಕರಿಗೆ ಏನು ಲಾಭವಾಗಲಿದೆ ಎನ್ನುವುದನ್ನು  ನೋಡೋಣ..

ನವದೆಹಲಿ : ಇಂದಿನ ಕಾಲದಲ್ಲಿ ಉಳಿತಾಯ ಖಾತೆಯು ಒಂದು ಮೂಲಭೂತ ಅಗತ್ಯವಾಗಿದೆ. ನೀವು ಉಳಿತಾಯ ಖಾತೆಯನ್ನು ತೆರೆಯುವ ಬಗ್ಗೆ ಯೋಚಿಸುತ್ತಿದ್ದರೆ,  ಬಡ್ಡಿದರಗಳು, ಮಿನಿಮಮ್ ಬ್ಯಾಲೆನ್ಸ್  ಚಾರ್ಜ್ ಮತ್ತು ಇತರ ಪ್ರಮುಖ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಉಳಿತಾಯ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ (ಅಂಚೆ ಕಚೇರಿ) ತೆರೆಯಬಹುದು. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಏನು ಪ್ರಯೋಜನ ಮತ್ತು ಅಂಚೆ ಕಚೇರಿಯಲ್ಲಿ ಅದೇ ಖಾತೆಯನ್ನು ತೆರೆದರೆ ಗ್ರಾಹಕರಿಗೆ ಏನು ಲಾಭವಾಗಲಿದೆ ಎನ್ನುವುದನ್ನು  ನೋಡೋಣ..
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಪ್ರಸ್ತುತ, ಗ್ರಾಹಕರು ಎಸ್‌ಬಿಐನಲ್ಲಿ ಉಳಿತಾಯ ಖಾತೆ ತೆರೆದರೆ, 2.70 ಶೇ ದಷ್ಟು ವಾರ್ಷಿಕ ಬಡ್ಡಿ ಪಡೆಯುತ್ತಾರೆ.  ಅದೇ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ವಾರ್ಷಿಕ 4% ಬಡ್ಡಿ ಸಿಗುತ್ತದೆ.

2 /4

ಎಸ್‌ಬಿಐನಲ್ಲಿ ಉಳಿತಾಯ ಖಾತೆ ತೆರೆದರೆ ಎಟಿಎಂ, ಪಾಸ್‌ಬುಕ್ ಹೊರತುಪಡಿಸಿ, 10 ಚೆಕ್ ಲೀಫ್  ಉಚಿತವಾಗಿ ಸಿಗುತ್ತದೆ.  ಮೊಬೈಲ್ ಬ್ಯಾಂಕಿಂಗ್, ಎಸ್‌ಎಂಎಸ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಕೂಡಾ ಪಡೆಯಬಹುದು. ನೀವು YONO ಅಪ್ಲಿಕೇಶನ್‌ನ ವೈಶಿಷ್ಟ್ಯಗಳು ಸಹ ಲಭ್ಯವಿರುತ್ತದೆ. ಇದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳಬೇಕಾಗುತ್ತದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಚೆಕ್ ಬುಕ್, ಎಟಿಎಂ ಕಾರ್ಡ್, ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವೂ ಲಭ್ಯವಿದೆ. ಇದರಲ್ಲಿಯೂ   ಮಿನಿಮಮ್ ಬ್ಯಾಲೆನ್ಸ್  ಉಳಿಸಿಕೊಳ್ಳುವುದು ಅಗತ್ಯ. ಹಣಕಾಸು ವರ್ಷದ ಕೊನೆಯಲ್ಲಿ ಮಿನಿಮಮ್ ಬ್ಯಾಲೆನ್ಸ್  ೫೦೦ ರೂ ಉಳಿಯದೇ ಹೋದರೆ ೧೦೦ ರೂ ಚಾರ್ಜ್ ಮಾಡಲಾಗುತ್ತದೆ.   

3 /4

ಎಸ್‌ಬಿಐನಲ್ಲಿ ಹಲವು ರೀತಿಯ ಉಳಿತಾಯ ಖಾತೆಗಳಿವೆ. ಸಾಮಾನ್ಯವಾಗಿ, 1000 ರೂ.ಗೆ ಉಳಿತಾಯ ಖಾತೆಯನ್ನು ತೆರೆಯಬಹುದು. ಇದರಲ್ಲಿ ಹಣವನ್ನು ಠೇವಣಿ ಇಡಲು ಯಾವುದೇ ಮಿತಿಯಿಲ್ಲ.  ಅಂಚೆ ಕಚೇರಿಯಲ್ಲಿ ಕೇವಲ 500 ರೂಗಳಿಗೆ ಉಳಿತಾಯ ಖಾತೆಯನ್ನು ತೆರೆಯಬಹುದು. ಇದರಲ್ಲಿಯೂ  ಠೇವಣಿಗೆ ಯಾವುದೇ ಮಿತಿಯಿಲ್ಲ.

4 /4

ಬ್ಯಾಂಕಿನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಎಲ್ಲಿಯೇ ಖಾತೆ ತೆರೆದರು, ಉಳಿತಾಯದ ಮೇಲಿನ ಬಡ್ಡಿಗೆ ಒಂದು ಮಿತಿಯ ನಂತರ ತೆರಿಗೆ ಪಾವತಿಸಬೇಕಾಗುತ್ತದೆ.  ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಟಿಟಿಎ ಅಡಿಯಲ್ಲಿ,  10,000 ರೂ.ವರೆಗಿನ ಆದಾಯದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ.  ಅದಕ್ಕಿಂತ ಹೆಚ್ಚಿನ ಬಡ್ಡಿ ಪಡೆದರೆ ಸ್ಲ್ಯಾಬ್ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ. ಎಸ್‌ಬಿಐ ಮತ್ತು ಅಂಚೆ ಕಚೇರಿ ಎರಡೂ ಉಳಿತಾಯ ಖಾತೆಗೆ ಇದು ಅನ್ವಯಿಸುತ್ತದೆ.