SBI Alert! ಈ ಆಪ್ ಗಳನ್ನು ಅಪ್ಪಿ-ತಪ್ಪಿಯೂ ಬಳಕೆ ಮಾಡಬೇಡಿ, ಇಲ್ದಿದ್ರೆ ನಿಮ್ಮ ಅಕೌಂಟ್ '0' ಆಗಲಿದೆ

SBI Alert! ಇದಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಹೊರಡಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯ ಅಡಿಯಲ್ಲಿ ಬ್ಯಾಂಕ್ ಆನ್ಲೈನ್ ವಹಿವಾಟಿಗೆ (Online Transaction) ಖಂಡಿತವಾಗಿಯೂ ಸುರಕ್ಷಿತವಲ್ಲದ ಎರಡು ಅಪ್ಪ್ಲಿಕೆಶನ್ ಗಳ ಕುರಿತು ಮಾಹಿತಿ ನೀಡಿದೆ.

ನವದೆಹಲಿ: SBI Alert! ಕೊರೊನಾ ವೈರಸ್ (Coronavirus) ನ ಎರಡನೆಯ ಅಲೆಯ ಹಿನ್ನೆಲೆ ಇದೀಗ ಮತ್ತೊಮ್ಮೆ ಜನರು ಕ್ಯಾಶ್ ಮನಿಯಿಂದ ಪ್ಲಾಸ್ಟಿಕ್ ಮನಿಯತ್ತ ತಮ್ಮ ಮುಖ ಮಾಡಿದ್ದಾರೆ. ಇದು ಎಷ್ಟು ಸುರಕ್ಷಿತವಾಗಿದೆಯೋ, ಅಷ್ಟೇ ಅಪಾಯಕಾರಿ ಕೂಡ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ಗ್ರಾಹಕರನ್ನು ಯಾವುದೇ ರೀತಿಯ ವಂಚನೆಯಿಂದ ಪಾರು ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ನೋಟಿಫಿಕೇಶನ್ ಜಾರಿಗೊಳಿಸಿದೆ. ಈ ಕುರಿತು ನೀವು ಕೂಡ ಮಾಹಿತಿ ಪಡೆಯಬೇಕಾದ ಅವಶ್ಯಕತೆ ಇದೆ.

 

ಇದನ್ನೂ ಓದಿ-  Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ SBI - ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, "ಗ್ರಾಹಕರು ತಮ್ಮ ಬ್ಯಾಂಕಿಂಗ್ ವಿವರಗಳ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಅಥವಾ ಫೋನ್ ಅಥವಾ ಕಂಪ್ಯೂಟರ್ ಮೂಲಕ ಯಾರೊಬ್ಬರಿಗೂ ಕೂಡ ತಮ್ಮ ಬ್ಯಾಂಕ್ ಖಾತೆಯನ್ನು ತಲುಪಲು ಅನುಮತಿಸಬಾರದು ಎಂದು ವಿನಂತಿಸುವುದಾಗಿ ಹೇಳಿದೆ. ಒಂದು ವೇಳೆ ಆಪತ್ಕಾಲದಲ್ಲಿ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಫಂಡ್ ಟ್ರಾನ್ಸ್ ಫರ್ ಮಾಡಲು ಬಯಸುತ್ತಿದ್ದರೆ ಬ್ಯಾಂಕ್ ನ ಡಿಜಿಟಲ್ ಬ್ಯಾಂಕಿಂಗ್ ಗಾಗಿ ಇರುವ YONO App ಹಾಗೂ BHIM ಸೇವೆಗಳನ್ನು ಮನೆಯಲ್ಲಿ ಕುಳಿತು ಉಪಯೋಗಿಸಬಹುದು" ಎಂದು ಎಚ್ಚರಿಕೆ ನೀಡಿದೆ.

2 /4

2. ಬ್ಯಾಂಕ್ ವಂಚನೆ (Banking Fraud) ಪ್ರಕರಣಗಳಲ್ಲಿ ಏರಿಕೆ - ಕೊರೊನಾ ಕಾಲದಲ್ಲಿ ಬಂಕುಗಳ ವಂಚನೆ ಪ್ರಕರಣದಲ್ಲಿ ಭಾರಿ ಏರಿಕೆಯಾಗಿದೆ. ಜನರಿಗೆ ಪಂಗನಾಮ ಹಾಕಲು ಸೈಬರ್ ಖದೀಮರು ದಿನ ನಿತ್ಯ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿದು ಫೇಕ್ ಆಪ್ ಹಾಗೂ ಫೇಕ್ ಬ್ಯಾಂಕ್ ಅಧಿಕಾರಿಯಾಗಿ ವರ್ತಿಸುತ್ತ ಕರೆ ಮಾಡುತ್ತಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು SBI ತನ್ನ ಗ್ರಾಹಕರಿಗೆ SMS, ಇ-ಮೇಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಫೇಕ್ ಕರೆಗಳಿಂದ ಎಚ್ಚರಿಕೆಯಿಂದಿರಲು ಸೂಚಿಸಿದೆ.

3 /4

3. ಈ ರೀತಿಯ ಜನರನ್ನು ವಂಚನೆಗೆ ಗುರಿಯಾಗಿಸಲಾಗುತ್ತಿದೆ - ವಂಚನೆಗೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಬ್ಯಾಂಕ್ " ಇತ್ತೀಚಿನ ದಿನಗಳಲ್ಲಿ ವಂಚಕರು ಗ್ರಾಹಕರಿಗೆ KYC ಡಾಕ್ಯುಮೆಂಟ್ ಕೇಳುವುದರ ಜೊತೆಗೆ Quick View ಆಪ್ ಗಳ ಮೂಲಕ ಅವರ ಸ್ಮಾರ್ಟ್ ಫೋನ್ ಗೆ ಪ್ರವೇಶ ನೀಡಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಯಾವುದೇ ಒಬ್ಬ ಗ್ರಾಹಕರು ಅವರ ಈ ಬಲೆಗೆ ಬಿದ್ದರೆ, ಅವರ ಸ್ಮಾರ್ಟ್ ಫೋನ್ ನಿಂದ KYC ಹೆಸರಿನಲ್ಲಿ ಎಲ್ಲ ರೀತಿಯ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿ ಕದಿಯುತ್ತಾರೆ. ಇದರಲ್ಲಿ ಗ್ರಾಹಕರ ಖಾತೆಯ ID, ಪಾಸ್ವರ್ಡ್ ಸೇರಿದಂತೆ ಇತರೆ ಮಾಹಿತಿಗಳು ಕೂಡ ಶಾಮೀಲಾಗಿವೆ.

4 /4

4. ವಂಚನೆಯಿಂದ ಪಾರಾಗಲು ಈ ಸಂಗತಿಗಳನ್ನು ಗಮನದಲ್ಲಿಡಿ - ಖದೀಮರು ಎಸಗುತ್ತಿರುವ ಈ ವಂಚನೆಯಿಂದ ಪಾರಾಗಲು ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ನಿಮಗೂ ಕೂಡ ಇಂತಹ ಕರೆಗಳು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು ಅವರ ಆಮೀಷಕ್ಕೆ ಒಳಗಾಗಬೇಡಿ, ಕರೆಯನ್ನು ಕಟ್ ಮಾಡಿ ಆ ಸಂಖ್ಯೆಯನ್ನು ಬ್ಲಾಕ್ ಮಾಡಿ. ಇದಲ್ಲದೆ, ಯಾವುದೇ ಅಜ್ಞಾತ ವ್ಯಕ್ತಿಗೆ ನಿಮ್ಮ ಫೋನ್, ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನ QUCI ಕಂಟ್ರೋಲ್ ನೀಡಬೇಡಿ. ಯಾವುದೇ ಖಾಸಗಿ ವ್ಯಕ್ತಿಗೆ ನಿಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದರಿಂದ ದೂರವಿರಿ.