UIDAI Toll Free Helpline: Aadhaar Cardಗೆ ಸಂಬಂಧಿಸಿದ ಈ ನಂಬರ್ ಈಗಲೇ ಸೇವ್ ಮಾಡಿ

Aadhaar Toll Free Helpline Number - ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ UIDAI, ಇನ್ಮುಂದೆ ಆಧಾರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಅವುಗಳನ್ನು ಕೇವಲ ಒಂದು ಫೋನ್ ಮಾಡುವ ಮೂಲಕ ಪರಿಹರಿಸಿಕೊಳ್ಳಿ ಎಂದಿದೆ. ಈ ಸೌಕರ್ಯ ದೇಶದ ಒಟ್ಟು 12 ಭಾಷೆಗಳಲ್ಲಿ ಲಭ್ಯವಿದೆ. ಇಂತಹ ಸಂದರ್ಭದಲ್ಲಿ ನಿಮಗೂ ಕೂಡ ನಿಮ್ಮ ಆಧಾರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾಗಿದ್ದರೆ ಥಟ್ ಅಂತ ಈ ನಂಬರ್ ಸೇವ್ ಮಾಡಿಕೊಳ್ಳಿ

ನವದೆಹಲಿ: Aadhaar Toll Free Helpline Number - ನಿಮಗೂ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಇದೀಗ ನೀವು ಅದನ್ನು ಚಿಟಿಕೆ ಹೊಡೆಯೋದ್ರಲ್ಲಿ ಫೋನ್ ಕರೆ ಮಾಡುವ ಮೂಲಕ ಪರಿಹರಿಸಬಹುದು. ಯುಐಡಿಎಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಈ ಸಹಾಯವಾಣಿ ಸಂಖ್ಯೆ 1947. ಈ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದು ಸಹ ತುಂಬಾ ಸುಲಭ, ಏಕೆಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಅದೇ ವರ್ಷ. ಈ 1947 ಸಂಖ್ಯೆ ಟೋಲ್ ಫ್ರೀ ಸಂಖ್ಯೆ (UIDAI Helpline 1947) ಆಗಿದೆ, ಇದು ವರ್ಷವಿಡೀ IVRS ಮೋಡ್‌ನಲ್ಲಿ 24 ಗಂಟೆಗಳ ಕಾಲ ಲಭ್ಯವಿರಲಿದೆ.
 

ಇದನ್ನೂ ಓದಿ-Aadhaar Card: ಆಧಾರ್ ಕಾರ್ಡ್ ಗೆ ತಕ್ಷಣ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿ, ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ!
 

ಈ ಸಹಾಯವಾಣಿ ಸಂಖ್ಯೆ ಜನರಿಗೆ ಆಧಾರ್ ದಾಖಲಾತಿ ಕೇಂದ್ರಗಳು, ದಾಖಲಾತಿಯ ನಂತರ ಆಧಾರ್ ಸಂಖ್ಯೆಯ ಸ್ಥಿತಿ ಮತ್ತು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಿದೆ. ಇದಲ್ಲದೆ, ಯಾರೊಬ್ಬರ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಇನ್ನೂ ಅಂಚೆ ಮೂಲಕ ಸ್ವೀಕರಿಸದಿದ್ದರೆ, ಈ ಸೌಲಭ್ಯದ ಸಹಾಯದಿಂದ ದರ ಮಾಹಿತಿಯನ್ನು ಪಡೆಯಬಹುದು.


ಇದನ್ನೂ ಓದಿ- ನಿಮ್ಮ Aadhar Card ಕಳೆದುಕೊಂಡಿದ್ದೀರಾ? ಹಾಗಾದ್ರೆ ತಕ್ಷಣವೆ ಈ ರೀತಿ ಲಾಕ್ ಮಾಡಿಸಿ!
 

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ  UIDAI
ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ UIDAI, ಆಧಾರ್ ಗೆ ಸಂಬಂಧಿಸಿದ ಈ ಸಹಾಯವಾಣಿ ವಾರದ ಏಳು ದಿನ 24 ಗಂಟೆ  ಲಭ್ಯವಿರಲಿದೆ ಎಂದಿದೆ 1947 (UIDAI Toll Free Number 1947) ಗೆ ಕರೆ ಮಾಡಿದಾಗ ಈ ಸೌಕರ್ಯ ನಿಮಗೆ IVRS ಮೂಲಕ  24x7 ಲಭ್ಯವಾಗಲಿದೆ. ಏಜೆಂಟ್ ಜೊತೆಗೆ ಮಾತನಾಡಲು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೆ ಹಾಗೂ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ಮಾತುಕತೆ ನಡೆಸಬಹುದಾಗಿದೆ ಎಂದು ಹೇಳಿದೆ.

 

ಇದನ್ನೂ ಓದಿ- Aadhaar card ನಲ್ಲಿ ಫೋಟೋ ಚೆನ್ನಾಗಿಲ್ವಾ? ಅದನ್ನ ಚೇಂಜ್ ಮಾಡಬೇಕಾ? ಹೇಗೆ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಆಧಾರ್ ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳ ಸಮಾಧಾನಕ್ಕಾಗಿ UIDAI 1947 ಹೆಲ್ಪ್ ಲೈನ್ ನಂಬರ್ ನೀಡಿದೆ. ಈ ಸಂಖ್ಯೆಗೆ ಕರೆ ಮಾಡಿ ನೀವು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಧಾರ್ ನ ಈ ಸೇವೆ ಒಟ್ಟು 12 ಭಾಷೆಗಳಲ್ಲಿ ಅಂದರೆ, ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒಡಿಯಾ, ಬಂಗಾಳಿ, ಅಸ್ಸಾಮಿ ಹಾಗೂ ಉರ್ದು ಭಾಷೆಗಳಲ್ಲಿ ಲಭ್ಯವಿರಲಿದೆ.

2 /4

2. ಮೇಲ್ ಕೂಡ ಮಾಡಬಹುದು - ಮೇಲ್ ಮಾಡುವ ಮೂಲಕ ಕೂಡ ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ನೀವು help@uidai.gov.in ಮೇಲ್ ಐಡಿಗೆ ನಿಮ್ಮ ಸಮಸ್ಯೆಯನ್ನು ವಿವರಿಸಿ ಮೇಲ್ ಮಾಡಬೇಕು.

3 /4

3. UIDAI ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ - UIDAI ಅಧಿಕಾರಿಗಳು ಕಾಲಕಾಲಕ್ಕೆ ನಾಗರಿಕರಿಂದ ಬರುವ ಮೇಲ್ ಗಳನ್ನು ಪರಿಶೀಲಿಸುತ್ತಾರೆ ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ದೂರು ನಿರ್ವಹಣಾ ಸೆಲ್ ಜನರಿಂದ ಬರುವ ಮೇಲ್ ಗಳಿಗೆ ಪ್ರತಿ ಮೇಲ್ ಕಳುಹಿಸುವ ಮೂಲಕ ಉತ್ತರ ನೀಡುತ್ತದೆ.

4 /4

4. ವೆಬ್ ಸೈಟ್ ಮೂಲಕ ಕೂಡ ನೀವು ದೂರು ದಾಖಲಿಸಬಹುದು - 1. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ನೀವು UIDAI ಅಧಿಕೃತ ತಾಣಕ್ಕೆ (https://resident.uidai.gov.in/)  ಭೇಟಿ ನೀಡಬೇಕು .  2.  ಬಳಿಕ ಸಂಪರ್ಕ ಹಾಗೂ ಸಮರ್ಥನೆಗಾಗಿ 'Ask Aadhaar' ವಿಭಾಗಕ್ಕೆ ಹೋಗಬೇಕು. 3. ಇಲ್ಲಿ ನೀವು ಓರ್ವ ಆಧಾರ್ ಎಕ್ಸಿಕ್ಯೂಟಿವ್ ಜೊತೆಗೆ ಲಿಂಕ್ ಆಗುವಿರಿ. ನೀವು ಅವರೊಂದಿಗೆ ನಿಮ್ಮ ಸಮಸ್ಯೆಗಳ ಕುರಿತು ಮಾತುಕತೆ ನಡೆಸಬಹುದು. ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ನಿಮಗೆ ಸಹಾಯ ಮಾಡಲಿದ್ದಾರೆ.